ಹಂಸಲೇಖ ಹೇಳಿಕೆ – ಕ್ಷಮೆಯಾಚನೆಗೆ ಆಗ್ರಹ

ರಾಯಚೂರು.ನ.೧೫- ಸಂಗೀತ ನಿರ್ದೇಶಕ ಹಾಗೂ ಸಾಹಿತಿ ಹಂಸಲೇಖ ಸಂಗೀತ ಜ್ಞಾನ ಸಾಹಿತ್ಯ ಕ್ಷೇತ್ರದಲ್ಲಿನ ಸಾಧನೆ ಶ್ಲಾಘನೀಯ. ಆದರೆ, ಒಂದು ಕಾರ್ಯಕ್ರಮದಲ್ಲಿ ಒಂದು ಸಮುದಾಯವನ್ನು ಮೆಚ್ಚುಗೆಗೆ ಪಾತ್ರರಾಗುವ ಭರಟೆಯಲ್ಲಿ ಮರಣೋತ್ತರ ಪದ್ಮವಿಭೂಷಣ ಶ್ರೀ ಶ್ರೀ ಶ್ರೀ ಪೇಜಾವರ ವಿಶ್ವೇಶತೀರ್ಥರು ದಲಿತ ಕೇರಿಗಳಿಗೆ ಭೇಟಿ ನೀಡಿದ್ದರ ಕುರಿತು ಅಪಹಾಸ್ಯ ಮಾಡಿರುವುದು ನಿಜಕ್ಕೂ ಖಂಡನಿಯ. ಬಿಳಿಗಿರಿ ರಂಗನಾಥನ ಕುರಿತ ಹೇಳಿಕೆ ಕೂಡ ಅಸಹ್ಯಕರ ಹಾಗೂ ವಿಪ್ರ ಸಮುದಾಯ ಹಾಗೂ ಹಿಂದೂಗಳಿಗೆ ಮಾಡಿರುವ ಅವಮಾನ, ಈ ಕೂಡಲೇ ಹಂಸಲೇಖ ರವರು ಹೇಳಿಕೆಯನ್ನು ಹಿಂಪಡೆಯಬೇಕು ಹಾಗೂ ಬೇಷರತ್ತಾಗಿ, ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ನಿರ್ದೇಶಕರಾದ ಜಗನ್ನಾಥ ಕುಲಕರ್ಣಿ ಅವರು ಆಗ್ರಹಿಸಿದ್ದಾರೆ.