ಹಗರಿಬೊಮ್ಮನಹಳ್ಳಿ ಸೀಲ್ ಡೌನ್ ಗೆ ನಿರ್ಧಾರ

ಹಗರಿಬೊಮ್ಮನಹಳ್ಳಿ.ಮೇ ೧೭ ಸಾರ್ವಜನಿಕರ ಮನವಿಗೆ ಪಟ್ಟಣದ ವರ್ತಕರು ತಮ್ಮ ಅಂಗಡಿ ಮುಗಟ್ಟುಗಳನ್ನು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಕೊರೊನಾ ಸೋಂಕು ತಡೆಗಟ್ಟಲು ಮುಂದಾಗಬೇಕು ಎಂದು ಸಾರ್ವಜನಿಕರ ಮಾಡಿಕೊಂಡ ಮನವಿಗೆ ಇಂದು ತಹಸಿಲ್ದಾರ್ ಶರಣಮ್ಮ ಇವರ ನೇತೃತ್ವದಲ್ಲಿ ನಡೆದ ವರ್ತಕರ ಸಭೆಯಲ್ಲಿ ದಿನಾಂಕ 21/ 5/2021 ಶುಕ್ರವಾರದಿಂದ ದಿನಾಂಕ 27/5/ 2021 ರ ಶುಕ್ರವಾರದ ವರೆಗೆ ಸೀಲ್ ಡೌನ್ ಮಾಡಲು ಒಪ್ಪಿಗೆ ಸೂಚಿಸಿದರು. ತಮ್ಮ ಕಿರಾಣಿ ಅಂಗಡಿಗಳನ್ನು ಬಂದ್ ಮಾಡಿ ತಾವು ಕೊರೋನಾ ತಡೆಗಟ್ಟಲು ಕ್ರಮ ವಹಿಸುವುದಾಗಿ ವರ್ತಕರ ಸಂಘದ ಪದಾಧಿಕಾರಿಗಳು ಸಭೆಯಲ್ಲಿ ನಿರ್ಧಾರ ತೆಗೆದುಕೊಂಡಿದ್ದಾರೆ. ಕಿರಾಣಿ ವರ್ತಕರ ಸಂಘದ ಅಧ್ಯಕ್ಷರಾದ ಬಸವರೆಡ್ಡಿ ಹಾಗೂ ಬುಕ್ಕಿಟ್ ಗಾರ್ ಗಂಗಣ್ಣ.ಜಿ.ವಿ. ನಂದೀಶ್. ಕುಮಾರ್ . ಪಟೇದ ಕೊಟ್ರೇಶ್ ಇನ್ನು ಹಲವಾರು ಜನರು ಈ ನಿರ್ಧಾರದ ಸಭೆಯಲ್ಲಿ ಭಾಗವಹಿಸಿದ್ದರು ನಿಜಕ್ಕೂ ಈ ನಿರ್ಧಾರದಿಂದ ಸೋಂಕು ಹರಡುವುದಕ್ಕೆ ಬ್ರೇಕ್ ಬೀಳಲಿದೆ. . ಸೀಲ್ ಡೌನ್ ಗೆ ಇನ್ನೂ ಮೂರು ದಿನ ಬಾಕಿ ಇದೆ ಮಂಗಳವಾರ. ಬುಧವಾರ. ಗುರುವಾರ . ಅಗತ್ಯ ವಸ್ತುಗಳನ್ನು ಖರೀದಿಸಲು ಅವಕಾಶವಿದೆ ಸಾರ್ವಜನಿಕರು ಕೊರೋನಾ ತಡೆಗಟ್ಟಲು ಕಿರಾಣಿ ವರ್ತಕರ ನಿರ್ಧಾರಕ್ಕೆ ಸಹಕರಿಸುವುದು ಅಗತ್ಯವಾಗಿರುತ್ತದೆ.