ಸಂಜೆವಾಣಿ ವಾರ್ತೆ
ಹಗರಿಬೊಮ್ಮನಹಳ್ಳಿ. ಮಾ.31 ಪಟ್ಟಣದ ಹಗರಿ ಆಂಜನೇಯ ರಥೋತ್ಸವ ಗುರುವಾರ ವಿಜ್ರoಮಣೆಯಿಂದ ಜರುಗಿತು.
ರಥೋತ್ಸವದ ಹಿನ್ನೆಲೆಯಲ್ಲಿ ಬೆಳಗಿನ ಜಾವದಿಂದ ದೇವಸ್ಥಾನದಲ್ಲಿ ವಿಶೇಷ ಪೂಜೆ ಹೋಮ ಅವನ ಜರುಗಿದವು ಭಕ್ತರು ದೇವಸ್ಥಾನ ದರ್ಶನ ಪಡೆದು ಸಾಲಾಗಿ ಪ್ರಸಾದ ಸ್ವೀಕರಿಸಿದರು .
ಸಂಜೆ ಐದು ಗಂಟೆಗೆ ರಥ ಬೀದಿಯಲ್ಲಿ ಅಲಂಕೃತ ಪಲ್ಲಕ್ಕಿ ಯಲ್ಲಿ ಉತ್ಸವಮೂರ್ತಿಯನ್ನು ಮೆರವಣಿಗೆಯ ಮೂಲಕ ತಂದು ರಥದ ಸುತ್ತ ಮೂರು ಪ್ರದರ್ಶನ ಹಾಕಿದರು. ಡೊಳ್ಳು ವೀರಗಾಸೆ ಗೊಂಬೆ ಕುಣಿತ ಡ್ರಮ್ ಸೆಟ್ ತಂಡಗಳಿಂದ ಮೆರವಣಿಗೆಯ ಮೂಲಕ ರಥಕ್ಕೆ ಕಳಸ ಬೆಳಗುವ ಮೂಲಕ ಚಾಲನೆ ನೀಡಲಾಯಿತು ಬಳಿಕ ರಥದಲ್ಲಿ ಪ್ರತಿಷ್ಠಾಪಿಸಿ ರಥದ ಪತಾಕಿಯನ್ನು ಹರಾಜು ಹಾಕಲಾಯಿತು ಪುರಸಭೆ ಸದಸ್ಯ . ವಿ ವೀರೇಶ್ 11.50 ಲಕ್ಷ ರೂ. ಕೂಗುವ ಮೂಲಕ ಪತಾಕೆಯನ್ನು ತಮ್ಮದಾಗಿಸಿಕೊಂಡರು. ರಥವು ಮುಂದಕ್ಕೆ ಚಲಿಸುತ್ತಿದ್ದಂತೆ ನೂರಾರು ಭಕ್ತರು ರಥಕ್ಕೆ ಬಾಳೆಹಣ್ಣು ಎಸೆಯುವ ಮೂಲಕ ಭಕ್ತಿ ಸಮರ್ಪಿಸಿದರು. ಯುವಕರು ಜಯ ಘೋಷ ಹಾಕುತ್ತ ರಥವನ್ನು ಎಳೆಯತ್ತಾ ದೇವರಿಗೆ ಜಯಕಾರ ಹಾಕಿದರು.