ಹಡಗಲಿ ನೂತನ ಶಾಸಕರಿಗೆ ಅಭಿನಂದನ ಸಮಾರಂಭ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.22: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ಜಯ ಸಾಧಿಸಿದ ಬಿಜೆಪಿಯ ಏಕೈಕ ಅಭ್ಯರ್ಥಿ ಹೂವಿನ ಹಡಗಲಿ ಕ್ಷೇತ್ರದ ಶಾಸಕರಾದ ಕೃಷ್ಣ ನಾಯ್ಕ ಅವರನ್ನು ಅಭಿನಂದನ ಸಮಾರಂಭ ನಂದಿಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಮತ್ತು ಕ್ಷೇತ್ರದ ಕಾರ್ಯಕರ್ತರಿಂದ ಸನ್ಮಾನ ಸಮಾರಂಭ  ನಡೆಯಿತು ದೀಪ ಹಚ್ಚುವ ಮೂಲಕ  ಸಭೆ ಉದ್ಘಾಟಿಸಿದ ಮಾತನಾಡಿದ ಎಂಪಿ ಎಂ ಸುಮಾ ನೂತನವಾಗಿ ಅಯ್ಕೆ ಯಾದ ಶಾಸಕರಾದ ಕೃಷ್ಣ ನಾಯ್ಕ ಗೆ ಸನ್ಮಾನ ಮಾಡಿ ಮಾತನಾಡಿದ ಹಡಗಲಿಯನ್ನು ದಿ.ಮಾಜಿ ಉಪ ಮುಖ್ಯಮಂತ್ರಿ  ಎಂಪಿ ಪ್ರಕಾಶ್ ರಾಜಕೀಯವಾಗಿ ಕರ್ನಾಟಕಲ್ಲಿ ಹೆಸರು ಮಾಡಿದ್ದರು ಅವರ ರಾಜ್ಯದಲ್ಲಿಯೇ ಹೂವಿನ ಹಡಗಲಿಯನ್ನು ಗುರುತಿಸುವಲ್ಲಿ ಶ್ರಮ ಪಟ್ಟಿದ್ದರು ಇಂತಹವರ ಹೆಸರಿಗೆ ಕಳಂಕ ತಂದವರಿಗೆ ಮತ್ತು ಅವರ ಕುಟುಂಬವನ್ನು ರಾಜಕೀಯವಾಗಿ ತುಳಿದವರಿಗೆ ಈ ಕ್ಷೇತ್ರದ ಜನ ತಮ್ಮ ಗ್ರಾಮಕ್ಕೆ ಕಳುಹಿಸಿದ್ದಾರೆ ಇವರ ಸಲಹೆ ನಮ್ಮ ಕ್ಷೇತ್ರದ ಜನಕ್ಕೆ ಅವಶ್ಯಕತೆ ಇವರ ಸಲಹೆ ಪಡೆದವರು ಹರಪನಹಳ್ಳಿಯಲ್ಲಿ ಏನಾಗಿ ಹೋಗಿದ್ದಾರೆ ಎಂದರು
ಈ ಅಖಂಡ ಬಳ್ಳಾರಿ ಜಿಲ್ಲೆಯಲ್ಲಿ ನಮ್ಮ ತಂದೆ ಎಲ್ಲಾ ಇಲಾಖೆ ತರುವಲ್ಲಿ ವಿಶೇಷವಾಗಿ ಹೆಸರು ಮಾಡಿದ್ದರು ಇಂದು ತಾಲೂಕು ನಲ್ಲಿ ಒಂದೊಂದು ಇಲಾಖೆ ಹಡಗಲಿ ಬಿಟ್ಟು ಹೋಗುತ್ತಿವೆ ಇದಕ್ಕೆ ಹೋರಾಟ ಮಾಡಲಿಲ್ಲ ಎಂದು ಬೇಸರ ವ್ಯಕ್ತ ಪಡಿಸಿದರು, ಶಾಸಕರಾದ ಕೃಷ್ಣ ನಾಯ್ಕ  ಮತ್ತು ಮುಖಂಡರಾದ ನಂದಿಹಳ್ಳಿ ಹಾಲಪ್ಪ, ಓದೋ ಗಂಗಪ್ಪ, ಬಸವನಗೌಡ. ಸಂಜೀವ ರೆಡ್ಡಿ.ಕ್ಷೇತ್ರದ ಮುಖಂಡರು ನಂದಿಹಳ್ಳಿ ಗ್ರಾಮಸ್ಥರು ಇದ್ದರು