ಹಜರತ್ ಶೇಖ ಮಿನಾಜೊದ್ದೀನ್ ಅನಸಾರಿ ದರ್ಗಾದ 395ನೇ ಉರುಸ್

ಕಲಬುರಗಿ ಸೆ 1: ತಾಲೂಕಿನ ಕಲ್ಲಬೇನೂರ ಗ್ರಾಮದ ಹಜರತ್ ಶೇಖ ಮಿನಾಜೊದ್ದೀನ್ ಅನಸಾರಿ ದರ್ಗಾದ 395ನೇ ವರ್ಷದ ಉರುಸ್ ಸೆಪ್ಟೆಂಬರ್ 1 ರಿಂದ ಆರಂಭವಾಗಲಿದೆ. ಸೆ-1 ರಂದು ರಾತ್ರಿ ಸಂದಲ್, 2 ರಂದು ಚಿರಾಗ್ ಹಾಗೂ 3 ರಂದು ಜಿಯಾರತ ಕಾರ್ಯಕ್ರಮಗಳು ಜರುಗಲಿವೆ ಎಂದು ರಬ್ಬಾನಿ ಪಟೇಲ್, ನಜೀರ ಪಟೇಲ, ಫಯಾಜ್ ಪಟೇಲ ಸುಭಾನ್ ಪಟೇಲ ತಾಜ್ ಪಟೇಲ ಹಾಜಿ ಪಟೇಲ ಹಾಗೂ ಛಾಯಾಗ್ರಹಕ ಖಾಜಾಪಟೇಲ ಕಲ್ಲಬೇನೂರ ರವರು ತಿಳಿಸಿದಾರೆ. ಸೂಪರ್ ಮಾರ್ಕೆಟ್ ನಿಂದ ಬಸ್ ವ್ಯವಸ್ಥೆ ಇರುತ್ತದೆ.