ಹಜರತ್ ಖಾಜಾ ಸೈಫನ ಮುಲ್ಕ ಜಾತ್ರೆ ರದ್ದು

ಅಫಜಲಪುರ:ಜ.7: ಕೋವಿಡ್-19 ಹಿನ್ನೆಲೆಯಲ್ಲಿ ತಾಲೂಕಿನ ಗಡಿ ಭಾಗದ ಹೈದ್ರಾ ಗ್ರಾಮದ ಹಜರತ್ ಖಾಜಾ ಸೈಫನ ಮುಲ್ಕ 887ನೇ ಜಾತ್ರಾ ಮಹೋತ್ಸವ ರದ್ದುಗೊಳಿಸಲಾಗಿದೆ ಎಂದು ಖಾಜಾ ಸೈಫನ ಮುಲ್ಕ ಟ್ರಸ್ಟ ಅಧ್ಯಕ್ಷ ಮೀರಾಸಾಬ ಮುಜಾವರ ಅವರು ತಿಳಿಸಿದರು. ಇಲ್ಲಿಯ ಹೈದ್ರಾ ದರ್ಗಾದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ 19 ಹಿನ್ನೆಲೆಯಲ್ಲಿ ಈ ಬಾರಿ ಸರಕಾರದ ಆದೇಶದಂತೆ ಜಾತ್ರೆ ರದ್ದುಗೊಳಿಸಲಾಗಿದೆ. ಜನವರಿ 08 ರಿಂದ 15ರವರೆಗೆ ದರ್ಗಾ ಬಾಗಿಲು ಬಂದ್ ಇರುತ್ತದೆ. ಆದರೆ ಪ್ರತಿ ವರ್ಷದ ಸಂಪ್ರದಾಯದಂತೆ ಗಂಧ ಏರಿಸುವುದು, ಜಿಯಾರತ್ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ದರ್ಗಾದ ಟ್ರಸ್ಟ್ ಸದಸ್ಯರು ಸೇರಿಕೊಂಡು ನೆರವೇರಿಸಲಾಗುವುದು. ಹೀಗಾಗಿ ಭಕ್ತರು ಭಾಗವಹಿಸದೆ ಸಹಕರಿಸಬೇಕೆಂದು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಟ್ರಸ್ಟ ಉಪಾಧ್ಯಕ್ಷ ರಫೀಕ ಮುಜಾವರ, ಶಕೀಲ ಮುಜಾವರ, ಅಹ್ಮದ್ ಮುಜಾವರ, ವಕೀಲ ಮುಜಾವರ, ಅಬ್ದುಲ್ ರವೂಪ್ ಮುಜಾವರ,ಬಂದೇನವಾಜ ಮುಜಾವರ, ಮಹ್ಮದ ಯಾಕೂಬ ಮುಜಾವರ ಇದ್ದರು.