ಹಚ್ಚೇವು ಕನ್ನಡದ ದೀಪ ಕಾರ್ಯಕ್ರಮ

????????????????????????????????????

ಧಾರವಾಡ,ನ6 : ಹರಿದು ಹಂಚಿಹೋಗಿದ್ದ ನಾಡನ್ನು ಒಂದುಗೂಡಿಸಿದ ನಿಜವಾದ ಮಹನೀಯರನ್ನು ಸದಾ ಸ್ಮರಿಸಬೇಕಿದೆ. ಅವರ ಆಶಯಗಳಿಗೆ ಪ್ರತಿಯೊಬ್ಬರೂ ಸಹಕರಿಸುವುದು ಕನ್ನಡಿಗರ ಜವಾಬ್ದಾರಿಯಾಗಿದೆ ಎಂದು ಪ್ರಾಧ್ಯಾಪಕ ಡಾ. ವೈ. ಎಂ. ಭಜಂತ್ರಿ ಹೇಳಿದರು. ಅವರು ಇಲ್ಲಿಯ ಕರ್ನಾಟಕ ವಿದ್ಯಾವರ್ಧಕ ಸಂಘವು ಪ್ರಾದೇಶಿಕ ಶಿಕ್ಷಣ ಇಲಾಖೆ ಹಾಗೂ ಜೆ.ಎಸ್.ಎಸ್. ಬನಶಂಕರಿ ಕಲಾ, ವಾಣಿಜ್ಯ ಮತ್ತು ಶಾಂತಿಕುಮಾರ ಗುಬ್ಬಿ ವಿಜ್ಞಾನ ಮಹಾವಿದ್ಯಾಲಯ ಸಹಯೋಗದಲ್ಲಿ ಜೆ.ಎಸ್.ಎಸ್. ಕಾಲೇಜಿನ ನೃಪತುಂಗ ಸಭಾಭವನದಲ್ಲಿ ಆಯೋಜಿಸಿದ್ದಹಚ್ಚೇವು ಕನ್ನಡ ದೀಪ’ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಮಾತನಾಡುತ್ತಿದ್ದರು.
ಮುಂದುವರೆದು ಮಾತನಾಡಿದ ಅವರು, ಗಡಿಪ್ರದೇಶಗಳಲ್ಲಿ ಕನ್ನಡ ಮೊಳಗಿ ಹೆಸರಾಗಬೇಕಿದೆ. ಉದಯವಾದ ಕನ್ನಡ ನಾಡು ಅಭಿಮಾನ, ಗೌರವ, ಜವಾಬ್ದಾರಿಗಳಿಂದ ಬೆಳೆಯಬೇಕಿದೆ. ನಾಡು, ನುಡಿ, ಸಂಸ್ಕøತಿ, ನೆಲ, ಜಲ ರಕ್ಷಣೆಗಾಗಿ ನಾವೆಲ್ಲರೂ ಕಂಕಣಬದ್ಧರಾಗಿ ಕಾರ್ಯ ಮಾಡಬೇಕು ಎಂದರು.
ಕ.ವಿ.ವ.ಸಂಘದ ಕಾರ್ಯಕಾರಿ ಸಮಿತಿ ಸದಸ್ಯ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ಪ್ರಾಧ್ಯಾಪಕ ಡಾ. ಶ್ರೀಶೈಲ ಹುದ್ದಾರ ಅತಿಥಿಯಾಗಿ ಮಾತನಾಡಿ, ಕನ್ನಡ ನಾಡಿನಲ್ಲಿ ಹುಟ್ಟಿದ ನಾವೇ ಧನ್ಯರು. ಕನ್ನಡ ನಾಡು ಮಿಕ್ಕೆಲ್ಲ ನಾಡುಗಳಿಗಿಂತಲೂ ಗಂಡುಮೆಟ್ಟಿದ ನಾಡಾಗಿದೆ. ಇದು ಎಲ್ಲವುಗಳ ತವರಾಗಿದೆ. ಇಂತಹ ನಾಡನ್ನು ಕಟ್ಟಿದ ಮಹನೀಯರನ್ನು ಸದಾ ಗೌರವ ಮತ್ತು ಅಭಿಮಾನದಿಂದ ಕಾಣಬೇಕಾದುದು ನಮ್ಮ ಜವಾಬ್ದಾರಿಯಾಗಿದೆ. ಕನ್ನಡ ಎಂಬುದೊಂದು ಬದುಕಿನ ಕ್ರಮವಾಗಿದೆ ಅದು ನಮ್ಮೆಲ್ಲರಿಗೆ ಅರಿವಾಗಬೇಕಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಗೌರವ ಉಪಸ್ಥಿತರಿದ್ದ ಕರ್ನಾಟಕ ವಿದ್ಯಾವರ್ಧಕ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು, ಜೆ.ಎಸ್.ಎಸ್. ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರು ಆದ ಡಾ. ಜಿನದತ್ತ ಹಡಗಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಕರ್ನಾಟಕ ವಿದ್ಯಾವರ್ಧಕ ಸಂಘದ ಉದ್ದೇಶ ಮತ್ತು ಕಾರ್ಯಚಟುವಟಿಕೆ, ನಡೆದುಬಂದ ಇತಿಹಾಸ ವಿವರಿಸಿ, ಪ್ರತಿ ಕನ್ನಡಿಗನಿಗೂ ನಾಡಿನ ಕುರಿತು ಹೆಮ್ಮೆ ಮತ್ತು ಗೌರವ ಭಾವವಿರಬೇಕು. ನಾಡು ಕುರಿತಾದಂತೆ ಅದು ನಿತ್ಯವೂ ಕನ್ನಡಿಗರಿಗೆ ಹಬ್ಬವಾಗಿರಬೇಕು. ಪ್ರತಿ ಕನ್ನಡಿಗನೂ ಜವಾಬ್ದಾರಿ ಅರಿತು ಬದುಕು ಕಟ್ಟಿಕೊಂಡು ಕನ್ನಡ ಭಾಷೆ, ನೆಲ, ಜಲಗಳ ರಕ್ಷಣೆಗೆ ಸದಾ ಬದ್ಧರಾಗಿರಬೇಕೆಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜೆ.ಎಸ್.ಎಸ್. ಕಾಲೇಜಿನ ಪ್ರಾಚಾರ್ಯರಾದ ಡಾ. ವೈ ಜಯಮ್ಮ ಮಾತನಾಡಿ, ಕನ್ನಡ ಭಾಷೆ ಮತ್ತು ನಾಡು ಬೇರೆ ನಾಡುಗಳಿಗಿಂತಲೂ ಸಂಪದ್ಭರಿತವಾಗಿದ್ದು, ಕಲೆ, ಸಾಹಿತ್ಯ, ಸಂಸ್ಕøತಿ, ಶಿಲ್ಪಕಲೆಗಳು ಕನ್ನಡಿಗರ ಅಸ್ಥಿತ್ವ ಮತ್ತು ಹೆಮ್ಮೆಯ ಸಂಕೇತವೆನಿಸಿಕೊಂಡಿವೆ. ಎಲ್ಲರೂ ಹೆಮ್ಮೆ ಮತ್ತು ಅಭಿಮಾನದಿಂದ ಬದುಕಿ ಮುನ್ನಡೆಯಬೇಕಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ಜನಪದ ತಂಡ ಹರ್ಲಾಪುರದ ಶಂಭಯ್ಯ ಹಿರೇಮಠ ಅವರು ನಾಡು, ನುಡಿ, ಸಂಸ್ಕøತಿ ಮೌಲ್ಯಗಳ ಕುರಿತಾದ ಜನಪದ ಗೀತೆಗಳ ಮೂಲಕ ಸಭಿಕರನ್ನು ರಂಜಿಸಿ ರೋಮಾಂಚನಗೊಳಿಸಿ, ಗೌರವ, ಅಭಿಮಾನ ಜಾಗೃತಗೊಳಿಸಿದರು. ಅವರಿಗೆ ಶರೀಫ್ ಮತ್ತು ಸಂಗಡಿಗರು ಸಾಥ್ ನೀಡಿದರು.
ಡಾ. ಆರ್. ವಿ. ಪಾಟೀಲ ನಿರೂಪಿಸಿದರು. ಕು. ಅಶ್ವಿನಿ ಹೆಗಡೆ ಪ್ರಾರ್ಥಿಸಿದರು. ಡಾ. ವ್ಹಿ.ಜಿ. ಪೂಜಾರ ವಂದಿಸಿದರು. ಕಾರ್ಯಕ್ರಮದಲ್ಲಿ ಜೆ.ಎಸ್.ಎಸ್. ಕಾಲೇಜಿನ ಅಭಿವೃದ್ಧಿ ಅಧಿಕಾರಿ ಡಾ. ಸೂರಜ್ ಜೈನ್, ವೀರಣ್ಣ ಒಡ್ಡೀನ, ಭೀಮರಡ್ಡಿ. ಆರ್.ಸಿ. ಮಠಪತಿ, ಡಾ. ಅರುಣಕುಮಾರ ಶಿರಹಟ್ಟಿ, ರವಿಕುಮಾರ, ದೀಪಾ ಸಂಕಪಾಳೆ, ಕೆ.ಜಿ. ದೇವರಮನಿ ಸೇರಿದಂತೆ ವಿದ್ಯಾರ್ಥಿಗಳು, ಪ್ರಾಧ್ಯಾಪಕರು, ಶಿಕ್ಷಕೇತರ ಸಿಬ್ಬಂದಿಗಳು ಮುಂತಾದವರು ಭಾಗವಹಿಸಿದ್ದರು.