ಹಕ್ಕಬುಕ್ಕರು ಕುರಬರಲ್ಲ ಹೇಳಿಕೆಗೆ ಹಾಲುಮತ ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನ ಖಂಡನೆ

ಬಳ್ಳಾರಿ ಏ 06 : ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ “ಹಕ್ಕಬುಕ್ಕರು” ಕುರುಬ ಸಮಾಜದವರಲ್ಲ ಎಂಬ ವಾಲ್ಮೀಕಿ ಪೀಠದ ಧರ್ಮ ದರ್ಶಿ ಜಂಬಣ್ಣ ನಾಯಕ ನೀಡಿರುವ ಹೇಳಿಕೆಯನ್ನು ಹಾಲುಮತ ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನ ಖಂಡನೆ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಪ್ರತಿಷ್ಠಾನದ ಅಧ್ಯಕ್ಷ ಬಿ.ಪೋಲಪ್ಪ, ಖಜಾಂಚಿ ಡಿ.ಗಂಗಾಧರಸ್ವಾಮಿ ಅವರು
14 ನೇ ಶತಮಾನದಲ್ಲಿ ವಿಜಯನಗರ ಸಾಮ್ರಾಜ್ಯವನ್ನು “ಹಕ್ಕಬುಕ್ಕರು” ಸ್ಥಾಪಿಸಿದರು. ಈ ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರು ಕುರುಬರು ಎನ್ನುವ ಬಗ್ಗೆ ಎಲ್ಲಾ ಇತಿಹಾಸ ತಜ್ಞರು, ಏಕಕಂಠದಲ್ಲಿ ಸಾರಿದ್ದಾರೆ. ಇದಕ್ಕೆ ಸಾಕ್ಷಿಯಾಗಿ ಸುಮಾರು 50 ಕ್ಕೂ ಹೆಚ್ಚು ದಾಖಲೆಗಳು ಕುರುಬ ಕುಲಸಂಜಾತರೆಂದು ಸಾಕ್ಷಿ ಹೇಳುತ್ತವೆ,
ಯಾರ ಹೆಸರನ್ನು ಹೇಳಿಕೊಂಡು ಎಸ್ಟಿ ಮೀಸಲಾತಿ ಪಡೆಯುವ ಅನಿವಾರ್ಯತೆ ನಮ್ಮ ಸಮಾಜಕ್ಕಿಲ್ಲ. ವಿಜಯನಗರ ಸಾಮ್ರಾಜ್ಯದ ಬಗ್ಗೆ ಗೊತ್ತಲ್ಲದೆ ಮಾತನಾಡುವವರು ಬೇಕಾದರೆ. ಚಿಂತಕ ಚಂದ್ರಕಾಂತ್ ಬಿಜ್ಜರಗಿ ಅವರ ಕುರುಬರು ಆಳಿದ ವಿಜಯನಗರ ಸಾಮ್ರಾಜ್ಯ ಎಂಬ ಕೃತಿ ಓದಲಿ.
ವಿದೇಶಿ ತಜ್ಞರ ಹೇಳಿಕೆಗಳು, ಗೆಜೆಟ್ಟಿಯ‌ರ್ ಗಳು, ಕೈಪಿಯತ್ತುಗಳು, ಗದ್ಯಕೃತಿಗಳು, ಕಾವ್ಯಗಳು, ಶಾಸನಗಳು ಸರ್ವಜ್ಞನ ತ್ರಿಪದಿ, ಜನಪದ ಹಾಡು-ಕಥೆ-ವಾಡಿಕೆಗಳು ಇವುಗಳಲ್ಲಿ ಸಹ ಕುರುಬರು ಎಂದಿದೆ.
ಡಾ.ಲಿಂಗದಳ್ಳಿ ಹಾಲಪ್ಪನವರ ಕರ್ನಾಟಕ ಸಾಮ್ರಾಜ್ಯ ವಿಜಯನಗರ ಕೃತಿಯಲ್ಲಿ ಸಂಗಮರು ಬಿಟ್ಟು ಉಳಿದವರೆಲ್ಲ ಕುರುಬರು ಎಂದಿದೆ.
ರಾಬರ್ಟ್ ಸಿವೆಲ್, ಹೆಚ್.ವಿಲ್ಸನ್ ಮಿ.ಕೌಟೋ. ಮುಂತಾದ ಹತ್ತು ವಿದೇಶಿ ವಿದ್ವಂಸ ಮಹನೀಯರು, ಇತಿಹಾಸ ತಜ್ಞರು ಹಕ್ಕಬುಕ್ಕರನ್ನು ಕುರುಬರೆಂದು ಹೇಳಿರುತ್ತಾರೆ.
ಅದೇ ರೀತಿ ಭಾರತದಮತ್ತು ಕರ್ನಾಟಕದ ಇತಿಹಾಸಕಾರರು ಅವರನ್ನು ಕನ್ನಡಿಗರು ಮತ್ತು ಕುರುಬರು ಎಂದು ಏಕಕಂಠದಿಂದ ಘೋಷಿಸಿದ್ದಾರೆ.
ಇಷ್ಟೆಲ್ಲಾ ದಾಖಲೆಗಳ ಆಧಾರದ ಮೇಲೆ ಹಕ್ಕಬುಕ್ಕರು ಕುರುಬರು ಆದ ಕಾರಣ ಹಕ್ಕಬುಕ್ಕರ ಸವಿನೆನಪಿನಲ್ಲಿ ಕಾಗಿನೆಲೆ ಮಹಾಸಂಸ್ಥಾನ, ಕನಕ ಗುರುಪೀಠ, ಗುಲ್ಬರ್ಗ ವಿಭಾಗದ ಸಿದ್ದರಾಮನಂದಪುರಿ ಸ್ವಾಮೀಜಿಯವರ ಸಾನಿಧ್ಯತೆಯಲ್ಲಿ ಏಪ್ರೀಲ್ 18, 2021 ರಂದು ವಿಜಯನಗರ ಸಾಮ್ರಾಜ್ಯದ ಸಂಸ್ಥಾಪನೆ ದಿನ ಆಚರಿಸುತ್ತಿದೆ.
ಇದಕ್ಕೆ ಯಾರ ಅಪ್ಪಣೆ ಬೇಕಿಲ್ಲ.
ಆಕ್ಷೇಪಣೆಗಳಿಗೆ ಕಿವಿಗೊಡಬೇಕಿಲ್ಲ. ಎಂದಿದ್ದುಬ
ನಮ್ಮ ಪ್ರತಿಷ್ಟಾನ ಇವರ ಹೇಳಿಕೆಯನ್ನು ಖಂಡಿಸುತ್ತದೆ. ಇವರ ಹೇಳಿಕೆಯಿಂದ ತುಂಬಾ ಅನೂನ್ಯವಾಗಿರುವ ಕುರುಬ ಮತ್ತು ವಾಲ್ಮೀಕಿ ಸಮಾಜಗಳ ನಡುವೆ ಭಿನ್ನಾಭಿಪ್ರಾಯವನ್ನು ಉಂಟುಮಾಡುವ ಪ್ರಯತ್ನವಾಗಿರುತ್ತದೆ. ಆದ್ದರಿಂದ ಜಂಬಯ್ಯನಾಯ್ಕ ಅವರು ಕೂಡಲೇ ಅವರ ಈ ಹೇಳಿಕೆಯನ್ನು ವಾಪಸ್ಸು ಪಡೆಯಬೇಕೆಂದು ಆಗ್ರಹಿಸಿದೆ.