ಹಂಪಿ ವಿರೂಪಾಕ್ಷೇಶ್ವರನಿಗೆ ವಿಶೇಷ ಪೂಜೆ


ಸಂಜೆವಾಣಿ ವಾರ್ತೆ
ಹೊಸಪೇಟೆ (ಹಂಪಿ), ಏ.23: ಹಂಪಿ ವಿರೂಪಾಕ್ಷೇಶ್ವರ ಜಾತ್ರೆಯ ಪ್ರಯುಕ್ತ ಶ್ರೀ ವಿರೂಪಾಕ್ಷ ಸ್ವಾಮಿಗೆ ವಿದ್ಯಾರಣ್ಯ ಪೀಠದ ಪೂಜ್ಯ ವಿದ್ಯಾರಣ್ಯಭಾರತೀಶ್ರೀಗಳು ವಿಶೇಷ ಪೂಜೆ, ಪಂಚಾಮೃತ ಅಭಿಷೇಕ ಹಾಗೂ ಕೃಷ್ಣದೇವರಾಯ ಕಾಲದಿಂದಲೂ ರಚಿತವಾದ ಸುವರ್ಣ ಖಚಿತ ಮುಕುಟದೊಂದಿಗೆ ವಿಶೇಷ ಪೂಜೆಯನ್ನು ಮಾಡಲಾಯಿತು.