ಹಂಪಿ ದೇವಸ್ಥಾನಗಳ ಜೀರ್ಣೋದ್ದಾರ ಪರಿಶೀಲನೆ ಮಾಡಿದ ಸಚಿವ ಶ್ರೀರಾಮುಲು

ಬಳ್ಳಾರಿ ಮಾ 22 : ವಿಶ್ವವಿಖ್ಯಾತ ಹಂಪಿಯಲ್ಲಿ ಶ್ರೀರಾಮಚಂದ್ರ, ಶ್ರೀ ರಂಗನಾಥ ಸ್ವಾಮಿ, ಯಂತ್ರೋದ್ಧಾರಕ ಆಂಜನೇಯ ಸ್ವಾಮಿ ಸೇರಿದಂತೆ ಹಲವು ದೇವಸ್ಥಾನಗಳ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಈ ದೇವಾಲಯಗಳಿಗೆ ನಿನ್ನೆ ಸಮಾಜ ಕಲ್ಯಾಣ ಸಚಿವ ಬಿ. ಶ್ರೀರಾಮುಲು ಭೇಟಿ ನೀಡಿ ಕಾಮಗಾರಿಗಳ ಪರಿಶೀಲನೆ ನಡೆಸಿದರು. ನಂತರ ಸಂಬಂಧಪಟ್ಟವರಿಗೆ ಅಗತ್ಯವಾದ ಸಲಹೆ-ಸೂಚನೆ ನೀಡಿದರು.