ಹಗರಿಯಲ್ಲಿ ಪಾಣ್ಯಂ ಸಿಮೆಂಟ್ ಕಾರ್ಖಾನೆಯ ಕಾರ್ಮಿಕರ ಪುನರ ಮಿಲನ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ ಡಿ.25 : ತಾಲೂಕಿನ ಹಗರಿ ಗ್ರಾಮದ ಶ್ರೀಸೋಮೇಶ್ವರ ದೇವಸ್ಥಾನದ ಆವರಣದಲ್ಲಿ ಪಾಣ್ಯಂ ಸಿಮೆಂಟ್ ಮಿನೆರಲ್ ಕಾರ್ಖಾನೆಯ ಕಾರ್ಮಿಕರ ಪುನರ್ ಮಿಲನ ಕಾರ್ಯಕ್ರಮ ನಿನ್ನೆ ನಡೆಯಿತು.
ಹಗರಿ ಪಿ.ಗಾದಿಲಿಂಗಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ  ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂದ್ರ ಪ್ರದೇಶದ ಕಾರ್ಮಿಕ ಸಚಿವ ಗುಮ್ಮನೂರು ಜಯರಾಮ್ ಮಾತನಾಡಿ, ನಾನು ಇದೇ ಕಾರ್ಖಾನೆಯಲ್ಲಿ ಮೊದಲು ಕೆಲಸ ಮಾಡಿದ್ದು.  ಅಲ್ಲದೆ ಇಲ್ಲಿ ಇರುವ ಜನರನ್ನು ನೋಡಿ ತಮ್ಮ ಹಳೆಯ ನೆನಪುಗಳನ್ನು ನೆನಪಿಸಿಕೊಂಡರು.
ಅಂದು ನಾನು ಸಾಮಾನ್ಯ ಕಾರ್ಮಿಕನಾಗಿ ಇದ್ದು ಕೆಲಸ ಮಾಡುತ್ತಿದ್ದೆ, ಇಂದು  ತಮ್ಮೆಲ್ಲರ ಪ್ರೀತಿ ಅಭಿಮಾನದಿಂದ ಕೆಲಸವನ್ನು ಮಾಡಿ ಆಂಧ್ರದಲ್ಲಿ ರಾಜಕೀಯದಲ್ಲಿ ತೊಡಗಿಕೊಂಡು  ಆಲೂರು ವಿಧಾನ ಸಭಾ ಕ್ಷೇತ್ರದ ವೈ.ಎಸ್.ಅರ್.ಕಾಂಗ್ರೆಸ್ ಸರ್ಕಾರದಲ್ಲಿ ಶಾಸಕನಾಗಿ ಮತ್ತೊಮ್ಮೆ ಜನಗಳ ಆಶೀರ್ವಾದದಿಂದ ಮತ್ತೆ  ಗೆದ್ದು ಕಾರ್ಮಿಕ ಸಚಿವನಾಗಿ  ಈ ಸಮಾರಂಭಕ್ಕೆ ಅಧ್ಯಕ್ಷತೆವಹಿಸಿರುವುದು ಸಂತೋಷವಾಗಿದೆ.  ಯಾಕೆಂದರೆ ನಾನು ಎಸ್ಟೆ ಇದ್ದರು ಕೂಡ  ಈ ಭಾಗಕ್ಕೆ ರೈತರ,ಕಾರ್ಮಿಕರ ಪರವಾಗಿ  ಬೆನ್ನೆಲುಬಾಗಿ ನಿಲ್ಲುವೆ ಎಂದರು.
ಕಾರ್ಯಕ್ರಮದಲ್ಲಿ ಶ್ರೀನಾಥ್, ಬ್ಯಾಲಚಿಂತೆ ವಲಿ, ಮಧು, ಬಾಬುರೆಡ್ಡಿ, ಮೀನಳ್ಳಿ ಚಂದ್ರ, ಸೇರಿದಂತೆ ಕಾರ್ಖಾನೆಯ ಅಧಿಕಾರಿಗಳು, ನಿವೃತ್ತ ಅಧಿಕಾರಿಗಳು, ಕಾರ್ಖಾನೆಯ ಕಾರ್ಮಿಕರು, ಕಾರ್ಖಾನೆಯ ಸಿಬ್ಬಂದಿ ವರ್ಗದವರು, ಕಾರ್ಖಾನೆಯ ಎಲ್ಲ ಕುಟುಂದವರು ಪಾಲ್ಗೊಂಡಿದ್ದರು.