ಹಂಪಿ ವಿವಿ ಅಭಿವೃದ್ಧಿಗೆ ಖನಿಜ ನಿಧಿಯಿಂದ 10 ಕೋಟಿ ರೂ: ಅಶ್ವತ್ಥ ನಾರಾಯಣ

ಬಳ್ಳಾರಿ:ನ.10- ಹಂಪಿ ಕನ್ನಡ ವಿಶ್ವ ವಿದ್ಯಾಲಯದ ಅಭಿವೃದ್ಧಿಗೆ ಜಿಲ್ಲಾ ಖನಿಜ ಅಭಿವೃದ್ಧಿ ನಿಧಿಯಿಂದ 10 ಕೋಟಿ ರೂ ನೀಡಲಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಸಮ್ಮತಿ ನೀಡಿದ್ದಾರೆಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎಸ್.ಅಶ್ವತ್ಥ ನಾರಾಯಣ ಹೇಳಿದ್ದಾರೆ.
ಅವರಿಂದು ಹಂಪಿ‌ ಕನ್ನಡ ವಿಶ್ವ ವಿದ್ಯಾಲಯದಲ್ಲಿ ನೂತನವಾಗಿ ನಿರ್ಮಿಸಿರುವ ಸಂಗೀತ ವಿಭಾಗದ ಕಟ್ಟಡ ಉದ್ಘಾಟಿಸಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದರು.
ಈ‌ ಹತ್ತು ಕೋಟಿ‌ ಹಣದಿಂದ ವಿವಿಯ ಬೇಸಿಗೆ ಸಂದರ್ಭದಲ್ಲಿ ಎದುರಿಸುವ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಮತ್ತು ವಿವಿಯ ಆವರಣಕ್ಕೆ ಕಾಂಪೌಂಡ್ ನಿರ್ಮಿಸಲು ಉದ್ದೇಶಿಸಿದೆಂದು ಹೇಳಿದರು.
ಹಂಪಿ ವಿವಿಯ ಭೋದಕೇತರ ಸಿಬ್ಬಂದಿಗೆ ಕಳೆದ ಹಲವು ತಿಂಗಳಿಂದ ವೇತನದ ಸಮಸ್ಯೆ ಇದೆ ಅದನ್ನು ಆದಷ್ಟು ಬೇಗನೆ ನಿವಾರಿಸಲಿದೆಂದರು.
ಎಲ್ಲಾ ಸಿದ್ದತೆ:
ಈ ತಿಂಗಳ‌17 ರಿಂದ ಉನ್ನತ ಶಿಕ್ಷಣ ಕಾಲೇಜುಗಳ ಆರಂಭಕ್ಕೆ ಎಲ್ಲಾ ರೀತಿಯ ಸಿದ್ದತೆ ಮಾಡಿಕೊಳ್ಳಲಾಗಿದೆ. ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಪೋಷಕರಿಂದ ನಿರಾಪೇಕ್ಷಣ ಪತ್ರ ಮತ್ತು ಕೋವಿಡ್ ಪರೀಕ್ಷೆ ಮಾಡಿಕೊಂಡು ಸೋಂಕು ರಹಿತರೆಂಬ ಪ್ರಮಾಣ ಪತ್ರ ತೆಗೆದುಕೊಂಡು ಬರಬೇಕು. ಕೋವಿಡ್ ಪರೀಕ್ಷೆಯನ್ನು ವಿದ್ಯಾರ್ಥಿಗಳಿಗೆ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಮಾಡಲಿದೆಂದು ತಿಳಿಸಿದರು.
ಬಿಜೆಪಿಗೆ ಉತ್ತಮ ಭವಿಷ್ಯ:
ರಾಜ್ಯದಲ್ಲಿ ಬಿಜೆಪಿಗೆ ಉತ್ತಮ ಭವಿಷ್ಯ ಇದೆ ಎಂಬುದನ್ನು ರಾಜ್ಯದಲ್ಲಿ ನಡೆದ ಎರೆಡು ಕ್ಷೇತ್ರಗಳಲ್ಲಿನ ಉಪ ಚುನಾವಣೆಯ ಮತಗಳ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವಿನತ್ತ ಸಾಗಿರುವದನ್ನು ತೋರಿಸುತ್ತದೆಂದರು.
ಇದಕ್ಕೆ ಕೇಂದ್ರದಲ್ಲಿ ಮೋದಿ‌ ಅವರ ಮತ್ತು ರಾಜ್ಯದಲ್ಲಿ ಯಡಿಯೂರಪ್ಪ ಅವರ ಉತ್ತಮ ಆಡಳಿತ ಕಾರಣವಾಗಿದೆ. ರಾಜ್ಯದ ದಕ್ಷಿಣ ಭಾಗದಲ್ಲಿ ಸಂಸತ್ ಚುನಾವಣೆಯಲ್ಲಿ‌ ಬಿಜೆಪಿಗೆ ಪ್ರಾಭಲ್ಯ ದೊರೆಯುತ್ತಿತ್ತು ಆದರೆ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಜನ ಕೈ ಕೊಡುತ್ತಿದ್ದರು. ಆದರೆ ಬಿಜೆಪಿ ತನ್ನ ಪ್ರಾಭಲ್ಯತೆಯನ್ನು ಮುಂದಿನ‌ ದಿನಗಳಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಪಡೆಯಲಿದೆಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಬಿಹಾರದಲ್ಲಿಯೂ ಬಿಜೆಪಿ ಹೆಚ್ಚಿನ‌ ಮತಗಳನ್ನು‌ ಪಡೆಯುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿದರು.
ನಮ್ಮ ಇಲಾಖೆಯಲ್ಲಿ‌ ಉಪ ಕುಲಪತಿಗಳ‌ ನೇಮಕದಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ, ಎಲ್ಲವೂ ಪಾರದರ್ಶಕವಾಗಿ‌ ನಡೆದಿದೆ. ಪ್ರೊ.ಅಶೋಕ್ ಕುಮಾರ್ ಆತ್ಯಹತ್ಯೆ ಕುರಿತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕಯಮಾರ್ ಅವರ ಆರೋಪ ನಿರಾಧಾರವಾದುದು ಎಂದರು.

ಜಾತಿ ಆಧಾರಿತ ಸ್ವಾರ್ಥ ರಾಜಕಾರಣ ನಡೆಯಲ್ಲ
ಆರ್ ಆರ್ ನಗರ ದಲ್ಲಿ‌ಜಾತಿ‌ ರಾಜ‌ಕಾರಣ ಮಾಡಲು ಹೋದವರಿಗೆ ಜನತೆ ಬುದ್ದಿ ಕಲಿಸಿದ್ದಾರೆ. ಜಾತಿ ಸ್ವಾರ್ಥ ರಾಜಕಾರಣ ನಡೆಯಲ್ಲ ಎಂದು ಡಿ.ಕೆ.ಶಿ ಸಹೋದರರಿಗೆ ಟಾಂಗ್ ನೀಡಿದರು.
ಬಿಜೆಪಿ ತತ್ವಾಧಾರಿತ ರಾಜಕಾರಣ ಮಾಡಲಿದೆ ಹೊರತು. ಜಾತಿ ಆಧಾರಿತ ರಾಜಕಾರಣ ಮಾಡಲ್ಲ ವೆಂದರು.
ಸಿರಾದಲ್ಲಿ ಪಕ್ಷದ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರಗೆ ಉಸ್ತುವಾರಿ ವಹಿಸದ್ದರ ಗೆಲುವೆ ಎಂಬ ಪ್ರಶ್ನೆಗೆ. ಹಾಗಲ್ಲ, ಅವರು ಮುಂದಾಳತ್ವ ವಹಿಸಿಕೊಂಡು ಮಾಡಿದ್ದಾರೆ. ಎಲ್ಲರ ಪ್ರಯತ್ನ‌ ಪಕ್ಷದ ಒಗ್ಗಟ್ಟಿನ ಹೋರಾಟವೂ ಇರುತ್ತದೆ ಒಬ್ಬ ವ್ಯಕ್ತಿಯಿಂದ ಜಯ ಎಂದುಹೇಳಲಾಗುವುದಿಲ್ಲ ಎಂದರು
ಈ ಸಂದರ್ಭದಲ್ಲಿ ಸಚಿವ ಆನಂದ್ ಸಿಂಗದ ಮೊದಲಾದವರು ಇದ್ದರು.