ಹಕ್ಕ-ಬುಕ್ಕರು ಕುರುಬ ಸಮಾಜದ ಕಿರೀಟಗಳು

ಹಗರಿಬೊಮ್ಮನಹಳ್ಳಿ.. ಏ.೧೯ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹಕ್ಕ-ಬುಕ್ಕರ 14ನೇ ಶತಮಾನದಲ್ಲಿ ವಿದ್ಯಾರಣ್ಯ ಗುರುಗಳ ಮಾರ್ಗದರ್ಶನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪನೆ ಮಾಡಿರುವ ಕುರುಬ ಸಮಾಜದ ಕಿರೀಟಗಳು ಎಂದು ತಾಲೂಕು ಕುರುಬರ ಸಂಘದ ಅಧ್ಯಕ್ಷ ಬುದ್ಧಿ ಬಸವರಾಜ್ ಹೇಳಿದರು
ಪಟ್ಟಣದ ಕನಕ ಭವನದಲ್ಲಿ ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರ ದಿನಾಚರಣೆ ಕಾರ್ಯಕ್ರಮದಲ್ಲಿ ಹಕ್ಕ-ಬುಕ್ಕರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ ಹಕ್ಕ-ಬುಕ್ಕರು ಕುರುಬ ಸಮಾಜದವರು ಎನ್ನುವುದಕ್ಕೆ ನೂರಾರು ದಾಖಲೆಗಳು ಇವೆ ಆದರೆ ಈಗ ಹಕ್ಕ-ಬುಕ್ಕರು ಕುರುಬ ಸಮಾಜದವರು ಅಲ್ಲ ಎನ್ನುವುದು ಸರಿಯಲ್ಲ ಬೇಕಾದ ದಾಖಲೆಗಳನ್ನು ನೋಡಲಿ ಆನಂತರ ಅವರು ಯಾವ ಸಮಾಜಕ್ಕೆ ಸೇರಿದವರು ಎಂಬುದು ತಿಳಿಯುತ್ತದೆ. ಕವಿ ಸರ್ವಜ್ಞ ಕೂಡ ಅವರ ಕಾಲಜ್ಞಾನಿ ವಚನದಲ್ಲಿ ಹಕ್ಕ-ಬುಕ್ಕರು ಕುರುಬರು ಎಂದು ಹೇಳಿದ್ದಾರೆ ಆದರೆ ಈಗ ಕುರುಬರಲ್ಲ ಎಂದು ವಾದ ಮಾಡುತ್ತಿರುವುದು ಸರಿಯಲ್ಲ ಮುಂದಿನ ದಿನಗಳಲ್ಲಿ ಹಕ್ಕ-ಬುಕ್ಕರ ಜಯಂತಿಯನ್ನು ಸರಕಾರ ಆಚರಿಸುವ ದಿನಗಳು ಬರಲಿ ಎಂದರು
ಹಾಲುಮತ ಸಮಾಜದ ಮುಖಂಡರಾದ ಟಿ ರಾಮಲಿಂಗಪ್ಪ .ಮುಟ್ಟಗನಹಳ್ಳಿ ಕೊಟ್ರೇಶ. ಕನಕ ನೌಕರರ ಸಂಘದ ಅಧ್ಯಕ್ಷರಾದ ಎಂ ಎಸ್ ಕಲ್ಗುಡಿ ಧರ್ಮದರ್ಶಿ ಚಿಂತ್ರಪಳ್ಳಿ ಗೋಣೆಪ್ಪ. ದೊಡ್ಡಬಸಪ್ಪ. ಹೊಸಮನೆ ಮಂಜುನಾಥ.ಲೋಕೇಶ್. ಬಾಣದ ಹನುಮಂತ ಹುಲ್ಲೇಶ್ ಮಾತನಾಡಿದರು
ಈ ಸಂದರ್ಭದಲ್ಲಿ ಕುಲಗುರುಗಳಾದ ಕೊಟ್ರಯ್ಯ ಒಡೆಯರ್ ಕೋಗಳಿ ಹನುಮಂತಪ್ಪ ಸೀಗನಹಳ್ಳಿ ಮಾರುತೆಪ್ಪ ಕುಮಾರ್ ಕಂಬಳಿ ಜಂಬಣ್ಣ ಶಿವಾನಂದ ಉಲವತ್ತಿ ಕೊಟ್ರೇಶ್ ಮೋರನಾಳ ಗುರುಸಿದ್ದಪ್ಪ ಮಹೇಶ್ ಗೋಣೆಪ್ಪ ಬರಮನ ಗೌಡ ರಾಮು ರಮೇಶ್ ಬಿಎಂ ಆಂಜನೇಯ ಉಮಾಶಂಕರ್ ಹುಲಗಪ್ಪ ಇತರರು ಇದ್ದರು