ಹಕ್ಕು ಪತ್ರ ನೀಡಿ ಇಲ್ಲಾ ಮತ ಕೇಳಬೇಡಿ
 ರಾಜೀವಗಾಂಧಿ ನಗರದ ನಿ ವಾಸಿಗಳ ಘೋಷಣೆ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮಾ.12:  ನಗರದ ಗ್ರಾಮೀಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ರಾಜೀವ್ ಗಾಂಧಿನಗರ ಮತ್ತು ಜಯನಗರಲ್ಲಿ ಕಳೆದ 70 ವರ್ಷಗಳಿಂದ ವಾಸ ಮಾಡುತ್ತಿರುವ ಜನತೆ ಮೂಲಭೂತ ಸೌಕರ್ಯಗಳಿಂದ  ವಂಚಿತರಾಗಿದ್ದಾರೆ.  
ಇಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗಗಳ ಸಮುದಾಯದ ಸುಮಾರು 300 ಕುಟುಂಬಗಳು ವಾಸವಾಗಿದ್ದು ಕಳೆದ  40 ವರ್ಷಗಳಿಂದ ತಮ್ಮ ಹಕ್ಕು ಪತ್ರಗಳಿಗೆ ಹೋರಾಟವನ್ನು ಮಾಡುತ್ತಿದ್ದಾರೆ. ಸಾಕಷ್ಟು ಬಾರಿ ರಾಜಕೀಯ ಪಕ್ಷದ ನಾಯಕರುಗಳಿಗೆ, ಜಿಲ್ಲಾಧಿಕಾರಿಗಳಿಗೆ ಮನವಿ  ಮಾಡಿದ್ದಾರೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ.  ರಾಜಕೀಯ ನಾಯಕರದ್ದು ಕೇವಲ ಆಶ್ವಾಸನೆಯ ಮಾತುಗಳಾಗಿದ್ದು.  ತಮ್ಮ ಓಟ್ ಬ್ಯಾಂಕಿಗಾಗಿ ಮೂಗಿಗೆ ತುಪ್ಪ ಹಚ್ಚುವ ಕೆಲಸವನ್ನು ಮಾಡಿ ಹೋಗುತ್ತಿದ್ದಾರೆ.
ಅದಕ್ಕಾಗಿ 2023 ಸಾರ್ವತ್ರಿಕ ಚುನಾವಣೆಯಲ್ಲಿ ನಮಗೆ ಹಕ್ಕುಪತ್ರ ನೀಡಿದವರಿಗೆ ನಮ್ಮ ಮತಹಾಕುತ್ತೇವೆ.  ಇಲ್ಲವಾದಲ್ಲಿ ಚುನಾವಣೆ  ಬಹಿಷ್ಕಾರ ಮಾಡುವುದಾಗಿ ಘೋಷಣೆ ಮಾಡಿ ಬ್ಯಾನರ್ ಹಾಕಿ. ಪೋಟೋರಾಜೀವ್ ಗಾಂಧಿ ನಗರದ ನಿವಾಸಿಗಳಾದ   ಶಿವರಾಮ. ಷಣ್ಮುಖ, ವೆಂಕಟೇಶ. ಈರಣ್ಣ ಬಾಬು.ನಾರಾಯಣ. ವಸಂತಮ್ಮ , ತುಕಾರಾಂ ಜಂಬುನಾಥ.ಇನ್ನೂ ಅನೇಕ ಮಹಿಳೆಯರು ಮತ್ತು ಮುಖಂಡರು ತಮ್ಮ ಹಕ್ಕು ಪತ್ರ ನೀಡಬೇಕೆಂಬ ಘೋಷಣೆ ಕೂಗಿದ್ದಾರೆ.