ಹಕ್ಕು ಪತ್ರ ವಿತರಣೆ

ಕಾಳಗಿ.ಮಾ.29. ತಾಲೂಕಿನ ಚಿಂಚೋಳಿ ಎಚ್ ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ಬೆಳಿಗ್ಗೆ 9:30 ಕ್ಕೆ 2021-22 ನೇ ಸಾಲಿನ ಬಸವ ವಸತಿ ಮತ್ತು ಡಾ. ಬಿ.ಆರ್.ಅಂಬೇಡ್ಕರ್ ಯೋಜನೆ ಅಡಿಯಲ್ಲಿ ಹೆಚ್ಚುವರಿ ಮನೆಗಳ ಹಕ್ಕು ಪತ್ರಗಳನ್ನು ಅಧ್ಯಕ್ಷರಾದ ಶ್ರೀಮತಿ ಶರಣಮ್ಮ ಎಸ್ ಟೆಂಗಳ ಹಾಗೂ ಉಪಾಧ್ಯಕ್ಷರಾದ ಪ್ರಕಾಶ್ ಎಸ್ ಗಂಜಿ ಹಾಗೂ ಸರ್ವ ಸದಸ್ಯರ ಸಮುಖದಲ್ಲಿ ಫಲನುಭವಿಗಳಿಗೆ ಹಕ್ಕು ಪತ್ರ ವಿತರಿಸಲಾಯಿತು.
ಗ್ರಾಮ ಪಂಚಾಯತ್ ಅಧ್ಯಕ್ಷರು ಮಾತನಾಡಿ ಕಾಳಗಿ ತಾಲೂಕಿನ ಚಿಂಚೋಳಿ ಎಚ್ ಗ್ರಾಮ ಪಂಚಾಯತನಲ್ಲಿ 2021-22ನೇ ಸಾಲಿನ ಹೆಚ್ಚುವರಿ ಬಸವ ವಸತಿ ಮತ್ತು ಅಂಬೇಡ್ಕರ್ ವಸತಿ ಯೋಜನೆ ಅಡಿಯಲ್ಲಿ ಫಲನುಭವಿಗಳಿಗೆ ನೂರಕ್ಕೆ ನೂರಾರಷ್ಟು ಹಕ್ಕು ಪತ್ರ ವಿತರಿಸಿದ ಕೀರ್ತಿ ನಮ್ಮ ಚಿಂಚೋಳಿ ಎಚ್ ಪಂಚಾಯತಕ್ಕೆ ಸಲ್ಲುತ್ತದೆ ಎಂದರು ಈ ಸಂದರ್ಭದಲ್ಲಿ ಜಗನ್ನಾಥ ತೇಲಿ, ಬಾಬು ಮುಸ್ಲಿ, ಸಿದ್ದು ಪಂಗರಗಿ, ಶರಣು ಬಂಕಲಗಿ,ಶಿವರಾಯ ತೀರ್ಥ, ಕಾಶೀನಾಥ್ ಒಡೆಯರಾಜ್, ಮಹೇಬೂಬ್ ಖುರೇಷಿ ಸೇರಿದಂತೆ ಇತರರು ಇದ್ದರು.