ಹಜರತ ಪೀರ ಗಾಲೀಬಸಾಬ ದೀಪೂತ್ಸವ

ಆಲಮೇಲ:ನ.4: ಪಟ್ಟಣದ ಆರಾಧ್ಯೆ ದೇವರಾದ ಹಜರತ ಪೀರ ಗಾಲೀಬ ಸಾಹೇಬ ಜಾತ್ರೆಯ ನಿಮಿತ್ಯವಾಗಿ ಸತತವಾಗಿ ನಾಲ್ಕು ದಿನ ನಡೆಯುವ ಧಾರ್ಮಿಕ ಕಾರ್ಯಕ್ರಮಗಳು ಪ್ರತಿ ವರ್ಷದಲ್ಲಿ ಈ ಬಾರಿಯು ಬುಧವಾರ ಗಂಧ(ಸಂದಲ) ನಡೆಯಿತು, ಅದೇ ರೀತಿಯಾಗಿ ಗುರುವಾರ ಅತೀ ವಿಜೃಂಬಣೆಯಿಂದ ದೀಪೂತ್ಸವ ಜರುಗಿತು,ಇಂದು ಮದ್ದು ಸಿಡಿಸುವ ಕಾರ್ಯಕ್ರಮ ಜರುಗುವುದು ಕೊನೆಯದಾಗಿ ಕುಸ್ತಿ ನಡೆಯಲಿದೆ.