ಹಂಪಿ ಉತ್ಸವ: ಕುಸ್ತಿ ಸ್ಪರ್ಧೆಗೆ ಹೆಸರು ನೋಂದಾಯಿಸಲು ಅವಕಾಶ


ಸಂಜೆವಾಣಿ ವಾರ್ತೆ
ವಿಜಯನಗರ/ ಹೊಸಪೇಟೆ ಜ28: ಹಂಪಿ ಉತ್ಸವ-2024ರ ಪ್ರಯುಕ್ತ ಫೆ.3ರಂದು ಬೆಳಗ್ಗೆ 10 ಗಂಟೆಗೆ ಶ್ರೀವಿಜಯ ವಿದ್ಯಾರಣ ಪ್ರೌಢಶಾಲೆ ಮೈದಾನ ಹೊಸ ಮಲಪನಗುಡಿಯಲ್ಲಿ ರಾಜ್ಯ ಮಟ್ಟದ  ಪುರುಷ ಹಾಗೂ ಮಹಿಳಾ ಮತ್ತು ಜಿಲ್ಲಾ ಮಟ್ಟದ ಪುರುಷ ಕುಸ್ತಿ ಸ್ಫರ್ಧೆ ಆಯೋಜನೆ ಮಾಡಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕುಸ್ತಿಯ 4 ವಿಭಾಗದ ವಿವರಗಳು: ರಾಜ್ಯ ಮಟ್ಟದ ಪುರುಷರ ಕುಸ್ತಿ ಪಂದ್ಯಾವಳಿ, 57-65 ಕೆ.ಜಿ, 66-74 ಕೆಜಿ, 75-85 ಕೆಜಿ, 86 ಕೆ.ಜಿ ಮೇಲ್ಪಟ್ಟು. ಕುಸ್ತಿ ಪಂದ್ಯಾವಳಿಯನ್ನು ಸಂಘಟಿಸಲಾಗುವುದು. ರಾಜ್ಯ ಮಟ್ಟದ ಮಹಿಳೆಯರ ಕುಸ್ತಿ ಪಂದ್ಯಾವಳಿ 50 ಕೆ.ಜಿ, 51-54 ಕೆ.ಜಿ, 55-57 ಕೆ.ಜಿ, 58 ಕೆ.ಜಿ ಮೇಲ್ಪಟ್ಟು ಕುಸ್ತಿ ಪಂದ್ಯಾವಳಿಯನ್ನು ಸಂಘಟಿಸಲಾಗುವುದು. ಜಿಲ್ಲಾ ಮಟ್ಟದ ಪುರುಷರ ಕುಸ್ತಿ ಪಂದ್ಯಾವಯು 57-65 ಕೆ.ಜಿ, 66-74 ಕೆಜಿ, 75-85 ಕೆಜಿ, 86 ಕೆ.ಜಿ ಮೇಲ್ಪಟ್ಟು ಕುಸ್ತಿ ಪಂದ್ಯಾವಳಿಯನ್ನು ಸಂಘಟಿಸಲಾಗುವುದು.
ಸ್ಫರ್ಧೆಗೆ ಭಾಗವಹಿಸುವ ಕ್ರೀಡಾ ಪಟುಗಳು ಫೆ.03ರ ಬೆಳಗ್ಗೆ 08 ರಿಂದ 10 ಗಂಟೆಯೊಳಗೆ ತಮ್ಮ ಹೆಸರನ್ಮ್ನ ನೋಂದಾಯಿಸಿಕೊಳ್ಳಬೇಕು. ಅಭ್ಯರ್ಥಿಗಳಿಗೆ ಪ್ರಥಮ ದ್ವಿತೀಯ ಬಹುಮಾನ ನೀಡಲಾಗುತ್ತದೆ. ಆಸಕ್ತ ಕ್ರೀಡಾಪಟುಗಳು ತಮ್ಮ ಆಧಾರ ಕಾರ್ಡ ಮತ್ತು ಬ್ಯಾಂಕ್ ಪಾಸ್‍ಬುಕ್ ಝರಾಕ್ಸ್ ಪ್ರತಿಯೊಂದಿಗೆ ಹೆಸರು ನೋಂದಾಯಿಸಿಕೊಳ್ಳಬೇಕು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 9972552385, 9164693882,9483480101 ಗೆ ಸಂಪರ್ಕಿಸಲು ತಿಳಿಸಿದೆ.
ಷರತ್ತುಗಳು: ಕುಸ್ತಿಪಟುಗಳಿಗೆ ವಯಸ್ಸಿನ ಮಿತಿ ಇರುವುದಿಲ್ಲ. ಜಿಲ್ಲಾ ಮಟ್ಟದ ಚಿತ್ತ ಕುಸ್ತಿಯಲ್ಲಿ ಭಾಗವಹಿಸುವ ಕುಸ್ತಿಪಟುಗಳು ವಿಜಯನಗರ ಜಿಲ್ಲೆಯವರೇ ಆಗಿರಬೇಕು., ಜಿಲ್ಲಾ ಮಟ್ಟದ ಕುಸ್ತಿಯಲ್ಲಿ ಕಡ್ಡಾಯವಾಗಿ ಆಧಾರ್ ಕಾರ್ಡ್ ತರಬೇಕು., ರಾಜ್ಯ ಮಟ್ಟದ ಕುಸ್ತಿಗಳು ಅಂಕಗಳ ಆಧಾರದ ಮೇಲೆ ನಡೆಯುತ್ತವೆ., ಕುಸ್ತಿಯ ಉಡುಪುಗಳು ಕಡ್ಡಾಯ., ರಾಜ್ಯ ಮಟ್ಟದ ಪುರುಷ/ಮಹಿಳೆ ಕುಸ್ತಿಯಲ್ಲಿ 04 ತೂಕದ ವಿಭಾಗದ ವಿಜೇತರಿಗೆ 1. ಹಂಪಿ ಕಿಶೋರ/ ಹಂಪಿ ಕಿಶೋರಿ 2. ಹಂಪಿ ಕುಮಾರ/ ಹಂಪಿ ಕುಮಾರಿ 3. ಹಂಪಿ ಕೇಸರಿ/ ಹಂಪಿ ಕೇಸರಿ  4. ಹಂಪಿ ಕಂಠೀರವ/ ಹಂಪಿ ಮಹಿಳಾ ಕಂಠೀರವ  ಪ್ರಶಸ್ತಿಯನ್ನು ನೀಡಲಾಗುವುದು., ಸ್ಪರ್ಧಾಗಳು ಕುಸ್ತಿಯ ನಿಯಮಗಳಿಗೆ ತಕ್ಕಂತೆ ಶಿಸ್ತನ್ನು ಕಾಪಾಡಬೇಕು ಹಾಗೂ ನಿರ್ಣಾಯಕರ ತೀರ್ಪು ಅಂತಿಮವಾಗಿರುತ್ತದೆ ಎಂಬ ಷರತ್ತುಗಳನ್ನು ಪಾಲಿಸಬೇಕು ಎಂದು ಪ್ರಕಟಣೆ ತಿಳಿಸಿದೆ.