ಹಂಪಿ ಸ್ಮಾರಕಗಳ ವೀಕ್ಷಣೆಗೆ ಬೇಕಿಲ್ಲ ಟಿಕೆಟ್


(ಸಂಜೆವಾಣಿ ವಾರ್ತೆ)
ಹೊಸಪೇಟೆ, ಆ.04: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಾಳೆಯಿಂದ ಆ 15ರ ವರೆಗೆ ಹಂಪಿ ಸ್ಮಾರಕಗಳ ವೀಕ್ಷಣೆಗೆ ಟಿಕೆಟ್ ಪಡೆಯಬೇಕಿಲ್ಲ.
ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ವ್ಯಾಪ್ತಿಗೆ ಬರುವ ದೇಶದ ಎಲ್ಲಾ ಸಂರಕ್ಷಿತ ಸ್ಮಾರಕಗಳು, ವಸ್ತು ಸಂಗ್ರಹಾಲಯಗಳ ವೀಕ್ಷಣೆಗೆ ಈಗ ಪಡೆಯಬೇಕಿರುವ ಟಿಕೆಟ್ ನ್ನು ನಾಳೆ ಆ 5 ರಿಂದ ಪಡೆಯಬೇಕಿಲ್ಲ‌ ಎಂದು ಇಲಾಖೆಯ ನಿರ್ದೇಶಕ ಡಾ. ಎನ್.ಕೆ. ಪಾಠಕ್ ನಿನ್ನೆ ಆದೇಶ ಹೊರಡಿಸಿದ್ದಾರೆ.

Attachments area