ಹಕ್ಕ ಬುಕ್ಕರು ಕುರುಬ ಸಮಾಜದವರು

ಕೊಟ್ಟೂರು ಏ 03: ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ “ಹಕ್ಕಬುಕ್ಕರು” ಕುರುಬ ಸಮಾಜದವರಲ್ಲ ಎಂಬ ಹೇಳಿಕೆಯನ್ನು ತಾಲೂಕು ಕುರುಬರ ಸಂಘ ಖಂಡಿಸಿದೆ.
ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು
14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು “ಹಕ್ಕಬುಕ್ಕರು” ಸ್ಥಾಪಿಸಿದರು. ಈ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಕುರುಬರು ಎನ್ನುವ ಬಗ್ಗೆ ಎಲ್ಲಾ ಇತಿಹಾಸ ತಜ್ಞರು, ಏಕಕಂಠದಲ್ಲಿ ಸಾರಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಮಾರು 50 ಕ್ಕೂ ಹೆಚ್ಚು ದಾಖಲೆಗಳು ಕುರುಬ ಕುಲಸಂಜಾತರೆಂದು ಸಾಕ್ಷಿ ಹೇಳುತ್ತವೆ,
ಇಷ್ಟೆಲ್ಲಾ ದಾಖಲೆಗಳ ಆಧಾರದ ಮೇಲೆ ಹಕ್ಕಬುಕ್ಕರು ಕುರುಬರು ಆದ ಕಾರಣ ಹಕ್ಕಬುಕ್ಕರ ಸವಿನೆನಪಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ, ಗುಲ್ಬರ್ಗ ವಿಭಾಗದ ಸಿದ್ದರಾಮನಂದಪುರಿ ಸ್ವಾಮೀಜಿಯವರ ಸಾನಿಧ್ಯತೆಯಲ್ಲಿ ಏಪ್ರೀಲ್ 18, 2021 ರಂದು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ದಿನ ಆಚರಿಸುತ್ತಿದೆ.
ಈ ವಿಷಯವನ್ನು ಆಧಾರಿಸಿ ರಾಜನಹಳ್ಳಿ ವಾಲ್ಮೀಕಿ ಗುರು ಪೀಠದ ಧರ್ಮದರ್ಶಿ ಜಂಬಯ್ಯ ನಾಯಕ ಅವರು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕಬುಕ್ಕರು ಕುರುಬ ಜನಾಂಗದವರು ಅಲ್ಲ. ವಾಲ್ಮೀಕಿ ಜನಾಂಗದವರೆಂದು ನೀಡಿರುವ ಹೇಳಿಕೆ ಐತಿಹಾಸಿಕ, ವಾಸ್ತವತೆಗೆ ವಿರುದ್ಧವಾಗಿದೆ.
ನಮ್ಮ ಸಂಘವು ಇವರ ಹೇಳಿಕೆಯನ್ನು ಖಂಡಿಸುತ್ತದೆ. ರಾಂಪುರ ಭರ್ಮಣ್ಣ, ಅಲಬೂರು ಮಂಜುನಾಥ, ಮೂಗಿನ, ಮರಿಯಪ್ಪ ಸೇರಿದಂತೆ ಅನೇಕ ಮುಖಂಡರು ಇದ್ದರು