ಹಕ್ಕಿಪಿಕ್ಕಿ ಕುಟುಂಬಕ್ಕಿಲ್ಲ ಸೂರು

ಔರಾದ :ಮಾ.23: ದೇಶಕ್ಕೆ ಸ್ವತಂತ್ರ ದೊರಕಿ ಅನೇಕ ದಶಕಗಳು ಕಳೆದರು ಹಕ್ಕಿ ಮುತ್ತು ಜನಾಂಗಕ್ಕೆ ಇಂದಿಗೂ ಸ್ವತ ನೇಲೆ ಇಲ್ಲದೆ ಕಂಗಾಲಾಗಿದ್ದಾರೆ. ಅವರಿಗೆ ನೇಲೆ ಇಲ್ಲದ ಕಾರಣ ಒಂದು ಸ್ಥಳ ದಿಂದ ಮತ್ತೊಂದು ಸ್ಥಳಕ್ಕೆ ಸೂಡು ಬಿಸಿಲಿನಲ್ಲಿ ಚಿಕ್ಕ ಪುಟ್ಟ ತಮ್ಮ ಮಕ್ಕಳ ಜೊತೆ
ಅಲೆದಾಡುವ ಪರಿಸ್ಥಿತಿ ಅವರದಾಗಿದೆ.

ಹಲವು ಖಾಸಗಿ ಸ್ಥಳದಲ್ಲಿ ಬಿಡಾರ ಹುಡಿದ್ದರು ಆದರೆ ಆ ಸ್ಥಳದ ಮಾಲಿಕರು ನಮ್ಮನ್ನು ಅಲ್ಲಿಂದ ಖಾಲಿಮಾಡಿಸುತ್ತಾರೆ ನಾವು ಎಲ್ಲಿ ಬದುಕಬೇಕು..? ನಮ್ಮ ಅಳಲನ್ನು ಸುಮಾರು ಬಾರಿ ಜನಪ್ರತಿನಿದಿಗಳಿಗೆ ತಿಳಿಸಿದರು ಹುಸಿ ಆಶ್ವಾಸನೆ ನೀಡಿ ಚುನಾವಣಾ ಸಂದರ್ಭದಲ್ಲಿ ಮನೆ ಮಂಜುರಿ ಮಾಡಿಕೊಡಲಾಗುವದು ಎಂದು ಹೇಳಿ ನಮ್ಮಿಂದ ಮತ ಹಾಕಿಸಿಕೊಳ್ಳುತ್ತಾರೆ. ಇನ್ನು ಐದು ವರ್ಷದ ನಂತರ ಮುಖ ತೊರಿಸುವ ಇವರು ನಮ್ಮ ನಾಯಕರು ಇರುವದು ಬೇಸರದ ಸಂಗತಿಯಾಗಿದೆ ಎಂದರು.

ಈ ಕುಟುಂಬದವರಿಗೆ ಸುರಕ್ಷಿತ ಬದುಕು ನಡೆಸಲು ಕಠಿಣವಾಗಿದೆ ಮೊದಲೆ ಕೊರೊನಾ ಭೀತಿಯಿಂದ ಕೈಯಲ್ಲಿ ಕೇಲಸವಿಲ್ಲದೆ ಕಂಗಾಲಾದ ಜನರ ಆಸರೆಗೆ ತಾಲೂಕಾಡಳಿತ ಮತ್ತು ಜಿಲ್ಲಾಡಳಿತ ಮುಂದಾಗಬೇಕಾಗಿದೆ…ಈ ಕುಟುಂಬಗಳು ಸುಡುವ ಬಿಸಿಲಿನಲ್ಲಿಯೆ ಬದುಕುತ್ತಿದ್ದಾರೆ ಇವರ ಈ ಸಂಕಷ್ಟ ಸರ್ಕಾರ ಕೂಡಲೆ ಸೂರು ಕಲ್ಪಿಸುವ ಮೂಲಕ ಮಾನವಿಯತೆ ಕಾಪಾಡಬೇಕು.