ಹಂಪಿ ಅಭಿವೃದ್ಧಿಗೆ ಉತ್ತೇಜನ:ಸರ್ಕಾರದೊಂದಿಗೆ ಗವಿಯಪ್ಪ, ರೆಡ್ಡಿ ಚರ್ಚೆ


ಅನಂತ ಜೋಶಿ
ಹೊಸಪೇಟೆ ಆ25: ಹಂಪಿ ಒಂದು ಜೀವಂತ ಸ್ಮಾರಕ, ಹಂಪಿಯಲ್ಲಿ ಪ್ರವಾಸಿ ಸ್ನೇಹಿ ಮಾಸ್ಟರ್ ಪ್ಲಾನ್ ಜಾರಿಗೊಳಿಸುವ ನಿಟ್ಟಿನಲ್ಲಿ ಈ ಭಾಗದ ಶಾಸಕರಾದ ಹೆಚ್.ಆರ್.ಗವಿಯಪ್ಪ ಹಾಗೂ ಜಿ.ಜನಾರ್ಧನರೆಡ್ಡಿ ಸರ್ಕಾರದ ಮಟ್ಟದಲ್ಲಿ ಮಹತ್ವದ ಸಭೆ ನಡೆಸಿದ್ದು, ವಾಣಿಜ್ಯ ಚಟುವಟಿಕೆಗಳು ಸ್ಥಗಿತದಿಂದ ಕಂಗಾಲಾಗಿರುವ ಸ್ಥಳೀಯರಲ್ಲಿ ಹೊಸ ಆಶಾಭಾವ ಚಿಗುರತೊಡಗಿದೆ. 
ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ಜನತಾ ಪ್ಲಾಟ್, ಕಡ್ಡಿರಾಂಪುರ, ವೆಂಕಟಾಪುರ ಭಾಗದ ನೂರಾರು ಅನಧಿಕೃತ ಹೋಂ ಸ್ಟೇ ಗಳು, ಬೀದಿ ಬದಿ ಹೋಟೆಲ್ ಸೇರಿದಂತೆ ಎಲ್ಲ ರೀತಿಯ ವಾಣಿಜ್ಯ ಚಟುವಟಿಕೆಗಳಿಗೆ ಬೀಗ ಮುದ್ರೆ ಹಾಕಿದ ಹಿನ್ನೆಲೆಯಲ್ಲಿ  ಹಂಪಿಯಲ್ಲಿ ಪ್ರವಾಸಿಗರ ವಾಸ್ತವ್ಯ, ಊಟ, ಉಪಹಾರಗಳಿಗೂ ಬ್ರೇಕ್ ಬಿದ್ದಿದೆ. ಇದರಿಂದಾಗಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಉದ್ಯೋಗ ಕಂಡುಕೊಂಡಿದ್ದ ನೂರಾರು ಕುಟಂಬಗಳಿಗೆ ಇದೀಗ ನಿರುದ್ಯೋಗ ಸಮಸ್ಯೆ ಎದುರಿಸುವಂತಾಗಿದ್ದು, ಜೀವನದ ಅಭದ್ರತೆ ಕಾಡುತ್ತಿರುವ ಸಂದರ್ಭದಲ್ಲಿ ಶಾಸಕರ ನಡೆ ಹೊಸ ಸಂಚಲನವನ್ನು ಮುಡಿಸಿದೆ.
ತುಂಗಭದ್ರಾ ನದಿ ಆಚೆಗಿನ ಗಂಗಾವತಿ ತಾಲೂಕು ವ್ಯಾಪ್ತಿಯ ವಿರುಪಾಪುರ ಗಡ್ಡಿ, ಆನೆಗೊಂದಿ ಮತ್ತಿತರೆ ಗ್ರಾಮಗಳೂ ಈ ಪರಿಸ್ಥಿತಿಯೂ ಇದಕ್ಕಿಂತ ಭಿನ್ನವಾಗಿಲ್ಲ. ಪರಿಸ್ಥಿತಿ ಗಂಭೀರತೆಯನ್ನು ಅರಿತ ಗಂಗಾವತಿ ಶಾಸಕ ಜಿ.ಜನಾರ್ಧನ ರೆಡ್ಡಿ ಸದನದಲ್ಲಿ ಈ ಬಗ್ಗೆ ಧ್ವನಿ ಎತ್ತಿದ್ದರು. ಅಕ್ರಮ, ಅನೈತಿಕ ಚಟುವಟಿಕೆಗಳ ನೆಪದಲ್ಲಿ ಇತರರಿಗೂ ಬರೆ ಹಾಕಲಾಗುತ್ತಿದೆ. ಇದರಿಂದ ನಿರುದ್ಯೋಗ ಸಮಸ್ಯೆ ಕಾಡುವುದರ ಜತೆಗೆ ಪ್ರವಾಸಿಗರಿಗೂ ತೊಂದರೆಯಾಗುತ್ತಿದೆ. ಅದನ್ನು ವೈಜ್ಞಾನಿಕವಾಗಿ ಸರಿಪಡಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದರು.
ಹಂಪಿ ಅಭಿವೃದ್ಧಿಗೆ ಫೀಲ್ಡ್‍ಗಿಳಿದರಾ ರೆಡ್ಡಿ, ಗವಿಯಪ್ಪ?
ಆರ್ಕಲಾಜಿಕಲ್ ಸರ್ವೆ ಆಫ್ ಇಂಡಿಯಾ ಹಾಗೂ ಹವಾಮಾ ಅಧಿಕಾರಿಗಳ ಇಬ್ಭಗೆಯ ಧೋರಣೆಯನ್ನು ಸದನದಲ್ಲಿ ತೀವ್ರವಾಗಿ ಖಂಡಿಸಿದ್ದ ಶಾಸಕ ಜಿ.ಜನಾರ್ದನ ರೆಡ್ಡಿ, ಇದೀಗ ಸ್ವತಃ ಫೀಲ್ಡ್‍ಗಿಳಿದಿದ್ದಾರೆ. ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ ಅವರನ್ನು ಶಾಸಕರಾದ ಜಿ.ಜನಾರ್ದನ ರೆಡ್ಡಿ ಮತ್ತು ಎಚ್.ಆರ್.ಗವಿಯಪ್ಪ ಸೋಮವಾರ ಭೇಟಿ ಮಾಡಿದ್ದಾರೆ. ಹವಾಮಾ ಹೊಸ ಮಾಸ್ಟರ್ ಪ್ಲಾನ್ ಹಾಗೂ ಹವಾಮಾ ವ್ಯಾಪ್ತಿಯ ಜನರ ಸಮಸ್ಯೆಗಳ ಕುರಿತು ಸುಧೀರ್ಘವಾಗಿ ಚರ್ಚೆ ನಡೆಸಿದರು.
ಹಂಪಿಯಲ್ಲಿ ಹೋಂ ಸ್ಟೇಗಳು ಸ್ಥಗಿತಗೊಂಡಿದ್ದರಿಂದ ದೇಶ- ವಿದೇಶಗಳಿಂದ ಆಗಮಿಸುವ ಪ್ರವಾಸಿಗರ ವಾಸ್ತವ್ಯಕ್ಕೆ ತೊಂದರೆಯಾಗುತ್ತಿದೆ. ಕಡಿಮೆ ಬೆಲೆಯಲ್ಲಿ ಆಥಿತ್ಯ ನೀಡುವ ಸ್ಥಳೀಯ ಹೋಂ ಸ್ಟೇಗಳನ್ನು ಕಾನೂನು ಬದ್ಧಗೊಳಿಸುವ ನಿಟ್ಟಿನಲ್ಲಿ ಸರ್ಕಾರದಲ್ಲಿರುವ ಅವಕಾಶಗಳನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ. ಪರಿಯಾಯ ವ್ಯವಸ್ಥೆಗಳಿಲ್ಲದೆ ಬಂದ್ ಮಾಡುವುದು ಅಕ್ರಮ ಎಂದು ಧಾರ್ಮಿಕ ವಿಧಿ-ವಿಧಾನಗಳಿಗೂ ಕಡಿವಾಣ ಹಾಕಿರುವುದು, ಈ ಭಾಗದ ಜನರ ಹಾಗೂ ಧಾರ್ಮಿಕಾಸಕ್ತರು ದೃತಿಗೆಡುವಂತೆ ಮಾಡಿದೆ. ಶಾಸಕರ ನಡೆ ಹಂಪಿ ಪ್ರವಾಸೋದ್ಯಮವನ್ನು ಉತ್ತೇಚಿಸುವ ನಿಟ್ಟಿನಲ್ಲಿ ಕೈಗೊಂಡಿರುವ ಪ್ರಯತ್ನಗಳಿಂದಾಗಿ ಮತ್ತೆ ವಾಣಿಜ್ಯ ಚಟುವಟಿಕೆಗಳು ಚುರುಕುಗೊಳ್ಳುವ ಸ್ಥಳೀಯರ ಬಯಕೆ ಚಿಗುರೊಡೆದಂತಾಗಿದೆ. ಇದು ಜನಜೀವನದ ಅಭಿವೃದ್ಧಿಗೆ ಪೂರಕವಾಗಲಿ.
ಪುರಾಣ ಪ್ರಸಿದ್ಧ ಹಂಪಿ ಕೇವಲ ಐತಿಹಾಸಿ ಕ್ಷೇತ್ರವಾಗದೆ ಧಾರ್ಮಿಕ ಪುಣ್ಯಕ್ಷೇತ್ರವೂ ಆಗಿರುವುದು ಮತ್ತು ಜೀವಂತ ಸ್ಮಾರಕವಾಗಿರುವುದರಿಂದ ಜನಜೀವನ ಇರುವುದು ಮುಖ್ಯ ಅಕ್ರಮಕ್ಕೆ ನಿರ್ಧಾಕ್ಷಿಣ್ಯ ಕ್ರಮವಾಗಲಿ ಚುಟುವಟಿಕೆಗಳು ಶಿಸ್ತುಬದ್ಧವಾಗಿ ನಡೆಯುವಂತೆ ವ್ಯವಸ್ಥೆಗಳನ್ನು ಮಾಡಬೇಕು.
ರಾಘವೇಂದ್ರ ಜೆ. ಪ್ರವಾಸಿಗ ಕುಷ್ಟಗಿ ತಾಲೂಕು. 
ಹಂಪಿಯ ಜನತಾ ಪ್ಲಾಟ್ ಸೇರಿದಂತೆ ಹವಾಮಾ ವ್ಯಾಪ್ತಿಯಲ್ಲಿರುವ ಜನರ ಜೀವನದಲ್ಲಿ ಗುಣಾತ್ಮಕ ಬದಲಾವಣೆ ತರುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಇಲಾಖೆಯಡಿ ಹವಾಮಾ ಬರುವುದರಿಂದ ಆ ಇಲಾಖೆಯ ಕಾರ್ಯದರ್ಶಿ ಡಾ.ಅಜಯ್ ನಾಗಭೂಷಣ್ ಜತೆಗೆ ಚರ್ಚೆ ನಡೆಸಿದ್ದೇವೆ. ಅವರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಆದರೆ, ಇದು ವಿಷಯ ಸೂಕ್ಷ್ಮವಾಗಿದ್ದರಿಂದ ಸದ್ಯಕ್ಕೆ ಹೆಚ್ಚೇನು ಹೇಳುವುದಿಲ್ಲ.
– ಎಚ್.ಆರ್.ಗವಿಯಪ್ಪ, ಶಾಸಕರು ವಿಜಯನಗರ.

One attachment • Scanned by Gmail