
(ಸಂಜೆವಾಣಿ ವಾರ್ತೆ)
ಬಳ್ಳಾರಿ,ಅ,2- ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಲ್ಲೊಬ್ಬರಾದ ಹಂಪಿ ಕನ್ನಡ ವಿವಿಯ ವಿಶ್ರಾಂತ ಕುಲಪತಿ ಡಾ.ಮಲ್ಲಿಕಾಘಂಟಿ ವಿರುದ್ಧ ವಿಶ್ವವಿದ್ಯಾಲಯಕ್ಕೆ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆನ್ನುವ ಆರೋಪದ ಮೇಲೆ ಕಮಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸಿದ್ದರಾಮಯ್ಯ ಅವರ ಪ್ರಭಾವದಿಂದಲೇ ಕುಲಪತಿಯಾಗಿದ್ದರು ಮಲ್ಲಿಕಾ ಘಂಟಿ ಅವರು ಎನ್ನಲಾಗುತ್ತಿತ್ತು.
2015-2016 ಮತ್ತು 2016-2017 ರ ಸಾಲಿನಲ್ಲಿ ಕೆಲ ಕಾಮಗಾರಿಗಳು ಮಾಡಿದ್ದರು. ಉದ್ದೇಶಪೂರ್ವಕವಾಗಿ ಕೆಟಿಪಿಪಿ ಕಾಯ್ದೆ ಉಲ್ಲಂಘನೆ ಮಾಡಿದ್ದಾರೆಂದು ಇದರಿಂದ
ವಿವಿಗೆ13.56 ಲಕ್ಷ ರೂ. ಆರ್ಥಿಕ ಮಾಡಲಾಗಿದೆ ಎಂದು ವಿಶ್ವವಿದ್ಯಾಲಯದ ಕುಲಸಚಿವ ಸುಬ್ಬಣ್ಣ ರೈ ನೀಡಿದ ದೂರಿನಲ್ಲಿ ಉಲ್ಲೇಖಿಸಿದೆ.