ಹಕ್ಕಿಪಿಕ್ಕಿ ಸಮುದಾಯಕ್ಕೆ ಆಹಾರ ಕಿಟ್ ವಿತರಣೆ

ಹಗರಿಬೊಮ್ಮನಹಳ್ಳಿ .ಮೇ.೩೦ ಬ್ರೆಡ್ಸ್ ಬೆಂಗಳೂರು,ಡಾನ್ ಬೊಸ್ಕೋ ಸಮಾಜ ಸೇವಾ ಸಂಸ್ಥೆ ಹೊಸಪೇಟೆ,ತಾಲೂಕು ಆಡಳಿತ ಇವರ ಸಂಯುಕ್ತಾಶ್ರಯದಲ್ಲಿ ಶನಿವಾರ ಅಲೆಮಾರಿ,ಸಿಂಧೋಗಿ,ಅಕ್ಕಿ ಪಿಕ್ಕಿ ಸಮುದಾಯದ ಕುಟುಂಬಗಳಿಗೆ ದಿನಸಿ ಕಿಟ್ ಗಳನ್ನು ವಿತರಣೆ ಮಾಡಲಾಯಿತು
ಈ ಸಂದರ್ಭದಲ್ಲಿ ತಾಲೂಕು ದಂಡಾದಿಕಾರಿಗಳು ಅಗಿರುವ ಶರಣಮ್ಮ ,ಡಾನ್ ಬೊಸ್ಕೋ ನಿರ್ದೇಶಕರು ಅಗಿರುವ ಪಾಧರ್ ಅನಂದ್ ರವರಿಂದ ಹಾಗು ತೋಟಗಾರಿಕಾ ಸಹಾಯಕ ನಿರ್ದೇಶಕರಿಂದ ಸಾಂಕೆಂತಿಕವಾಗಿ ವಿತರಣೆ ಮಾಡಲಾಯಿತು ಈ ಸಂದರ್ಭದಲ್ಲಿ ಡಾನ್ ಬೊಸ್ಕೋ ನಿರ್ದೇಶಕರಾದ ಪಾಧರ್ ಅನಂದ್ ರವರುಮಾತನಾಡಿ ಇಂತಹ ಕೆಲಸವಿಲ್ಲದ ಸಮಯದಲ್ಲಿ ನಮ್ಮ ಸಂಸ್ಥೆಯಿಂದ ಅಲೆಮಾರಿ 100 ಕುಟುಂಬಗಳಿಗೆ ನಾವು ಈ ದಿನಸಿ ಕಿಟ್ ಗಳನ್ನು ವಿತರಣೆ ಮಾಡುತ್ತಿದ್ದೇವೆ,ಇದರ ಸದುಪಯೋಗವನ್ನ ಪಡೆದುಕೊಳ್ಳಿ ಅರೋಗ್ಯವಾಗಿರಿ ಎಂದು ಹೇಳಿದರು,ನಂತರ ತಾಲೂಕು ದಂಡಾದಿಕಾರಿಗಳು ಮಾತನಾಡಿ ಎಲ್ಲರೂ ಮಾಸ್ಕ್ ಅನ್ನು ದರಿಸಿಕೊಳ್ಳಿ,ಸಾಮಾಜಿಕ ಅಂತರ ಕಾಯ್ದುಕೊಳ್ಳಿ,ಸ್ವಚ್ಚತೆಯನ್ನ ಕಾಪಾಡಿಕೊಳ್ಳಿ ಎಂದು ಅರಿವನ್ನು ಮೂಡಿಸಿದರು,ಜೊತೆಗೆ ಸರಕಾರದ ಜೊತೆ ಸಂಘ ಸಂಸ್ಥೆಗಳು,ದಾನಿಗಳು ಮುಂದೆ ಬಂದಿರುವುದಕ್ಕೆ ಶ್ಲಾಘಿಸಿದರು,ಈ ಸಂದರ್ಭದಲ್ಲಿ ಡಾನ್ ಬೊಸ್ಕೋ ಸಂಸ್ಥೆಯ ಸಿಬ್ಬಂದಿಗಳು ಆಗಿರುವ ಬ್ರದರ್ ಸಂದೇಶ್,ಶರಣಪ್ಬ ಬಾಣದ ನಾಗರಾಜ,ಸ್ವಾಮಿ,ಸರಕಾರಿ ಅಧಿಕಾರಿಗಳು,ಊರಿನ ಮುಖಂಡರು ಇದ್ದರು.