ಹಗಲು ವೇಳೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡಲು ಒತ್ತಾಯ ; ರೈತರ ಪ್ರತಿಭಟನೆ

ಜಗಳೂರು.ಜೂ.೨೧:- ರಾತ್ರಿ ವೇಳೆ ಜಮೀನಿನಲ್ಲಿ ಕೆಲಸ ಮಾಡುವ ರೈತರ ಮೇಲೆ ಕರಡಿ ದಾಳಿ ಮಾಡುವ ಸಂಭವವಿದ್ದು ಹಗಲು ವೇಳೆ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಪೂರೈಕೆ ಮಾಡ ಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ನಂಜುಡ ಸ್ವಾಮಿ ಬಣದಿಂದ ಬೆಸ್ಕಾ ಇಲಾಖೆ ಎಇಇ ರಾಮಚಂದ್ರಪ್ಪ ಇವರಿಗೆ ಮನವಿ ಸಲ್ಲಿಸಿದರು.ಇತ್ತೀಚಿನ ದಿನಗಳಿಂದ ಸಂಜೆ ಮತ್ತು ರಾತ್ರಿ ವೇಳೆಯಲ್ಲಿ ಕರಡಿಗಳು ಹೊಲ ಮತ್ತು ಊರುಗಳಿಗೆ ಆಹಾರ ಹರಸಿ ಬರುತ್ತಿವೆ ಹೊಲದಲ್ಲಿ ಒಬ್ಬರೇ ಇದ್ದಾರ ರೈತರ ಮೇಲೆ ದಾಳಿಮಾಡಿ ಗಾಯಗೊಳಿಸಿ ಪ್ರಾಣ ಕ್ಕೆ ಕುತ್ತು ತರುತ್ತಿವೆ ಅದರಿಂದಾಗಿ ರೈತರು ಮತ್ತು ಕೂಲಿ ಕಾರ್ಮಿಕ ರು ಭಯ ಗೊಳ್ಳುತ್ತಿದ್ದು ಹಲಗು ವೇಳೆ ವಿದ್ಯುತ್ ಕಲ್ಪಸಿದರೆ ಕೃಷಿ ಚಟುವಟಿಕೆ ಮಾಡಲು ಸಹಕಾರಿಯಾಗುತ್ತದೆ ಎಂದು ಒತ್ತಾಯಿಸಿದರು.ತಾಲ್ಲೂಕಿನ ಅಣಬೂರು ಕೆಚ್ಚೇನಹಳ್ಳಿ ಕೆಳಗೋಟೆ ಖಿಲಾ ಕಣ್ವಕುಪ್ಪೆ ಸಿದ್ದಮ್ಮನಹಳ್ಳಿ ಹೊಸ ಹಟ್ಟಿ , ದೊಣ್ಣೆಹಳ್ಳಿ ,ಹೊಸೂರು ಬಿಸ್ತುವಳ್ಳಿ ,ಕೊರಟಿಕೆರೆ , ಗುತ್ತಿದುರ್ಗ , ಮಾಗಡಿ ,ಉದ್ದಬೋರನಹಳ್ಳಿ ಸೇರಿ ದಂತೆ ಹಲವು ಅರಣ್ಯ ಅಂಚಿನ ವ್ಯಾಪ್ತಿಯ ಗ್ರಾಮಗಳಲ್ಲಿ ಅಹಾರ ಹುಡುಕಿಕೊಂಡು ಕಾಡಿನಿಂದ ನಾಡಿಗೆ ಬರುತ್ತಿರುವ ಕರಡಿಗಳು ಮನುಷ್ಯರ ಮೇಲೆ ಏಕಾಏಕಿ ದಾಳಿಮಾಡುತ್ತಿವೆ ಅರಣ್ಯ ಇಲಾಖೆ ಅಧಿಕಾರಿಗಳು ಸೂಕ್ತ ಮುಂಜಾಗ್ರತ ಕ್ರಮ ಕೈಗೊಂಡು ಸಾರ್ವಜನಿ ಕರಿಗೆ ಆಗುವಂತಹ ಅನಾಹುತಗಳನ್ನ ತಪ್ಪಿಸಬೇಕು ಎಂದು ಅರ ಣ್ಯ ಇಲಾಖೆ ಅಧಿಕಾರಿಗಳಿಗೂ ಸಹ ಮನವಿ ಮಾಡಿದರುಮುಂಗಾರು ಬಿತ್ತನೆ ಕಾಲವಾದರಿಂದ ಬಿತ್ತನೆ ನೆಡೆದಿದೆ ಎಂಬ ಸುಳಿವಿನೊಂದಿಗೆ ಕರಡಿಗಳು ಮೆಕ್ಕೆಜೋಳ ,ಶೇಂಗಾ , ಇತರೆ ದ್ವಿಧಳ ದಾನ್ಯಗಳು ರೇಷ್ಮೆ ಹಣ್ಣು ಇತರ ತೋಟಗಾರಿಕ ಬೆಳೆಗಳ ಪಧಾರ್ಥಗಳನ್ನ ತಿನ್ನಲು ಹೊಲಗಳಿಗೆ ದಾಳಿ ಇಡುತ್ತಿವೆ ಈಗಾಗಲೇ ಹಲವು ಬಾರಿ ಕರಡಿ ದಾಳಿಗೆ ತುತ್ತಾಗಿ ಎಷ್ಟೊ ರೈತರು ಸಾವನ್ನಪ್ಪಿ ದ್ದಾರೆ ಕೆಲವರು ಗಾಯಗೊಂಡು ನೋವಿನಲ್ಲಿ ಬದುಕು ದೂಡುತ್ತಿ ದ್ದಾರೆ ಶೀಘ್ರವೇ ಮುಂಜಾಗ್ರತಾ ಕಾರ್ಯ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.ಈ ಸಂದರ್ಭದಲ್ಲಿ ರೈತ ಸಂಘದ ತಾಲ್ಲೂಕು ಅಧ್ಯಕ್ಷರು ಗುರುಸಿದ್ದ ಪ್ಪ ಕಾರ್ಯದರ್ಶಿ ಭರಮಸಮುದ್ರ ಕುಮಾರ್ ,ಜಿಲ್ಲಾ ಕಾರ್ಯ ದರ್ಶಿ ಸತೀಶ್ , ಮಲಿಯಪ್ಪ .ನಾಗೇಂದ್ರಪ್ಪ , ರೇವಣ್ಣ , ನಾಗರಾಜ್. ಲಕ್ಷ್ಮಣ್ ಸೇರಿದಂತೆ ಹಲವು ರೈತ ಮುಖಂಡರು ಇದ್ದರು