ಹಂಪಿ‌ ಉತ್ಸವ 3 ದಿನ ಮಾಡಿ ಜನ‌ ಕಲ್ಯಾಣ ರಕ್ಷಣಾ ವೇದಿಕೆ ಒತ್ತಾಯ

ಬಳ್ಳಾರಿ, ನ.9: ತುಂಗಾ ಆರತಿ‌ ಮಾಡಿ ಅದನ್ನು ಹಂಪಿ‌ಉತ್ಸವ ಎಂದು ಬಿಂಬಿಸದೆ. ಈ‌ ಮೊದಲಿನಂತೆ ಮೂರು ದಿನಗಳ‌ ಕಾಲ‌ ಹಂಪಿ ಉತ್ಸವ ಮಾಡಬೇಕೆಂದು ಕರ್ನಾಟಕ ಜನ‌ಕಲ್ಯಾಣ ರಕ್ಷಣಾ ವೇದಿಕೆ ನಗರದಲ್ಲಿ ಇಂದು ಪ್ರತಿಭಟನೆ ನಡೆಸಿ ಮುಖ್ಯ‌ ಮಂತ್ರಿಗಳಿಗೆ ಬರೆದ ಮನವಿ ಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿತು.
ನಗರದ ಅಂಡರ್ ಬ್ರಿಡ್ಜ್ ಬಳಿ‌ ಇರುವ ವೇದಿಕೆ ಕಚೇರಿಯಿಂದ ವೇದಿಕೆ ಅಧ್ಯಕ್ಷ ಜೆ.ಎಂ.ಬಸವರಾಜ್ ಸ್ವಾಮಿ‌ ನೇತೃತ್ವದಲ್ಲಿ ಪ್ರತಿಭಟನೆಯ‌ ಮೆರವಣಿಗೆ ಆರಂಭಿಸಿ ಗಡಗಿ ಚೆನ್ನಪ್ಪ ವೃತ್ತದ ಮೂಲಕ‌ ಜಿಲ್ಲಾಧಿಕಾರಿಗಳ‌ ಕಛೇರುಗೆ ಆಗಮಿಸಿತು.
ಮನವಿ ಸಲ್ಲಿಸಿ
ಕೇವಲ ಒಂದು ದಿನಕ್ಕೆ ಅದೂ ಬರೀ‌ಮೆರವಣಿಗೆ ಮತ್ತು ತುಂಗಾ ಆರತಿ ಮಾಎಇ ಹಂಪಿ ಉತ್ಸವ ಮಾಡುವುದು ಕನ್ನಡ ನಾಡಿಗೆ ಮಾಡುವ ಅವಮಾನವೇ ಸರಿ, ಹಂಪಿ ಉತ್ಸವವೆಂದರೆ ಅದು ನಾಡು, ನುಡಿ, ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಗೆ ಸಂಭಂಧಪಟ್ಟ ವಿಷಯ ಮಾತ್ರವಲ್ಲದೆ ಅದು ಕನ್ನಡಿಗರ ಆಸ್ಮಿತೆ ಮತ್ತು ಅಸ್ತಿತ್ವದ ಪ್ರಶ್ನೆಯಾಗಿದೆ. ಇಂತಹ ಉತ್ಸವವನ್ನು ಆಚರಿಸಲು ಈ ಭಾಗದ ಕಲಾವಿದರು ಪ್ರತಿವರ್ಷ ಕೂಡ ಹೋರಾಟದ ಮೂಲಕ ಸರ್ಕಾರವನ್ನು ಪರೊ‌ಪರಿಯಾಗಿ ಕೇಳಿಕೊಳ್ಳಬೇಕಾಗಿರುವುದು ಜಿಲ್ಲೆಯ ಕನ್ನಡಿಗರ ದಯನೀಯ ಸ್ಥಿತಿಯಾಗಿದೆ.
ಅದಕ್ಕಾಗಿ ಹಂಪಿ ಉತ್ಸವಕ್ಕೆಂದು ಪ್ರತಿ ವರ್ಷದ ಮುಂಗಡ ಪತ್ರದಲ್ಲಿ ಶಾಶ್ವತ ಅನುದಾನವನ್ನು ಒದಗಿಸಲು ಘೋಷಣೆ ಮಾಡಬೇಕು.
ಕೇವಲ ತುಂಗಾಭದ್ರಾ ಆರತಿ ಮಾಡಿ ಹಂಪಿ ಉತ್ಸವ ಎಂದು ಬಿಂಬಿಸುವುದು ಸರಿಯಲ್ಲ. ಜಾಗತಿಕ ಸೋಂಕಾದ ಕೋವಿಡ್ 19 ತಿಳಿಯಾದ ನಂತರ ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ವೇದಿಕೆಗಳನ್ನು ನಿರ್ಮಿಸಿ ಸ್ಥಳೀಯ ಕಲಾವಿದರಿಗೆ ಆಧ್ಯತೆ ನೀಡುವ ಮೂಲಕ ಎಲ್ಲಾ ರೀತಿಯ ಕಲಾವಿದರನ್ನು ಬಳಸಿಕೊಂಡು ಮೂರು ದಿನಗಳ ಉತ್ಸವ ನಡೆಸಲು ಕ್ರಮಕೈಗೊಳ್ಳಬೇಕೆಂದು ಮನವಿ ಮಾಡುತ್ತಿದೆ.
ಒಂದು ವೇಳೆ ತುಂಗಾರತಿಯನ್ನು ನಡೆಸಿ ಹಂಪಿ ಉತ್ಸವವೆಂದು ಬಿಂಬಿಸಲು ಹೊರಟರೆ ವೇದಿಕೆಯಿಂದ ಪ್ರತಿಭಟನೆ ಮಾಡಲಾಗುವುದೆಂದು ಮುಖ್ಯಂತ್ರಿಗಳಿಗೆ, ಮತ್ತು ಜಿಲ್ಲಾ ಉಸ್ತುವಾರಿ ಸಚಿವರಿಗೆ ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರು ಮತ್ತು‌ ಕಲಾವಿದರುಗಳಾದ ಹೆಚ್.ಕೆ.ಗೌರಿಶಂಕರಸ್ವಾಮಿ, ಕೋಳೂರು ಚಂದ್ರಶೇಖರ ಗೌಡ, ದಮ್ಮೂರು ರವಿ ಕುಮಾರ್, ದೊಡ್ಡಬಸಪ್ಪ, ಜೆ.ಎಂ.ಮಂಜುನಾಥ, ಜಿಲಾನಿಭಾಷ, ಸುಂಕಣ್ಷ, ಸಾಯಿ ರೂಪಾಲಿಕ, ಮಂಜುನಾಥ ಗೋವಿಂದವಾಡ ವಿಶ್ವನಾಥ್, ಹೆಚ್.ಎಂ.ಅಮರೇಶ್, ಈಶ್ವರ್, ನಾಗರಾಜಸ್ವಾಮಿ, ಕೆ.ಬಿ.ಈಶ್ವರ್, ಮೊದಲಾದವರು ಇದ್ದರು