ಹಟ್ಟಿ ರಸ್ತೆ ದುರಸ್ತಿಗೆ ಮನವಿ

ಸಿರವಾರ.ಸೆ೨೪-ತಾಲೂಕಿನ ನವಲಕಲ್ ಹಟ್ಟಿ ಮುಖ್ಯರಸ್ತೆ ವಡವಟ್ಟಿ ಕ್ರಾಸ್‌ನಿಂದ ಕಸನದೊಡ್ಡಿವರಿಗೆ ಸುಮಾರು ಆರು ಕಿಲೋಮೀಟರ್ ರಸ್ತೆ ತುಂಬಾ ಹದಗೆಟ್ಟ ರಸ್ತೆ ಮೇಲೆ ತಗ್ಗು ಗುಂಡಿಗಳು ಹಳ್ಳದಂತೆ ಆಗಿದೆ ಈ ರಸ್ತೆಯನ್ನು ಕೂಡಲೇ ತಾತ್ಕಲಿಕವಾಗಿ ಮರಂ ಹಾಕಿ ರಸ್ತೆಯನ್ನು ಸರಿಪಡಿಸಬೇಕೆಂದು ಭಾರತೀಯ ದಲಿತ ಪ್ಯಾಂಥರ್ ಪದಾಧಿಕಾರಿಗಳು ಲೋಕೋಪಯೋಗಿ ಇಲಾಖೆಯ ಎಇಇ ಅವರಿಗೆ ಮನವಿ ಸಲ್ಲಿಸಿದ್ದಾರೆ.
ಕಳೆದ ಮೂರು ತಿಂಗಳಿನಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ರಸ್ತೆಯ ಮೇಲೆಲ್ಲಾ ನೀರು ನಿಂತು ರಸ್ತೆ ತುಂಬಾ ಹದಗೆಟ್ಟಿದೆ
ಈ ರಸ್ತೆಯ ಮೇಲೆ ವೃದ್ಧರು ಗರ್ಭಿಣಿ ಸ್ತ್ರೀಯರು ಮತ್ತು ಸಾರ್ವಜನಿಕರು ಟಾಟಾ ಎಸಿ ಗಾಡಿಗಳು ಶಾಲಾ ವಾಹನಗಳು ಈ ರಸ್ತೆಯ ಮೇಲೆ ತಿರುಗಾಡಲು ಹರಸಾಹಸ ಪಡುವಂತ ಸ್ಥಿತಿ ಉದ್ಭವವಾಗಿದೆ.
ಈ ರಸ್ತೆಯ ಮೇಲೆ ಬೈಕ್ ಮೂಲಕ ಓಡಾಡಬೇಕಾದರೆ ಜೀವ ಕೈಗೆ ಬಂದಂತೆ ಆಗುತ್ತದೆ. ರಸ್ತೆ ತುಂಬಾ ಹದಗೆಟ್ಟಿದೆ ಈ ರಸ್ತೆಯನ್ನು ಮುಂದಿನ ದಿನಗಳಲ್ಲಿ ಡಾಂಬರೀಕರಣ ಮಾಡಿ ರಸ್ತೆಯನ್ನು ಸಾರ್ವಜನಿಕರಿಗೆ ಓಡಾಡಲು ಅನುಕೂಲ ಮಾಡಿಕೊಡಬೇಕೆಂದು ಸಂಘಟನೆ ಪದಾಧಿಕಾರಿಗಳು ಎಇಇಯವರಿಗೆ ಒತ್ತಾಯಿಸಿದ್ದಾರೆ.
ಸಂಘಟನೆಯ ತಾಲೂಕು ಅಧ್ಯಕ್ಷ ಅಮರೇಶ ಹಿರೇಬಾದರದಿನ್ನಿ, ಚನ್ನಬಸವ ಬಾಗಲವಾಡ, ಮುದಿಯಪ್ಪ ಹೀರಾ, ಬಸವರಾಜ ಡೋನೆಮರಡಿ, ರಮೇಶ ಜಂಬಲದಿನ್ನಿ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.