ಹಜ್ ಯಾತ್ರೆಗೆ ಹೋಗುವ ಸಾರ್ವಜನಿಕರಿಗೆ ಲಸಿಕೆ :ಡಾ.ಶರಣಬಸಪ್ಪ ಕ್ಯಾತನಾಳ ಭೇಟಿ

ಕಲಬುರಗಿ,ಏ.30-ಜಿಲ್ಲೆಯ ನಯಾ ಮೊಹಲ್ಲಾ ಪ್ರದೇಶದ ಹಜ್ ಕಮಿಟಿ ಕಚೇರಿಗೆ ಹಜ್ ಯಾತ್ರೆಗೆ ಹೋಗುವ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಹಜ್ ಯಾತ್ರಿಕರಿಗೆ ಲಸಿಕಾಕರಣ ಸತ್ರದ ಆಯೋಜನೆ ಮಾಡಲಾಯಿತು.
ಜಿಲ್ಲಾ ಆರ್‍ಸಿಎಚ್ ಅಧಿಕಾರಿ ಡಾ.ಶರಣಬಸಪ್ಪ ಕ್ಯಾತನಾಳ ಸ್ಥಳಕ್ಕೆ ಭೇಟಿ ನೀಡಿ ಲಸಿಕಾಕರಣದ ಕೋಣೆ, ಲಸಿಕಾ ಗುಣಮಟ್ಟದ ಕುರಿತು ಪರಿಶೀಲನೆ ನಡೆಸಿದರು. ಲಸಿಕಾಕರಣದ ಮಾರ್ಗsಸೂಚಿಯಂತೆ ವೈದ್ಯ,
ಸ್ತ್ರೀರೋಗತಜ್ಞ, ಶಿಶುವೈದ್ಯ, ಶ್ವಾಸಕೋಶ ಶಾಸ್ತ್ರಜ್ಞ, ಆಡಳಿತ ವೈದ್ಯಾಧಿಕಾರಿಗಳು, ವ್ಯಾಕ್ಸಿನೇಟರ್‍ಗಳು, ಎಚ್‍ಐಓ, ಐಎಫ್‍ವಿ ಹಾಗೂ ಸೇರಿದಂತೆ ಹಲವು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.