ಹಂಸಲೇಖ ಹೇಳಿಕೆಗೆ ಸಂಸದ ಪ್ರತಾಪ್ ಸಿಂಹ ಕಿಡಿ

ಮೈಸೂರು.ನ೧೫: ಪೇಜಾವರ ಶ್ರೀ ಕುರಿತಂತೆ ನಾದ ಬ್ರಹ್ಮ ಹಂಸಲೇಖ ವಿದಾತ್ಮಕ ಹೇಳಿಕೆ ವಿರುದ್ಧ ರಾಜ್ಯದಲ್ಲಿ ಅನೇಕರು ಸಿಡಿದೆದ್ದಿದ್ದಾರೆ.
ಇತ್ತ ಸಂಸದ ಪ್ರತಾಪ್ ಸಿಂಹ ಕೂಡ ವಾಗ್ದಾಳಿ ನಡೆಸಿದ್ದು, ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿದಂತ ಅವರು, ನಾಲಿಗೆ ಹರಿ ಬಿಟ್ಟ ನಂತ್ರ, ಕ್ಷಮೆಯಾಚೋ ಛಾಳಿ ಹೆಚ್ಚಿದೆ. ಹಂಸಲೇಖ ಕೂಡ ಪರಿಜ್ಞಾನದಿಂದ ಉಡುಪಿಯ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಬೇಕಿತ್ತು. ಪೇಜಾವರ ಶ್ರೀಗಳು ಕರ್ಮಠ ವ್ಯವಸ್ಥೆ ಮೀರಿ, ಸಮಾನತೆ ಸಾರಿದವರು ಎಂದರು.
ಮುಂದುವರೆದು ಮಾತನಾಡಿದ ಅವರು, ಪೇಜಾವರ ಶ್ರೀಯವರು ದಲಿತರ ಮನೆಗೆ ಭೇಟಿ ನೀಡಿದ್ದು, ಮನಸ್ಸಿನ ತಾರತಮ್ಯ ತೆಗೆದು ಹಾಕಲು ಹೋಗಿದ್ದೇ ಹೊರತು, ಆಹಾರ ಪದ್ಧತಿಯ ಸಮಾನತೆಗಲ್ಲ. ನಿಮ್ಮ ಮನೆಗೆ ಮುಸ್ಲೀಂ ಸ್ನೇಹಿತರನ್ನು ಕರೆದು, ಹಂದಿ ಮಾಂಸದ ಊಟ ಮಾಡಿ ಹಾಕಿ ನೋಡೋಣ ಎಂದು ಕಿಡಿಕಾರಿದರು.