ಹಗರಿ ನದಿ ನೀರಿಗೆ ಕೊಚ್ಚಿ ಹೋದ ವ್ಯಕ್ತಿಯ ರಕ್ಷಣೆ


ಸಂಜೆವಾಣಿ ವಾರ್ತೆ
ಸಿರುಗುಪ್ಪ, ಆ.03: ತಾಲೂಕಿನ ರಾರಾವಿ ಗ್ರಾಮದ ಹತ್ತಿರ ಹರಿಯುವ ವೇದವತಿ ಹಗರಿ ನದಿಯನ್ನು ಮಂಗಳವಾರ ರಾತ್ರಿಯಲ್ಲಿ ಸೇತುವೆ ದಾಟುವಾಗ ಲಾರಿಯ ಚಾಲನ ಆಯತಪ್ಪಿ ನದಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಮತ್ತು ಸಹಾಯಕರು ನದಿಯ ರಭಸದ ನೀರಿಗೆ ಕೊಚ್ಚಿ ಹೋಗಿದ್ದ ಘಟನೆ ಸಿರುಗುಪ್ಪ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಲಾರಿಯ ಮೇಲೆ ಏರಿ ನಿಂತು ಸಾವುಬದುಕಿನೊಂದಿಗೆ ಹೋರಾಟ ಮಾಡುತ್ತಾ ನದಿ ನೀರು ಹೆಚ್ಚಾಗಿ ಕೊಚ್ಚಿ ಹೋಗಿ ಮುಳ್ಳುಗಂಟಿಗಳಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಅಹಮದ್ ಭಾಷ(52ವರ್ಷ) ಮತ್ತು ಹುಸೇನಿ(28ವರ್ಷ) ರಕ್ಷಿಸಲು ರಾತ್ರಿ 9ಗಂಟೆಯಿಂದ ನಿರಂತರ ಕಾರ್ಯಾಚರಣೆ ನಡೆಯಿತು ಬಳ್ಳಾರಿ ಮತ್ತು ಜಿಂದಾಲ್ ಗಳಿಂದ ತರಿಸಲಾದ ಬೋಟ್ ನವರ ತಂಡಗಳು ಬೆಳಗಿನ ಜಾವ 6 ಘಂಟೆ ಸುಮಾರಿಗೆ ಯಾದಗಿರಿ ತಂಡದವರೊಂದಿಗೆ ಬೋಟ್ ಮೂಲಕ ಸಿಕ್ಕಿಹಾಕಿಕೊಂಡ ಅಹ್ಮದ್ ಭಾಷ ಕರೆತರುವಲ್ಲಿ ಯಶಸ್ವಿಯಾದರು. ಆದರೆ ಸಹಾಯಕನ ಹುಡುಕಾಟ ಇನ್ನೂ ನಡೆದಿದೆ.
ನೀರಿಗೆ ಕೊಚ್ಚಿ ಹೋದವರನ್ನು ರಕ್ಷಿಸಲು ಹೋಗಿದ್ದ ಅಗ್ನಿ ಶಾಮಕ ದಳದ ಸಿಬ್ಬಂದಿಯು ನೀರಿನಲ್ಲಿ ಕೊಚ್ಚಿ ಹೋದ ಘಟನೆ ನಡೆಯಿತು.
ವೇದವತಿ ಹಗರಿ ನದಿಯ ಮೇಲಿನ ಪ್ರದೇಶದಲ್ಲಿ ಉತ್ತಮ ಮಳೆಯಾಗಿರುವುದರಿಂದ ಈ ನದಿಗೆ ಒಳ ಹರಿವು ಹೆಚ್ಚಾಗಿದ್ದು, ಪ್ರಯಾಣಿಕರಿಗೆ ಮಾಹಿತಿ ತಿಳಿಸಲು ಯಾವುದೇ ಮುನ್ನೇಚ್ಚರಿಕೆ ಕ್ರಮಕೈಗೊಳ್ಳದ ತಾಲೂಕು ಆಡಳಿತದ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವಾಗಿದೆ.
ಘಟನೆಯ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠ ಅಧಿಕಾರಿಗಳು, ಶಾಸಕ ಎಂ.ಎಸ್.ಸೋಮಲಿಂಗಪ್ಪ, ತಹಶೀಲ್ದಾರ್ ಎನ್.ಆರ್.ಮಂಜುನಾಥ ಸ್ವಾಮಿ, ಸಿ.ಪಿ.ಐ. ಯಶವಂತ ಬಿಸ್ನಳ್ಳಿ, ಪಿ.ಎಸ್.ಐ ರಂಗಯ್ಯ, ಕಂದಾಯ ಅಧಿಕಾರಿ ಮಂಜುನಾಥ, ಬಿಜೆಪಿ ಯುವ ಮೋರ್ಚದ ತಾಲೂಕು ಅಧ್ಯಕ್ಷ ಎಂ.ಎಸ್.ಸಿದ್ದಪ್ಪ ಭೇಟಿ ನೀಡಿದ್ದರು.
ನಂತರ ಶಾಸಕ ಎಂ.ಎಸ್.ಸೋಮಲಿಂಗಪ್ಪ ಮಾತನಾಡಿ  ರಾರಾವಿ ಗ್ರಾಮದ ಹತ್ತಿರ ಸೇತುವೆಯು ತಾಲೂಕಿನಿಂದ ಸೀಮಾಂಧ್ರ ಭಾಗಕ್ಕೆ ಸಂಪರ್ಕ ಕಲ್ಪಿಸುವ  ಹೆದ್ದಾರಿಯಲ್ಲಿ ಮುಂದಿನಗಳಲ್ಲಿ ಇಂತಹ ಘಟನೆಗಳನ್ನು ನಡೆಯದಂತೆ ತಡೆಯುವ ಉದ್ದೇಶದಿಂದ ನೂತನ ಸೇತುವೆ ನಿರ್ಮಿಸಿದ್ದು ಕಾರಣಂತರದಿಂದ ಕಾಮಗಾರಿಯ ವೇಗವು ವಿಳಂಬವಾಗಿತ್ತು ಇದೆ ತಿಂಗಳು ಮುಖ್ಯಮಂತ್ರಿಯಿಂದ ಲೋಕರ್ಪಾಣೆಗೋಳಿಸಿ ಇಂತಹ ಘಟನೆಗಳನ್ನು ತಡೆಯುವ ಪ್ರಮಾಣಿಕ ಪ್ರಯತ್ನ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ತಾಲೂಕು ಆಡಳಿತ ಅಧಿಕಾರಿಗಳು, ಪೊಲೀಸ್ ಇಲಾಖೆ, ಸಿರುಗುಪ್ಪ, ಜಿಂದಾಲ್, ಯಾದಗಿರಿ ಅಗ್ನಿ ಶಾಮಕ ದಳದ ಸಿಬ್ಬಂದಿ, ವಿದ್ಯುತ್ ಇಲಾಖೆಯ ಸಿಬ್ಬಂದಿ ಇದ್ದರು.

Attachments area