ಹಗರಿ ಫಾರಂನಲ್ಲಿ ರೈತರ ಹಾಸ್ಟಲ್ ಗೆ  ಭೂಮಿ ಪೂಜೆ
ಕೃಷಿ ತೋಟಗಾರಿಕೆ ಇಲಾಖೆ ಒಂದಾಗಬೇಕು: ಕರಂದ್ಲಾಜೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ನ.14: ಕೃಷಿಗೆ ಸಂಬಂಧಿಸಿದ ಯೋಜನೆಗಳನ್ನು ಸಮರ್ಪಕ ಅನುಷ್ಟಾನಕ್ಕೆ ರಾಜ್ಯದಲ್ಲಿ ಕೃಷಿ, ತೋಟಗಾರಿಕೆ ಇಲಾಖೆಗಳು ಒಂದಾಗಬೇಕು ಎಂದು ಕೇಂದ್ರ ಕೃಷಿ ಸಚಿವೆ ಶೋಭಾ ಕರಂದ್ಲಾಜೆ ಮುಖ್ಯ ಮಂತ್ರಿಗಳಿಗೆ  ಕೋರಿದ್ದಾರೆ.
ಅವರು ಇಂದು
ತಾಲೂಕಿನ ಪಿ.ಡಿ.ಹಳ್ಳಿಯ ಹಗರಿ ಕೃಷಿ ವಿಜ್ಞಾನ ಕೇಂದ್ರದಲ್ಲಿ 80 ಲಕ್ಷ ರೂ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ರೈತ ವಸತಿ‌ ನಿಲಯಕ್ಕೆ ಭೂಮಿ‌ಪೂಜೆ ನೆರವೇರಿಸಿ, ಇದೇ ಸಂದರ್ಭದಲ್ಲಿ ಕೃಷಿ ಪರಿಕರಗಳ ವಸ್ತುಪ್ರದರ್ಶನ, ಮತ್ತು ಒಂದು ಜಿಲ್ಲೆ ಒಂದು ಬೆಳೆ ಯೋಜನೆಯಡಿ ಬಳ್ಳಾರಿ ಜಿಲ್ಲೆಗೆ ಅಂಜೂರ ಬೆಳೆ ಆಯ್ಕೆ ಮಾಡಿದ್ದು ಅದರ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ನಂತರ ಮಾತನಾಡಿದ ಸಚಿವೆ ಶೋಭಾ ಅವರು. ಕರೋನಾ ಸಂದರ್ಭದಲ್ಲಿಯೂ ನಮ್ಮ ದೇಶದ ರೈತರು ನಮಗಷ್ಟೇ ಅಲ್ಲದೆ ಇತರೇ ದೇಶಗಳಿಗೂ ಆಹಾರ ಧಾನ್ಯ ಕಳಿಸುವಷ್ಟು ಬೆಳೆಸಿದ್ದಾರೆಂದರು.
ಮೋದಿ ಅವರು ಪ್ರಧಾನಿ ಆದ ಮೇಲೆ 2013 ರಲ್ಲಿ ಬಜೆಟ್ ನಲ್ಲಿ ಕೃಷಿಗೆ ಇದ್ದ  23 ಸಾವಿರ ಕೋಟಿ ರೂಗಳ  ಅನುದಾನವನ್ನು ಈಗ  1.32 ಲಕ್ಷ ಕೋಟಿ ರೂ ಗೆ ಹೆಚ್ಚಿಸಿದ್ದಾರೆ. ಇದರಿಂದ ಕೃಷಿ ಅಭಿವೃದ್ಧಿಗೆ, ಯಂತ್ರೀಕರಣ ಬಳಕೆ, ಕೃಷಿ ಉತ್ಪನ್ನಗಳ ಸಂಗ್ರಹ, ಸಂಸ್ಕರಣೆ, ಪ್ಯಾಕಿಂಗ್, ಬ್ರಾಂಡಿಂಗ್ ಮಾಡಿ‌ ಮಾರುಕಟ್ಟೆ ಲಭ್ಯ ಮಾಡಿದಾಗ ಮಾತ್ರ ಕೃಷಿಕರ ಆದಾಯ ದ್ವಿಗಣಗೊಳ್ಳಲಿದೆ. ಅದಕ್ಕಾಗಿ ಈ ಕಾರ್ಯಕ್ಕೆ ಬೇಕಾದ ತರಬೇತಿಯನ್ನು ರೈತರಿಗೆ ನೀಡುವುದು, ನಂತರ ಅಗತ್ಯವಾದ ಅನುದಾನ ನೀಡಿ ಅವರೇ  ಉತ್ಪನ್ನಗಳಿಗೆ ಮಾರುಕಟ್ಟೆ ಕಂಡುಕೊಳ್ಳುವಂತಾಗಬೇಕು ಎಂದರು.
ರೈತರಿಗೆ ಕೇಂದ್ರ ಸರ್ಕಾರ ಕೃಷಿ ಸನ್ಮಾನ ಯೋಜನೆಯಡಿ ವಾರ್ಷಿಕ ಆರು ಸಾವಿರ ನೀಡುತ್ತಿದೆ.  ಬೆಳೆಗೆ ವಿಮೆ ನೀಡಲಾಗುತ್ತಿದೆ. ಬಳ್ಳಾರಿ‌ ಜಿಲ್ಲೆಯಲ್ಲಿ ಈ ವರ್ಷ
245 ಕೋಟಿ ಬೆಳೆ ವಿಮೆ ದೊರೆತಿದೆ ಎಂದರು.
ರಾಜ್ಯದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆಗಳನ್ನು ಒಂದು ಮಾಡಲು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಕೋರಿದೆ ಎಂದರು. ರಫ್ತಿಗೆ ಒತ್ತು ಕೊಡಬೇಕು ಎಂದು ಹೇಳಿದರು.
ಹೊಸ ಕೃಷಿ ಪದವಿ ಕಾಲೇಜು ಇಲ್ಲಿ ಈ ವರ್ಷ ಆರಂಭವಾಗುತ್ತಿರುವುದು ಸಂತಸ, ಆದರೆ ಮೂಲಭೂತಸೌಲಭ್ಯಗಳು ಕೊರತೆ ಇದೆ. ಅದನ್ನು ಪರಿಹರಿಸಲು ಗಣಿಗಾರಿಕೆಯ ಹಣ ಬಳಸಿಕೊಳ್ಳಲು ಸೂಚಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಅವರು ಮಾತನಾಡಿ,  ಸಿರಿ ಧಾನ್ಯಗಳನ್ನು ಬೆಳೆಯುವಲ್ಲಿ ನಮ್ಮ ಜಿಲ್ಲೆ ಕಲ್ಯಾಣ ಕರ್ನಾಟಕದಲ್ಲಿ
ದೇಶದಲ್ಲಿ 130  ಮಿಲಿಯನ್ ಟನ್  ಸಿರುಗುಪ್ಪ ದಾನ್ಯ ಬೆಳೆಯಲು ಉದ್ದೇಶಿಸಿದೆ ಈ ನಿಟ್ಟನಲ್ಲಿ  ಸಿರಿ ಧಾನ್ಯ ಬೆಳೆಯುವ ರೈತರಿಗೆ ಪ್ರತಿ ಎಕರೆಗೆ ಆರು ಸಾವಿರ  ನೀಡುತ್ತಿದೆ ಕೇಂದ್ರ ಸರ್ಕಾರ ಎಂದು ತಿಳಿಸಿದರು.‌ ನಮ್ಮೆಲ್ಲರ ಬೇಡಿಕೆಯಂತೆ ಕೃಷಿ ಪದವಿ ಕಾಲೇಜು ಈ ವರ್ಷ ಆರಂಭವಾಗುತ್ತಿರುವುದು ಸಂತಸ ತಂದಿದೆ ಎಂದರು.
ಬಿ.ನಾಗೇಂದ್ರ ಅವರು ಸಿರಿಧಾನ್ಯಗಳ ಕುರಿತ ಕರಪತ್ರವನ್ನು ಬಿಡುಗಡೆ ಮಾಡಿ ಮಾತನಾಡಿ.  ಭಯಭೀತವಾತಾವರಣದಿಂದ ಕೂಡಿದ್ದ ಹಗರಿಯಲ್ಲಿ ಈಗ ಕೃಷಿ  ಕಾಲೇಜಿನಿಂದ ಉತ್ತಮ‌ ವಾತಾವರಣ ಈಗ ಆಗಲಿದೆ. ಇದಕ್ಕಾಗಿ ತಾವು ಮತ್ತು ಪನ್ನರಾಜ್ ಮೊದಲಾದವರ ಹೋರಾಟಕ್ಕೆ ಮುಖ್ಯ ಮಂತ್ರಿಗಳು ಕೃಷಿ ಮಂಜೂರು‌ಮಾಡಿರುವುದು  ಸ್ವಾಗತ ಎಂದರು.
ಇಲ್ಲಿ 9 ಕೋಟಿ ರೂ ವೆಚ್ಚದಲ್ಲಿ ಕಾಲೇಜು ಕಟ್ಟಡ, ರಸ್ತೆ ಅಭಿವೃದ್ಧಿ ಸೇರಿದಂತೆ ವಿವಿಧ ಕಾಮಗಾರಿಗಳಿಗೆ 20 ಕೋಟಿ ರೂ ಅನುದಾನ ದೊರೆತಿದೆ. ಆದರೆ ಇದಕ್ಕೆ ಇನ್ನೂ 30 ಕೋಟಿ ರೂ ಅನುದಾನ ಅವಶ್ಯ ಇದೆ ಎಂದರು.
ಸಂಸದರಾದ ಕರಡಿ ಸಂಗಣ್ಣ, ವೈ. ದೇವೇಂದ್ರಪ್ಪ, ಶಾಸಕರಾದ ಸೋಮಶೇಖರ ರೆಡ್ಡಿ, ಜವಳಿ ಅಭಿವೃದ್ಧಿ ನಿಗಮದ ಅಧಗಯಕ್ಷ ಗುತ್ತಿಗನೂರು ವಿರೂಪಾಕ್ಷಗೌಡ, ಗ್ರಾಮ ಪಂಚಾಯ್ತಿ ಅಧ್ಯಕ್ಷ ಸೋಮಲಿಂಗಪ್ಪ,
ಕುಲಪತಿ ಡಾ.ಹನುಮಂತಪ್ಪ, ಡಾ.ವೆಂಕಟಸುಬ್ರಮಣ್ಯಂ ವೇದಿಕೆಯಲ್ಲಿ ಇದ್ದರು.

ಫ್ಯೂಚರ್ ಜನರಲ್ ವಂಚನೆ
: ತಾಲೂಕಿನಲ್ಲಿ ಕೃಷಿ ವಿಮೆಗೆ ಹಣ ಕಟ್ಟಿದ್ದರೂ
ಫ್ಯೂಚರ್ ಜನರಲ್ ವಂಚನೆ ಮಾಡುತ್ತಿದೆ. ಅಧಿಕಾರಿಗಳ ಕುಮ್ಮಕ್ಕಿನಿಂದ ಈ ರೀತಿ ಮಾಡುತ್ತಿದೆ. ಈ ಬಗ್ಗೆ ಕ್ರಮ ಜರುಗಿಸಬೇಕು ಎಂದು ಶಾಸಕ ನಾಗೇಂದ್ರ ಅವರು ಸಚಿವೆ ಶೋಭಾ ಕರಂದ್ಲಾಜೆ ಅವರಿಗೆ ಕೋರಿದರು.