ಹಕ್ಕಿಜ್ವರ: ರಾಜ್ಯ ವಿಪತ್ತು ಘೋಷಿಸಿದ ಕೇರಳ

ತಿರುವನಂತಪುರ, ಜ 5- ಮಾರಕ ಕೊರೊನಾದಿಂದ ದೇಶ ಇನ್ನೂ ‌ಹೊರಬಂದಿಲ್ಲ.‌ಇದರ ಬೆನ್ನಲ್ಲೇ ಹಕ್ಕಿ ಜ್ವರ‌ ಭೀತಿಯ ಅಲೆಯನ್ನೆ ಸೃಷ್ಟಿಸಿದ್ದು, ಈ ಕಾಯಿಲೆಯನ್ನು ರಾಜ್ಯ ವಿಪತ್ತು ಎಂದು ಕೇರಳ ಸರ್ಕಾರ ಘೋಷಿಸಿದೆ.‌
ಎರಡು ಜಿಲ್ಲೆಗಳಲ್ಲಿ ಹಕ್ಕಿ ಜ್ವರ ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ.
ಹಿಮಾಚಲ ಪ್ರದೇಶದಲ್ಲಿ ಹಕ್ಕಿ ಜ್ವರ ಪ್ರಕರಣಗಳು ವರದಿಯಾಗಿವೆ. ರಾಜಸ್ಥಾನ, ಮಧ್ಯಪ್ರದೇಶ ರಾಜ್ಯಗಳಲ್ಲೂ ಕಾಣಿಸಿಕೊಂಡಿದ್ದು ಆತಂಕಕ್ಕೆ ಕಾರಣವಾಗಿದೆ.
ಕೇರಳದ ಅಳಪ್ಪುಳದ ಕಾರ್ತಿಪಳ್ಳಿ ಕುಟ್ಟನಾಡು, ಕೋಟ್ಟಯಂನ ನೀಂದೂರ್ ನಲ್ಲಿ ಹಕ್ಕಿ ಜ್ವರದ ಪ್ರಕರಣಗಳು ವರದಿಯಾಗಿದ್ದು ಈ ಜ್ವರ ಬೇರೆ ಜಿಲ್ಲೆಗಳಿಗೆ ಹರಡುವುದನ್ನು ತಪ್ಪಿಸಲು 50 ಸಾವಿರ ಹಕ್ಕಿಗಳನ್ನು ಕೊಂದು ಹಾಕಲಾಗಿದೆ.
ಮುಂಜಾಗ್ರತಾ ಕ್ರಮವಾಗಿ, ಕೇರಳದಿಂದ ಕೋಳಿ ಹಾಗೂ ಮೊಟ್ಟೆಗಳನ್ನು ಇರುವುದನ್ನು ತಮಿಳುನಾಡು ಸರ್ಕಾರ ನಿರ್ಬಂಧ ವಿಧಿಸಿದೆ.

ಹಿಮಾಚಲ ಪ್ರದೇಶದ ಕಂಗ್ರಾ ಜಿಲ್ಲೆಯ ಪಾಂಗ್‌ ಅಣೆಕಟ್ಟು ಬಳಿ, ವಲಸೆ ಬಂದಿದ್ದ ಸಾವಿರಾರು ಹಕ್ಕಿಗಳು ಸತ್ತು ಬಿದ್ದಿದ್ದು, ಅವುಗಳು ಸಾವಿಗೆ ಹಕ್ಕಿ ಜ್ವರವೇ ಕಾರಣ ಎಂಬುದು ಪರೀಕ್ಷೆಗಳಿಂದ ದೃಢಪಟ್ಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.