ಹಂಪಿಯ ಸ್ಮಾರಕಗಳಿಗೆ ಬೇಕಿದೆ ರಕ್ಷಣೆ


ಸಂಜೆವಾಣಿ ಪ್ರತಿನಿಧಿಯಿಂದ
ಹೊಸಪೇಟೆ ಫೆ.26: ವಿಶ್ವವಿಖ್ಯಾತ ಹಂಪಿಯ ಐತಿಹಾಸಿಕ ಸ್ಮಾರಕ ಸಂರಕ್ಷಣೆಗೆ ಹಲವು ಇಲಾಖೆ ಇದ್ದರೂ ಸ್ಮಾರಕಗಳಿಗೆ  ರಕ್ಷಣೆ ಇಲ್ಲದಂತಾಗಿದೆ.
ಹೌದು!ಇತ್ತೀಚಿಗೆ ಹಂಪಿ ಸ್ಮಾರಕಗಳ ಬಳಿ ಪ್ರವಾಸಿಗರ ಮೋಜು, ಮಸ್ತಿಯಾಗುತ್ತಿರುವುದು ಒಂದಡೆಯಾದರೆ, ಅವುಗಳನ್ನು ಸ್ಪರ್ಶಿಸಿ ಹಾನಿ ಮಾಡುವಂತ ಘಟನೆಗಳು ಬೆಳಕಿಗೆ ಬಂದಿವೆ.
ಈಚೆಗೆ ಪುರಂದರ ಮಂಟಪದಲ್ಲಿ ವಿದೇಶಿ ಪ್ರಜೆಗಳು, ಮದ್ಯಪಾನ ಮಾಡಿ ಮೋಜು-ಮಸ್ತಿ ಮಾಡಿದರೆ, ಶುಕ್ರವಾರ ಹೇಮಕೂಟದ ಮಂಟಪಯೊಂದರ ಮೇಲೆ ಪ್ರವಾಸಿಗರು ಸ್ಮಾರಕದ ಮೇಲೇರಿ ಕುಣಿದು ಕುಪ್ಪಳಿಸಿದರೆ, ಶನಿವಾರ ವಿಜಯವಿಠಲ ದೇವಾಲಯದ ಪ್ರಾಂಗಣದಲ್ಲಿರುವ ಕಲ್ಲಿನ ತೇರು ಸ್ಮಾರಕದ ಸನಿಹದಲ್ಲಿ ಸುಳಿದಾಡಿ ಕೈಯಿಂದ ಮುಟ್ಟಿ ಅದಕ್ಕೆ ಹಾನಿ ಉಂಟು ಮಾಡುತ್ತಿರುವುದು ಕಂಡು ಬಂದಿದೆ.
ಕಲ್ಲಿನ ತೇರನ್ನು ಸನಿಹದಲ್ಲಿ ಸುಳಿದಾಡಿ ಅದಕ್ಕೆ ಹಾನಿ ಮಾಡಬಾರದಿರಲಿ ಎಂದು ಕೇಂದ್ರ ಪುರಾತತ್ವ ಸರ್ವೇಕಣಾ ಇಲಾಖೆ ಅದರ ಸುತ್ತಲು ಸರಪಳಿ ಸ್ಟಾಂಡ್ ನಿರ್ಮಿಸಿದೆ. ಜೊತೆಗೆ ಸಕ್ಯೂರಿಟ್‍ಗಳ ಕಣ್ಗಾವಲು ಇದ್ದರೂ ಪ್ರವಾಸಿಗರು ಮಾತ್ರ ರಾಜಾರೋಷವಾಗಿ ಸ್ಮಾರಕವನ್ನು ಮುಟ್ಟಿ ಹಾನಿ ಮಾಡುವಂತೆ ದೃಶ್ಯ ಕಂಡು ಬಂದಿದೆ. ಆಗಾದರೆ, ಭದ್ರತೆ ಸಿಬ್ಬಂದಿಗಳು ಇದ್ದರೂ ಕೂಡ ಸ್ಮಾರಕಗಳ ರಕ್ಷಣೆಯಾಗಿದಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ. ಹಂಪಿಯಲ್ಲಿ ನಡೆಯುವ ಪ್ರತಿಯೊಂದು ಅಭಿವೃದ್ಧಿ ಕಾರ್ಯಗಳಿಗೆ ನಿಯಮಗಳನ್ನು ಅಡ್ಡಿ ತರುವ ಎಎಸ್‍ಐ ಸ್ಮಾರಕ ರಕ್ಷಣೆ ಮಾಡುವಲ್ಲಿ ಸಂಪೂರ್ಣ ವಿಫಲವಾಗಿರುವುದು ವಿಪಾರ್ಯಸವಾಗಿದೆ.