ಹಕ್ಕು ಚಲಾಯಿಸಿದ ಮೋದಿ

ಅಹಮದಾಬಾದ್, ಮೇ.೭- ಉತ್ತರ ಪ್ರದೇಶದ ವಾರಾಣಸಿ ಲೋಕಸಭಾ ಕ್ಷೇತ್ರದ ಸಂಸದರೂ ಅಗಿರುವ ಪ್ರಧಾನಿ ನರೇಂದ್ರ ಮೋದಿ ಅವರು ತವರು ರಾಜ್ಯ ಗುಜರಾತ್ ನ ಅಹಮದಾಬಾದ್‌ನ ಶಾಲೆಯ ಮತಗಟ್ಟೆಯಲ್ಲಿಂದು ಮತದಾನ ಮಾಡಿದರು.
ನಗರದ ರಾನಿಪ್ ಪ್ರದೇಶದಲ್ಲಿರುವ ನಿಶಾನ್ ಹಿರಿಯ ಪ್ರಾಥಮಿಕ ಶಾಲೆ ಮತಗಟ್ಟೆಯಲ್ಲಿ ಪ್ರಧಾನಿ ತಮ್ಮ ಸಂವಿಧಾನಬದ್ದ ಹಕ್ಕು ಚಲಾವಣೆ ಮಾಡಿದರು.
ಬೆಳಗ್ಗೆ ೭.೩೦ಕ್ಕೆ ಮತದಾನ ಕೇಂದ್ರಕ್ಕೆ ಆಗಮಿಸಿ ಪ್ರಧಾನಿ ಮತದಾನ ಕೇಂದ್ರದಲ್ಲಿ ಕೇಂದ್ರ ಸಚಿವ ಅಮಿತ್ ಶಾ ಅವರನ್ನು ಸ್ವಾಗತಿಸಿದರು ಇಬ್ಬರು ನಾಯಕರು ಬೂತ್‌ಗೆ ತೆರಳಿ ಮತದಾನ ಮಾಡಿದರು.ಪ್ರಧಾನಿ ಮೋದಿ ಅವರನ್ನು ನೋಡಲು ಅಪಾರ ಸಂಖ್ಯೆಯಲ್ಲಿ ಜನಸ್ತೋಮ ರಸ್ತೆಬದಿಯಿಂದ ಹರ್ಷೋದ್ಘಾರ ಮಾಡಿ ಅವರಿಗಾಗಿ ಘೋಷಣೆಗಳನ್ನು ಕೂಗಿದರು.ಮತಗಟ್ಟೆಗೆ ತೆರಳಿದ ಅವರು, ಪ್ರಧಾನಿಯವರ ಭಾವಚಿತ್ರದಲ್ಲಿ ಬೆಂಬಲಿಗರಿಗೆ ತಮ್ಮ ಹಸ್ತಾಕ್ಷರವನ್ನು ನೀಡಿದರು.
ಮತ ಚಲಾಯಿಸುವಂತೆ ಮನವಿ
ಪ್ರಜಾಪ್ರಭುತ್ವದಲ್ಲಿ ಇದು ದೊಡ್ಡ ಹಬ್ಬ ಹೆಚ್ಚಿನ ಸಂಖ್ಯೆಯಲ್ಲಿ ಮತ ಚಲಾಯಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಜನರಿಗೆ ಕರೆ ನೀಡಿದರು.
“ನಮ್ಮ ದೇಶದಲ್ಲಿ ’ಮತದಾನ’ಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ ಮತ್ತು ಅದೇ ಉತ್ಸಾಹದಲ್ಲಿ ದೇಶವಾಸಿಗಳು ಸಾಧ್ಯವಾದಷ್ಟು ಮತ ಚಲಾಯಿಸಬೇಕು. ನಾಲ್ಕು ಸುತ್ತಿನ ಮತದಾನ ಇನ್ನೂ ಮುಂದಿದೆ” ಆ ವೇಳೆಯೂ ಹೆಚ್ಚಿನ ಮತದಾನ ಮಾಡುವಂತೆ ಮನವಿ ಮಾಡಿದರು