ಹಂಪಿ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮಕ್ಕೆ ಕಲಾವಿದರ ಮನವಿ

ಬಳ್ಳಾರಿ, ನ.6: ಈ ತಿಂಗಳ 13 ರಂದು ಹಮ್ಮಿಕೊಂಡಿರುವ ಈ ವರ್ಷ ಹಂಪಿ‌ ಉತ್ಸವದಲ್ಲಿ ವೇದಿಕೆ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಬಳ್ಳಾರಿ ಜಿಲ್ಲಾ ಕಲಾವಿದರ ವೇದಿಕೆ ಜಿಲ್ಲಾಧಿಕಾರಿಗಳಿಗೆ ಇಂದು ಮನವಿ ಸಲ್ಲಿಸಿದೆ.
ಕರೋನಾ ಇದ್ದರೂ ಮೈಸೂರು ದಸರಾದಲ್ಲಿ ವೇದಿಕೆ ಕಾರ್ಯಕ್ರಮ ಇತ್ತು. ಅದೇ ರೀತಿ‌ ಹಂಪಿ‌ ಉತ್ಸವದಲ್ಲಿ ಸರಳವಾದ ವೇದಿಕೆ ನಿರ್ಮಿಸಿ ಸಂಗೀತ ಮೊದಲಾದ ಕಾರ್ಯಕ್ರಮಗಳ‌ ಪ್ರದರ್ಶನಕ್ಕೆ ಅನುಕೂಲ‌ ಮಾಡಿದರೆ ಬಡ ಕಲಾವಿದರಿಗೆ ಸಹಾಯವಾಗಲಿದೆಂದು ಮನವಿ ಮಾಡಿದೆ.
ಜಿಲ್ಲಾಡಳಿತ ಇದಕ್ಕೆ ಸ್ಪಂದಿಸಬೇಕು. ಇಲ್ಲದಿದ್ದರೆ ಏನು ಮಾಡಬೇಕು ಎಂಬ ಬಗ್ಗೆ ಚರ್ಚಿಸಲು ನಾಳೆ ಬೆಳಿಗ್ಗೆ ಸ್ನೇಹ ಸಂಪುಟ ಸಭಾಂಗಣದಲ್ಲಿ ಕಲಾವಿದರು ಸಭೆ ಚರ್ಚೆ ಮಾಡಲು ನಿರ್ಧರಿಸಿದೆ ಎಂದು ವೇದಿಕೆಯ ಸಂಚಾಲಕ ಕೆ.ಜಗದೀಶ್ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಮನವಿ ನೀಡುವ ಸಂದರ್ಭದಲ್ಲಿ ಹೇಳಿದ್ದಾರೆ ಸುಬ್ಬಣ್ಣ, ಸಿದ್ಮಲ್ ಮಂಜುನಾಥ, ದೇವೇಶ್, ಗಿರಿಬಾಬು ಮೊದಲಾದವರು ಇದ್ದರು.