ಹಡಗಲಿಯಲ್ಲಿ ಪುಟ್ಟರಾಜ ಗವಾಯಿಗಳ ಪುಣ್ಯಾರಾಧನೆ

ಸಂಜೆವಾಣಿ ವಾರ್ತೆ
ಹೂವಿನಹಡಗಲಿ ಸೆ 20 :  ಪಟ್ಟಣದ ಮದಲಗಟ್ಟಿ ವೃತ್ತದಲ್ಲಿರುವ ವರಸಿದ್ಧಿ ವಿನಾಯಕ ದೇವಸ್ಥಾನದಲ್ಲಿ ಪುಟ್ಟರಾಜ ಕವಿ ಗವಾಯಿಗಳವರ 11ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಭಕ್ತರು ಶ್ರದ್ದಾಭಕ್ತಿಯಿಂದ ನಡೆಸಿದರು.
ಪುಟ್ಟರಾಜ ಗವಾಯಿಗಳ ಭಾವಚಿತ್ರಕ್ಕೆ ಭಕ್ತರು ಪೂಜೆ ಸಲ್ಲಿಸಿ, ಪುಷ್ಪ ನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ದಾನಿಗಳಾದ ಭರತಕುಮಾರ್ ಚವ್ಹಾಣ್, ವರಸಿದ್ಧಿ ವಿನಾಯಕ ದೇವಸ್ಥಾನ ಸಮಿತಿಯ ಶಿಗ್ಲಿಜಗದೀಶ, ಬಿ.ಸಿದ್ದೇಶ, ಎಂ.ಪ್ರಕಾಶ್, ಆರ್.ವೆಂಕಟೇಶ, ಗುಜ್ಜಲ ಹನುಮಂತಪ್ಪ, ಮಲ್ಲಿಕಾರ್ಜುನ, ಗಡಿಗಿ ಮಹೇಶ, ಅಟವಾಳಗಿ ಮಲ್ಲಣ್ಣ ಇತರರು ಇದ್ದರು. ನಂತರ ನೆರೆದಿದ್ದವರಿಗೆ ಪ್ರಸಾದ ವ್ಯವಸ್ಥೆ ಮಾಡಲಾಯಿತು.