
ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.10 : ಸಿವಿಲ್ ಮತ್ತು ಜೆ.ಎಂ.ಎಫ್ ನಾಯ್ಯಾಲಯದ ನ್ಯಾಯಧೀಶ ಹಾಜಿ ಹುಸೇನ್ ಸಾಬ್ ಯಾದವಾಡ್ ಅವರು ತಾಲ್ಲೂಕಿನ ಹಚ್ಚೋಳ್ಳಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಮಾಹಿತಿ ಪಡೆದು, ಆರೋಗ್ಯ ಕೇಂದ್ರದ ಕುಂದು ಕೊರತೆ ವಿಚಾರಿಸಿದರು.
ನಂತರ ಮಾತನಾಡಿದ ಅವರು ಕಾನೂನು ಸೇವಾ ಸಮಿತಿಯ ಮೂಲಕ ಹಚ್ಚೋಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಮುಖ್ಯವೈಧ್ಯರು ಬರುವುದಿಲ್ಲ ಮತ್ತು ಸಿಬ್ಬಂದಿಗಳು ಸಮರ್ಪಕ ಸೇವೆ ನೀಡುತ್ತಿಲ್ಲ, ಮೂಲಭೂತ ಸೌಲಭ್ಯಗಳಿಲ್ಲ ಎಂದು ಗ್ರಾಮಸ್ಥರು ನ್ಯಾಯಾಲಕ್ಕೆ ಅರ್ಜಿಯನ್ನು ಸಲ್ಲಿದ್ದರು. ಇದರನ್ವದಂತೆ ಭೇಟಿ ನೀಡಿ ಪರೀಶಿಲಿಸಲಾಯಿತು.
ಕೇಂದ್ರದಲ್ಲಿ ಅವಶ್ಯಕವಾಗಿ ಬೇಕಾಗಿರುವ ಔಷಧಿಗಳು ಮತ್ತು ಸಿಬ್ಬಂದಿಗಳ ಕುರಿತು ವಿಚಾರಿಸಿದಾಗ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುವ ಸುತ್ತಮುತ್ತಲ್ಲಿನ ಅನಾರೋಗ್ಯ ಸಾರ್ವಜನಿಕರಿಗೆ ತೊಂದರೆ ಯಾಗುತ್ತಿರುವುದು ಕಂಡು ಬಂದಿದೆ ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ನ್ಯಾಯಾಲಯದ ಮೂಲಕ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಲ್ಲಿ ಕರ್ತವ್ಯ ನಿವರ್ಹಿಸುತ್ತಿದ್ದ ವೈದ್ಯರಾದ ಡಾ.ಬಾಲಾಜಿ ಅವರು ಕರೂರು ಗ್ರಾಮದ ಆರೋಗ್ಯ ಕೇಂದ್ರಕ್ಕೆ ಮತ್ತು ಡಾ.ಮಹೇಶ ಬಾಬು ಅವರು ಕುಡುದರಹಾಳ್ ಗ್ರಾಮದ ಆರೋಗ್ಯ ಕೇಂದ್ರಕ್ಕೆ ನಿಯೋಜನೆಗೊಂಡಿದ್ದಾರೆ ಎಂದು ಆರೋಗ್ಯ ಕೇಂದ್ರದಲ್ಲಿನ ಡಾ.ಸೌಮ್ಯ ಮತ್ತು ಡಿ.ದರ್ಜೆ ಸಿಬ್ಬಂದಿ ಟಿ.ವೀಣಾ ಅವರು ಮಾಹಿತಿ ನೀಡಿದರು.
One attachment • Scanned by Gmail