
ಸಂಜೆವಾಣಿ ವಾರ್ತೆಹೊಸಪೇಟೆ: ಹಂಪಿ ವಿಜಯವಿಠಲ ದೇವಾಲಯಕ್ಕೆ (ತಳವಾರಘಟ್ಟ) ತೆರುಳುವ ಮಾರ್ಗಮಧ್ಯದಲ್ಲಿರುವ ವಿಜಯನಗರ ಅರಸರ ಕಾಲದ ಪುರಾತನ ಪ್ರವೇಶ ದ್ಚಾರ ಮಂಟಪಕ್ಕೆ ಟ್ರ್ಯಾಕ್ಟರ್ ಡಿಕ್ಕಿಹೊಡೆದ ಪರಿಣಾಮ ಸ್ಮಾರಕದ ಬೃಹತ್ ಕಲ್ಲು ಕಂಬಕ್ಕೆ ಹಾನಿಯಾದ ಘಟನೆ ಬುಧವಾರ ನಡೆಸಿದೆ.ಕಮಲಾಪುರದಿಂದ ತಳವಾರಘಟ್ಟಕ್ಕೆ ತೆರಳುವ ಟ್ರ್ಯಾಕ್ಟರ್ ಡಿಕ್ಕಿ ಹೊಡೆದಿದ್ದು, ಸ್ಮಾರಕಕ್ಕೆ ಆಸರೆಯಾಗಿ ನಿಂತಿದ್ದ ಬೃಹತ್ ಕಂಬ ಸ್ಥಳದಿಂದ ಅರ್ಧಕ್ಕೂ ಹೆಚ್ಚು ಮುಂದೆ ಬಂದಿದೆ. ಸ್ಥಳಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.