ಹಂಪಿ ವಿರೂಪಾಕ್ಷೇಶ್ವರನ ಹುಂಡಿಯಲ್ಲಿ ೧೪ ಲಕ್ಷ ರೂ. ಸಂಗ್ರಹ

(ಸಂಜೆವಾಣಿ ವಾರ್ತೆ)
ಬಳ್ಳಾರಿ: ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಸ್ಥಾನದ ಹುಂಡಿಯನ್ನು ಮಂಗಳವಾರ ತೆರದು ಧಾರ್ಮಿಕ ದತ್ತಿ ಇಲಾಖೆಯಿಂದ ಎಣಿಕೆ ಮಾಡಲಾಗಿಗಿದ್ದು ಅದರಲ್ಲಿ  14 ಲಕ್ಷದ, 32 ಸಾವಿರದ, 584 ರೂ
ಸಂಗ್ರಹವಾಗಿದೆ.
ಕಳೆದ ಆರು ತಿಂಗಳಲ್ಲಿ ಇಷ್ಟು ಹಣ ಸಂಗ್ರಹವಾಗಿದೆ. ಎಣಿಕೆ ಸಂದರ್ಭದಲ್ಲಿ ಹಂಪಿ
ವಿದ್ಯಾರಣ್ಯಮಠದ ವಿದ್ಯಾರಣ್ಯ ಭಾರತೀ ಶ್ರೀಗಳು, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ
ಎಂ.ಎಚ್.ಪ್ರಕಾಶ್ ರಾವ್, ಕಡ್ಡಿರಾಂಪುರದ ಕೆನರಾ ಬ್ಯಾಂಕ್ ವ್ಯವಸ್ಥಾಪಕ
ಕೆ.ಶಿವಕುಮಾರ್ ರಾವ್ ಮೊದಲಾದವರು ಇದ್ದರು.