ಹಕ್ಕುಗಳನ್ನು ಪಡೆದುಕೊಳ್ಳಲು ಮಹಿಳೆಯರು ಸಂಘಟಿತರಾಗಿ: ಫಾದರ್ ಮಾಚದೋ

ವಿಜಯಪುರ, ಜ.4-ತೊಟ್ಟಿಲು ತೂಗುವ ಕೈ ಜಗತ್ತನ್ನೆ ತೂಗಬಲ್ಲದು ಎಂಬ ಮಾತಿದ್ದರು ಮಹಿಳೆಯರು ಮಕ್ಕಳು ಇಂದು ಎಲ್ಲ ಕ್ಷೇತ್ರಗಳಲ್ಲೂ ನಾನಾ ರೀತಿಯ ಶೋಷಣೆಗೆ ಒಳಗಾಗುತ್ತಿದ್ದಾರೆ. ಕಾರಣ ಮಹಿಳೆಯರು ಮಕ್ಕಳ ಸಂಘಟಿತರಾಗಿ ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಬೇಕೆಂದು ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಮುಖ್ಯಸ್ಥರಾದ ಫಾದರ್ ಟಿ ವೋಲ್ ಮಾಚದೋ ಕರೆ ನೀಡಿದರು.
ನಗರದ ಜಾಡರಗಲ್ಲಿ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಅನೌಪಚಾರಿಕ ಶಿಕ್ಷಣ ಸಂಸ್ಥೆ, ಮಹಿಳಾ ಸ್ವ-ಸಹಾಯ ಸಂಘಗಳ ಒಕ್ಕೂಟ ಹಾಗೂ ಬಾಲಕಿರಣ ಘಟಕಗಳ ಸಂಯುಕ್ತ ಆಶ್ರಯದಲ್ಲಿ ಅಸಂಘಟಿತ ಯುವಕ-ಯುವತಿಯರ ಯುನಿಯನ್‍ನ ಸದಸ್ಯರಿಗೆ ಏರ್ಪಡಿಸಿದ್ದ ಮಾನವ ಹಕ್ಕುಗಳ ತರಬೇತಿ ಶಿಬಿರ ಹಾಗೂ ಹೊಸವರ್ಷದ ಸಂಭ್ರಮಾಚರಣೆಯ ಕೇಕ ಕತ್ತರಿಸಿ ಸಿಹಿವಿತರಿಸಿ ಮಾತನಾಡಿದ ಅವರು ಎಲ್ಲ ಮಹಿಳೆಯರು-ಮಕ್ಕಳು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ. ನಾವು ಬದುಕಬೇಕು ಮತ್ತೊಬ್ಬರನ್ನು ಗೌರವಯುತವಾಗಿ ಬದುಕಲು ಬಿಡಬೇಕು. ಇತರರ ಹಕ್ಕುಗಳನ್ನು ಕಸಿದುಕೊಂಡು ಬದುಕುವದು ಮಾನವನ ಲಕ್ಷಣವಲ್ಲ. ಕರಣ ಪ್ರತಿಯೊಬ್ಬರು ಪರಸ್ಪರ ಶಾಂತಿ ಪ್ರೀತಿ ಸೌಹಾರ್ದತೆ ಗೌರವದ ಬದುಕು ಸಾಗಿಸಬೇಕೆಂದರು.
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಸದಸ್ಯ ನ್ಯಾಯವಾದಿ ದಾನೇಶ ಅವಟಿ ಕಾರ್ಯಕ್ರಮದ ಮುಖ್ಯ ಅತಿಥಿ ಉಪನ್ಯಾಸಕರಾಗಿ ಆಗಮಿಸಿ ಮಾತನಾಡಿ, ಮಾನವ ತನ್ನ ಜೀವಮಾನವಿಡಿ ಮತ್ತೊಬ್ಬರ ತಪ್ಪುಗಳನ್ನು ಕಂಡು ಹಿಡಿಯುವದರಲ್ಲಿ ಕಾಲಹರಣ ಮಾಡದೇ ಪ್ರತಿಯೊಬ್ಬರಲ್ಲು ಇರುವ ಒಳ್ಳೆಯ ಗುಣಗಳನ್ನು ಕಂಡು ಧೂತ್ಮಕ ಚಿಂತನೆಗಳೊಂದಿಗೆ ಒಳ್ಳೆಯ ಗುರಿ ಮತ್ತು ಭರವಸೆಯೊಂದಿಗೆ ಜೀವನ ಸಾಗಿಸಬೇಕು ಮತ್ತು ಪರರ ಕಷ್ಟ ಸುಖಗಳಲ್ಲಿ ಭಾಗಿಗಳಾಗಿ, ಸಂವಿಧಾನಬದ್ಧವಾಗಿ ಹಕ್ಕು ಕರ್ತವ್ಯ ಮಾನವೀಯಮೌಲ್ಯ, ಜಾತ್ಯಾತೀತ ಭಾವನೆಯೊಂದಿಗೆ ಬದುಕಿದಾಗ ವಿಶ್ವದಲ್ಲಿ ಸುಖ ಶಾಂತಿ ನೆಮ್ಮದಿ ಕಾಣಲು ಸಾಧ್ಯ ಎಂದರು.
ಮಲ್ಲಿಕಾರ್ಜುನ ದೇವಸ್ಥಾನ ಸಮಿತಿ ಅಧ್ಯಕ್ಷರ ಗೊಳಸಂಗಿ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಸಾಂದರ್ಭಿಕವಾಗಿ ಮಾತನಾಡಿದರು. ಶ್ರೀಮತಿ ಕಲಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನೌಪಚಾರಿಕ ಶಿಕ್ಷಣ ಸಂಸ್ಥೆಯ ಮಿನಾಕ್ಷಿ ಸಿಂಗೆ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕುಮಾರಿ ರೂಪಾ ಸಾಲಿ ಪ್ರಾರ್ಥಿಸಿದರು. ಕುಮಾರಿ ಅಕ್ಷತಾ ಗೊಳಸಂಗಿ ಪ್ರತಿಜ್ಞಾನವಿಧಿ ಭೋದಿಸಿದರು. ಕುಮಾರಿ ಸಮೃದ್ಧಿ ನಿರೂಪಿಸಿದರು. ಕೀರ್ತಿ ಸಾಲಿ ವಂದಿಸಿದರು.
ಅರ್ಪಿತಾ ಗೊಳಸಂಗಿ, ಅಂಕಿತಾ ಗೊಳಸಂಗಿ, ಸಾವಿತ್ರಿ ಹಿರೇಮಠ, ಕಾವ್ಯ ತಳವಾರ, ಮುಂತಾದವರು ಉಪಸ್ಥಿತರಿದ್ದರು.