ಹಜರತ್ ಮೈಹಿಬೂಬಸುಬಾನಿ ಉರುಸು

ಬಸವನಬಾಗೇವಾಡಿ:ನ.18: ಪಟ್ಟಣದ ತೆಲಗಿ ರಸ್ತೆಯ ಆಜಾದ ನಗರದ ಹಜರತ್ ಮೈಹಿಬೂಬಸುಬಾನಿ ಉರುಸು(ಜಾತ್ರೆ) ಸಡಗರ ಸಂಭ್ರಮದಿಂದ ಜರುಗಿತು.

ಪ್ರತಿ ವರ್ಷಂತೆ ಈ ವರ್ಷವು ಮಂಗಳವಾರ ಗಂಧ ಏರಿಸುವ ಆರ್ಯ ಜರುಗಿತು ನಂತರ ಇಂಗಳೇಶ್ವರ ರಸ್ತೆಯಿಂದ ಖಾಜಂಬರ ದರ್ಗಾದಿಂದ ತೆಲಗಿ ರಸ್ತೆ ವರೆಗೆ ಮೈಹಿಬೂಬಸುಬಾನಿ ದರ್ಗಾದ ವರೆಗೆ ಭವ್ಯ ಮೆರವಣಿಗೆ ನಡೆಯಿತು. ಬುಧವಾರ ಉರುಸು ನಿಮಿತ್ಯ ಅನ್ನಸಂತರ್ಪಣೆ ಜರುಗಿತು, ನಂತರ ರಾತಿ 10 ಗಂಟೆಗೆ ರಿವಾತ್ ಕಾರ್ಯಕ್ರಮ ಜರುಗಿತು ಮುಸ್ಲಿಂ, ಹಾಗೂ ಹಿಂದು ಭಕ್ತರು ಜಾತಿ ಭೇದ ಮರೆತು ಜಾತ್ರೆಯ್ನು ಯಶಸ್ವಿಗೊಳಿಸಿದರು.

ಈ ಸಂಧರ್ಭದಲ್ಲಿ ಜಾತ್ರ ಕಮೀಟಿ ಅಧ್ಯಕ್ಷರಾದ ರಾಜೇಸಾಬ ಚಳ್ಳಿಗಿಡದ, ಅಮೀನಸಾಬ, ಬೈರವಾಡಗಿ, ಶಾನು ಚಳ್ಳಿಗಿಡದ. ನಿಸಾರ ಬೈರವಾಡಗಿ, ಹುಸೇನ ಹುಬ್ಬಳ್ಳಿ. ಖಾಜಂಬರ ಚಳ್ಳಿಗಿಡದ, ಮೈತ್ತಾಬ ಬಮ್ಮನ್ನಳ್ಳಿ. ರಹಿಮಾನ ತಾಂಬೊಳಿ. ಅಲ್ಲಾಬಕ್ಷ ರೂಡಗಿ. ಮುನ್ನಾ ಲೂಬಿ. ಲಾಲು ಕೊರಬು. ಬಾಬು ರೂಡಗಿ ಸೇರಿದಂತೆ ಮುಂತಾದವರು ಇದ್ದರು.