ಹಜರತ್ ಟಿಪ್ಪು ಸುಲ್ತಾನರ ಜಯಂತಿಯಂದು ಬಡವರಿಗೆ ಆಹಾರ ವಿತರಣೆ

ಅಫಜಲಪುರ:ನ.11: ಮೈಸೂರ ಹುಲಿ ಹಜರತ್ ಟಿಪ್ಪು ಸುಲ್ತಾನ ಅವರ ಜಯಂತ್ಯೋತ್ಸವ ಪ್ರಯುಕ್ತ ಜಿ.ಪಂ ಮಾಜಿ ಸದಸ್ಯ ಮತೀನ ಅಹ್ಮದ ಪಟೇಲ ನೇತೃತ್ವದಲ್ಲಿ ದಲಿತ ಸಂಘರ್ಷ ಸಮಿತಿಯ ಪದಾಧಿಕಾರಿಗಳು ಟಿಪ್ಪು ಸುಲ್ತಾನ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ತಹಸೀಲ ಕಛೇರಿಯ ಹತ್ತಿರಯಿರುವ ಗುಡಿಸಲು ನಿವಾಸಿಗಳಿಗೆ ಊಟ ಮತ್ತು ಹಣ್ಣು ಹಂಪಲು ವಿತರಿಸಿದರು. ಈ ಸಂದರ್ಭದಲ್ಲಿ ಯುವ ಮುಖಂಡ ಮತೀನ ಅಹ್ಮದ ಪಟೇಲ ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಹಜರತ್ ಟಿಪ್ಪು ಸುಲ್ತಾನ ಅವರು, ತ್ಯಾಗ ಬಲಿದಾನ ಮಾಡಿದ್ದು, ಇತಿಹಾಸದಲ್ಲಿ ಉಳಿದಿದೆ. ಈ ಇತಿಹಾಸವನ್ನು ಅಳಿಸಿ ಹಾಕಲು ಸಾಧ್ಯವಿಲ್ಲ. ಅಲ್ಲದೆ ಅವರ ಅಧಿಕಾರದ ಅವಧಿಯಲ್ಲಿ ಯಾವುದೇ ಜಾತಿ ತಾರತಮ್ಯ ಮಾಡದೆ ಆಡಳಿತ ನಡೆಸಿದ್ದರು. ಅಲ್ಲದೆ ನೀರಾವರಿ, ರೇಷ್ಮೆ ಹುಳು ಸಾಕಾಣಿಕೆ ಇನ್ನೀತರ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು ಅಲ್ಲದೆ ಹಿಂದು ಧರ್ಮದ ದೇವಾಲಯಗಳಿಗೆ ದೇಣಿಗೆ ನೀಡಿ, ಜೀರ್ಣೋದ್ಧಾರ ಮಾಡಿದ್ದು ಅವರ ಪರಧರ್ಮ ಸಹಿಷ್ಣುತೆಗೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಟಿಪ್ಪು ಸುಲ್ತಾನ್ ಸಂಘದ ಅಧ್ಯಕ್ಷ ಸೊಹೆಲ್ ಪಟೇಲ್ ಹಾಗೂ ಮಹಿಬೂಬ ಮನಿಯಾರ, ಶಿರಾಜ್ ಪೀರಾಂವಾಲೆ, ದ.ಸಂ.ಸ ತಾಲೂಕಾಧ್ಯಕ್ಷ ಮಹಾಲಿಂಗ ಅಂಗಡಿ, ಪವನ ಮತ್ತು ಲವ, ಇಸ್ಮಾಯಿಲ್, ಅಲ್ತಾಫ್ ಏಳೂರ ಇತರರಿದ್ದರು.