ಹಕ್ಕು ಪತ್ರ ವಿತರಣೆ ಮಾಡಿ ಜೈಕರವೇಯಿಂದ ಆಯುಕ್ತರಿಗೆ ಮನವಿ

ಕಲಬುರಗಿ:ಸೆ.20: ನಗರದ ಸರ್ವೆ ನಂ:75 ಮತ್ತು 76 ರ ಎಸ್.ಎಂ. ಕೃಷ್ಣಾ ಆಶ್ರಯ ಕಾಲೋನಿಯಲ್ಲಿ ಬಹಳ ವರ್ಷಗಳಿಂದ 120 ಕುಟುಂಬಗಳು ವಾಸುತ್ತಿರುವ ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಿಗೆ ಬೇರೆ ಕಡೆ ಸರಕಾರದ ಜಾಗವನ್ನು ಗುರುತಿಸಿ ಮನೆಗಳನ್ನು ಕಟ್ಟಿಸಿಕೊಟ್ಟು ಹಕ್ಕು ಪತ್ರ ವಿತರಣೆ ಮಾಡಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಸಚೀನ್.ಎಸ್ ಪರತಾಬಾದ ನೇತೃತ್ವದಲ್ಲಿ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದರು.
ಕರ್ನಾಟಕ ಸರಕಾರವು ಭಾರತದ ಸಂವಿಧಾನ ಪ್ರಕಾರ ಭಾರತದ ಪ್ರಜೆಗಳಾದ ಸೂರು ಇಲ್ಲದ ನಿರ್ಗತಿಕರಿಗೆ ಆಶ್ರಯ ಯೋಜನೆಯಡಿಯಲ್ಲಿ ಸರ್ಕಾರದ ವತಿಯಿಂದ ಮನೆಗಳನ್ನು ಮಂಜೂರು ಮಾಡಿ, ಅವರದೇ ಆದಂತಹ ಆಶ್ರಯ ಕಾಲೋನಿಯನ್ನು ಮಾಡಿರುವುದು ಕರ್ನಾಟಕ ಸರಕಾರಕ್ಕೆ ನಮ್ಮ ಸಂಘಟನೆಯಿಂದ ಹಾರೈಸುತ್ತೇವೆ.
ಆದರೆ ಸದರಿ ಕಲಬುರಗಿ ನಗರದ ಸರ್ವೆ ನಂ:75 ಮತ್ತು 76 ರ ಎಸ್.ಎಂ. ಕೃಷ್ಣಾ ಆಶ್ರಯ ಕಾಲೋನಿಯ ಮನೆಯ ನಿವಾಸಿಗಳು ಅವರೆಲ್ಲರೂ ಕಣ್ಣಿಗೆ ತೆಗೆದುಕೊಂಡು ಸುಮಾರು 12 ವರ್ಷಗಳು ಗತಿಸಿರುತ್ತೇವೆ. ಆದರ ಸದರಿ ಇವರಿಗೆ ತಮ್ಮ ಸರಕಾರದ ವತಿಯಿಂದ ಯಾವುದೇ ಹಕ್ಕು ಪತ್ರವನ್ನು ನೀಡಿರುವುದಿಲ್ಲಾ. ಈಗ ಸದರಿ ಹಕ್ಕು ಪತ್ರಗಳನ್ನು ಬೇರೆಯವರ ಹೆಸರಿಗೆ ಕೊಟ್ಟಿದ್ದು. ಕಾರಣ ಸದರಿ ಇಲ್ಲಿರುವ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ 90 ಮನೆಗಳ ಕುಟುಂಬದವರಿಗೆ ಹಾಗೂ 30 ಅಲ್ಪಸಂಖ್ಯಾತರಿಗೆ ತಾವುಗಳು ತಿಳಿಸಿರುವುದೇನೆಂದರೆ,
ಸದರಿ ಕಲಬುರಗಿ ನಗರದ ಸರ್ವೆ ನಂ:75 ಮತ್ತು 76 ರ ಎಸ್.ಎಂ. ಕೃಷ್ಣಾ ಆಶ್ರಯ ಕಾಲೋನಿಯ ಮನೆಯ ನಿವಾಸಿಗಳಿಗೆ ಮನೆಯನ್ನು ಖಾಲಿ ಮಾಡಿಸಿ, ಬೇರೆ ಕಡೆ ಸರಕಾರದ ಜಾಗವನ್ನು ಗುರುತಿಸಿ, ಸದರಿ ಸ್ಥಳದಲ್ಲಿ ಮನೆಗಳನ್ನು ಕಟ್ಟಕೊಟ್ಟು ಆ ಮನೆಗಳ ಹಕ್ಕುಪತ್ರಗಳನ್ನು ನೀಡುತ್ತಿರೆಂಬ ಭರವಸೆಯನ್ನು ತಾವುಗಳು ನೀಡಿದ್ದು, ಅದರಂತೆ ಮಾನ್ಯರವರು ಸದರಿ ಸರಕಾರದ ಜಾಗವನ್ನು ಗುರುತಿಸಿ, ಈ ಕಡುಬಡವರಿಗೆ ತುರ್ತಾಗಿ ಮನೆಗಳನ್ನು ನಿರ್ಮಿಸಿಕೊಟ್ಟು ಸದರಿ ಫಲಾನುಭವಿಗಳ ಹೆಸರಿಗೆ ಹಕ್ಕು ಪತ್ರವನ್ನು ವಿತರಣಿ ಮಾಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ಸುರೇಶ ಹನಗುಡಿ, ಅಕ್ಷಯ, ಅಂಬು ಮಸ್ಕಿ, ಪ್ರವೀಣ ಸಿಂಗೆ, ನವೀನ್, ನೂರಖಾನ್ ಸೇರಿದಂತೆ ಮಹಿಳೆಯರು ಇದ್ದರು.