ಹಾವೇರಿ,ಜು.27:12ನೇ ಶತಮಾನದಲ್ಲಿ ಬಸವಣ್ಣನವರ ಅನುಯಾಯಿಯಾಗಿದ್ದ ಶಿವಶರಣ ಹಡಪದ ಅಪ್ಪಣ್ಣ ಅವರು ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆ ಶ್ರಮಿಸಿದ ಮಹಾನ್ ಶರಣರಾಗಿದ್ದಾರೆ. ಅವರು ವಚನಗಳು ಹಾಗೂ ಚಿಂತನೆಗಳು ಮನುಕುಲದ ಉದ್ಧಾರಕ್ಕೆ ದಾರಿದೀಪಗಳಾಗಿವೆ’ ಎಂದು ಸಭಾಪತಿ ಬಸವರಾಜ ಹೊರಟ್ಟಿ ಅವರು ಹೇಳಿದರು.
ನಗರದ ಜಿಲ್ಲಾ ಗುರು ಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾಪಂಚಾಯತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾವೇರಿ ಹಾಗೂ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘ ಹಾವೇರಿ ಇವರ ಸಹಯೋಗದಲ್ಲಿ ಶ್ರೀ ಶಿವಶರಣ ಹಡಪದ ಅಪ್ಪಣ್ಣನ 889 ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ, ಹಡಪದ ಅಪ್ಪಣ್ಣ ಭಾವಚಿತ್ರಕ್ಕೆ ಪುಷ್ಪರ್ಚನೆ ಸಲ್ಲಿಸಿ ನಂತರ ಅವರು ಮಾತನಾಡಿದರು.
ಬಸವಣ್ಣ ನವರ ಮೇಲಿದ್ದ ಅಪಾರ ಪ್ರೀತಿ, ವಿಶ್ವಾಸ, ನಂಬಿಕೆ ಹಾಗೂ ಜಾತ್ಯತೀತ ಮನೋಭಾವನೆ ಇಟ್ಟುಕೊಂಡು ಹಡಪದ ಅಪ್ಪಣ್ಣ ಅವರು ಕಾಯಕವೇ ಕೈಲಾಸ ವಚನ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆ, ಜಾತಿವ್ಯವಸ್ಥೆ, ಕಂದಾಚಾರ, ಮೂಡನಂಬಿಕೆ, ವಿರುದ್ದ ಹೋರಾಡಿ ಸಮಾಜದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲು ತಮ್ಮ ವಚನಗಳ ಮೂಲಕ ಶ್ರಮಿಸಿರುವುದು ಅವಿಸ್ಮರಣಿಯ ಎಂದರು.
ಸಮಾಜದಲ್ಲಿ ಹಿಂದುಳಿದ, ಶೋಷಣೆಗೊಳಗಾದ ಸಮಾಜವನ್ನು ಗುರುತಿಸಿ ಅಭಿವೃದ್ಧಿ ಹೊಂದಲು ಸಹಕಾರ ಮಾಡಬೇಕು. ಎಲ್ಲ ಸಮಾಜದ ಮಕ್ಕಳು ಉನ್ನತ ಶಿಕ್ಷಣ ಪಡೆದು ಸಮಾಜದ ಮುಖ್ಯ ವಾಹಿನಿಗೆ ಬರಬೇಕು ಎಂದುರು.
ಬಸವಣ್ಣ ನವರ ನಡೆ, ನುಡಿ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಹಡಪದ ಅಪ್ಪಣ್ಣ ನವರು ದೇಶ ಕಂಡ ಅಪರೂಪದ ವ್ಯಕ್ತಿತ್ವವುಳ್ಳವರು. ಅವರು ನಾಗರೀಕ ಸಮಾಜಕ್ಕೆ ಮುಂತಾದ ಸೇವೆ ಸಲ್ಲಿಸಿದವರಲ್ಲಿ ಒಬ್ಬರಾಗಿದ್ದಾರೆ. ಎಂದರು.
ಶಾಸಕ ರುದ್ರಪ್ಪ ಲಮಾಣಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಈ ಸಮಾಜ ಲಿಂಗಾಯತ ಸಮಾಜ ಸೇರಿದರೂ ಸಹ. ಆಚಾರ, ವಿಚಾರಗಳು ಬೇರೆ ಬೇರೆ ಯಾಗಿವೆ ಎಂದು ಹೇಳಿದರು. ಸ್ಪರ್ಧಾತ್ಮಕ ಯುವದಲ್ಲಿ ಸಮಾಜದ ಜನರು ಕೆಲಸ ಮಾಡುವುದರ ಜೊತೆ ಮಕ್ಕಳಿಗೆ ವಿದ್ಯಾಭ್ಯಾಸ ನೀಡಿದರೆ, ಆ ಕುಟುಂಬ ಆರ್ಥಿಕ ಸುಧಾರಣೆಯಾಗುವುದು. ನಾನು ಸಹ ಕಲಿತು ಬಂದ ಶಾಲೆಗಳಿಗೆ ಹಿಂದುಳಿದ ವರ್ಗದ ಮಕ್ಕಳಿಗೆ ಉಚಿತ ಶಿಕ್ಷಣ ನೀಡುತ್ತಿರುವುದು ಹೆಮ್ಮೆ ಇದೆ ಎಂದರು.
ಬಸವರಾಜ ಹೊರಟ್ಟಿಯವರು 10 ಲಕ್ಷ ರೂ. ಈ ಸಮಾಜಕ್ಕೆ ನೀಡಿದ್ದರು. ಮುಂದಿನ ದಿನಗಳಲ್ಲಿ ನಿಗಮ ಉದ್ಘಾಟನೆ ಮಾಡಲಾಗುವುದು ಎಂದು ತಿಳಿಸಿದರು.
ಸಮಾಜ ಸೇವಕ ಹಾಗೂ ಕರ್ನಾಟಕ ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ. ಎಸ್ ಕೊರಿಶೆಟ್ರ ಮಾತನಾಡಿ, ಅನುಭವ ಮಂಟಪದಲ್ಲಿದ್ದ ಕಾಯಕ ಯೋಗಿ ಶರಣರ ಜಯಂತಿಗಳನ್ನು ಬಸವಣ್ಣ ಜಯಂತಿ ದಿನಗಳಂದು ಆಚರಣೆ ಮಾಡಿದರೆ ಎಲ್ಲ ವರ್ಗದವರಿಗೂ ಗೌರವ ಸಿಗುತ್ತದೆ ಎಂದರು.
ಶಿವಶರಣ ಹಡಪದ ಅಪ್ಪಣ್ಣ ಅವರ ಹನ್ನೆರಡನೇ ಶತಮಾನದ ಜೀವ ಸಾಧನೆ ಹಾಗೂ ವಚನಗಳ ಬಗ್ಗೆ ನಿವೃತ್ತ ಶಿಕ್ಷಕ ಹನುಮಂತ ಗೌಡ ಗೊಲ್ಲರ ನಿವೃತ ಉಪನ್ಯಾಸಕರು ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ “ಅಗ್ನಿ ಚಂಡು”ಎಂಬ ಕಿರುಪುಸ್ತಕ ಹಾಗೂ ಮಾಜಿ ಸೈನಿಕರರನ್ನು ಸಮಾಜ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಹುಕ್ಕೇರಿ ಮಠದ ಮ.ನಿ.ಪ್ರ ಸದಾಶಿವ ಮಹಾಸ್ವಾಮಿಗಳು. ಹೊಸಮಠದ ಬಸವಶಾಂತಲಿಂಗ ಮಹಾಸ್ವಾಮಿಗಳು ಸಾನಿಧ್ಯ ವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಹೆಚ್ಚುವರಿ ಪೆÇಲೀಸ್ ಅದೀಕ್ಷಕ ಸಿ. ಗೋಪಾಲ್, ಜಿಲ್ಲಾ ಹಿಂದುಳಿದ ಕಲ್ಯಾಣಾಧಿಕಾರಿ ಪ್ರವೇಣ್ ಕೆ.ಎನ್, ರಾಜ್ಯ ಹಡಪದ ಅಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ಸಂಚಾಲಕ ಗುಡ್ಡಪ್ಪ ಚ. ಮಲ್ಲೂರ, ಜಿಲ್ಲಾ ಆರೋಗ್ಯ ಸಮನ್ವಯ ಸಮಿತಿ ಸದಸ್ಯ ಬಸವರಾಜ ಈ. ಹಡಪದ, ಸಹ ಸಂಚಾಲಕ ಗಂಗಾಧರ ಎಮ್ಮಿಗನೂರ, ಸಮಾಜದ ಮುಖಂಡರು ಹಾಗೂ ವಿಧ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.
ಸಿ.ಜಿ ಮಲ್ಲೂರ ಸ್ವಾಗತಿಸಿ, ವಂಧಿಸಿದರು.