ಹಂಸಲೇಖ ವಿರುದ್ಧ ದೂರು ದಾಖಲಿಸದಂತೆ ಛಲವಾದಿ ಮಹಾಸಭಾ ಒತ್ತಾಯ

ದಾವಣಗೆರೆ.ನ.೧೯ : ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ರಾಜ್ಯದ ವಿವಿಧ ಕಡೆಗಳಲ್ಲಿ ದೂರು ದಾಖಲಾಗುತ್ತಿದ್ದು ಈ ಕುರಿತಂತೆ ದೂರುಗಳನ್ನು ಮಾನ್ಯ ಮಾಡದಂತೆ, ದೂರು ದಾಖಲು ಮಾಡಿಕೊಳ್ಳದಂತೆ  ದಾವಣಗೆರೆ ಜಿಲ್ಲಾ ಛಲವಾದಿ ಮಹಾಸಭಾದಿಂದ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಸಮಾಜದ ಕಾರ್ಯಾಧ್ಯಕ್ಷ ಸಿ ಜಯಪ್ಪ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಮೈಸೂರಿನಲ್ಲಿ ನಡೆದ ಸಭೆಯೊಂದರಲ್ಲಿ ಸಂಗೀತ ಬ್ರಹ್ಮ ಹಂಸಲೇಖ ಅವರು ಕೆಲ ರಾಜಕಾರಣಿಗಳು ಮಠಾಧೀಶರು ಕುರಿತು ಮಾತನಾಡುವ ಸಂದರ್ಭದಲ್ಲಿ ನಾವೆಲ್ಲರೂ ಒಂದೇ ಎಂಬ ಭಾವನೆ ಪದೇಪದೆ ಹೇಳುವ ಅವರು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಬೀದಿಗಳಿಗೆ ಹೋದಾಗ ಅವರು ಉಪಯೋಗಿಸುವ ಆಹಾರವನ್ನು ಇವರು ಉಪಯೋಗಿಸುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಆದರೆ ಇದನ್ನೇ ಮುಂದು ಮಾಡಿಕೊಂಡು 1ವರ್ಗದ ಜನಾಂಗ ಅವರ ವಿರುದ್ಧ ದೂರು ನೀಡುತ್ತಿರುವುದು ಸರಿಯಲ್ಲ ಎಂದರು ಅಲ್ಲದೆ ಪರಿಶಿಷ್ಟ ಜಾತಿಯ ನಾಯಕರಾದ ಪ್ರಿಯಾಂಕ ಖರ್ಗೆ ಅವರ ವಿರುದ್ಧವೂ ಅವಹೇಳನಕಾರಿಯಾಗಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರು ಮಾತನಾಡಿದ್ದು ಅದನ್ನು ಜಿಲ್ಲಾ ಮಹಾಸಭಾ ತೀವ್ರವಾಗಿ ಖಂಡಿಸುತ್ತದೆ. ಸಂಗೀತ ನಿರ್ದೇಶಕ ಹಂಸಲೇಖ ಅವರ ವಿರುದ್ಧ ಈಗಾಗಲೇ ದೂರು ದಾಖಲಾಗಿದ್ದು ಇನ್ನೂ ಹಲವಡೆ ದೂರು ದಾಖಲಿಸುವ ಮಾಹಿತಿ ಬಂದಿದೆ. ಕಾರಣ ನಾಳೆ ನಾವುಗಳು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ರಕ್ಷಣಾ ಅಧಿಕಾರಿಗಳನ್ನು ಭೇಟಿ ಮಾಡಿ ಹಂಸಲೇಖಾರವರು ವಿರುದ್ಧ ನೀಡಿರುವ ದೂರಿಗೆ ಯಾವುದೇ ಮಾನ್ಯತೆ ಮಾಡದೆ ಅಥವಾ ದೂರು ದಾಖಲಿಸಿಕೊಂಡು ದಾಖಲು ಮಾಡಿಕೊಳ್ಳದಂತೆ ಮನವಿ ಮಾಡಿಕೊಳ್ಳಲಾಗುವುದು ಎಂದು ಹೇಳಿದರು.ಹಂಸಲೇಖ ಅವರು ಹೇಳಿರುವ ಹೇಳಿಕೆಯನ್ನು ಎಷ್ಟೋ ಸಮಾಜದವರು ಸ್ವಾಗತಿಸಿದ್ದಾರೆ. ಅಲ್ಲದೆ ಅವರ ಹೇಳಿಕೆ ನೂರಕ್ಕೆ ನೂರು ಸತ್ಯ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಆದರೆ ಕೆಲವರು ಇವರ ಹೇಳಿಕೆಯನ್ನು ಖಂಡಿಸಿ  ದೂರು ನೀಡುತ್ತಿರುವುದು ಸರಿಯಲ್ಲ. ಈ ಕೂಡಲೇ ಅವರು ತಮ್ಮ ಹೇಳಿಕೆಗಳಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.ವಾಸ್ತವ ಅಂಶಗಳ ಮೇಲೆ ಮಾತನಾಡಿರುವ ಅವರು ನಂತರ ತಮ್ಮ ತಪ್ಪನ್ನು ಒಪ್ಪಿ ಕ್ಷಮೆ ಯಾಚಿಸಿದ್ದಾರೆ. ಅವರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಆದರೆ ಇವೆಲ್ಲವನ್ನೂ ಬದಿಗೊತ್ತಿರುವ 1ಸಮಾಜ ಅವರ ವಿರುದ್ಧ ಉದ್ದೇಶಪೂರ್ವಕವಾಗಿಯೇ ದೂರು ದಾಖಲು ಮಾಡಲು ಮುಂದಾಗಿದೆ ಇದು ಸರಿಯಲ್ಲ ಈ ಕೂಡಲೇ ಅವರು ಸಹ ಅವರ ಹೇಳಿಕೆಯನ್ನು ಪೂರ್ವಾಪರ ವಿಚಾರ ಮಾಡಬೇಕೆಂದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಮಹಾ ಚಲವಾದಿ ಮಹಾಸಭಾದ ಅಧ್ಯಕ್ಷ  ಎಸ್ ಶೇಖರಪ್ಪ ಮಧುಸೂದನ್ ನವೀನ್ ಕುಮಾರ್ ಹಾಲೇಶ್ ಬಸವನಾಳು ರುದ್ರುಮುನಿ ರಾಮಯ್ಯ ಇತರರು ಇದ್ದರು.
Attachments area