
ಗದಗ,ಜು4 : ಶಿವಶರಣ ಹಡಪದ ಅಪ್ಪಣ್ಣನವರ ಜಯಂತಿಯನ್ನು ಜಿಲ್ಲಾಡಳಿತ ಭವನದ ಮುಖ್ಯ ಸಭಾಂಗಣದಲ್ಲಿ ಆಚರಿಸಲಾಯಿತು. ಗದಗ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್.ಅವರು ಹಡಪದ ಅಪ್ಪಣ್ಣನವರ ಭಾವಚಿತ್ರಕ್ಕೆ ಪುಷ್ಪ ಸಮರ್ಪಿಸಿ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಗದಗ ಬೆಟಗೇರಿ ನಗರಸಭೆ ಅಧ್ಯಕ್ಷೆ ಉಷಾ ದಾಸರ, ಅಪರ ಜಿಲ್ಲಾಧಿಕಾರಿ ಮಾರುತಿ ಎಂ.ಪಿ, ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕ ವೀರಯ್ಯ ಸ್ವಾಮಿ, ಹಡಪದ ಸಮಾಜದವರಾದ ಮೋಹನ ಚಂದಪ್ಪನವರ, ಎ.ವಿ. ಪ್ರಭು, ಕಲ್ಲಪ್ಪ ಹಡಪದ, ಕೆ.ಬಿ.ಕುಡಗುಂಟಿ, ಶಂಕರ ಹೆಸರೂರ, ಪುಟ್ಟರಾಜ ಹಾಲಕೇರಿ, ಮಲ್ಲಿಕಾರ್ಜುನ ಕಂಡಮ್ಮನವರ, ಗುರುನಾಥ, ಪಂಚಾಕ್ಷರಿ, ಸತೀಶ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದರು.