ಹಂಪಿಯ ಜಿ.20 ಸಭೆಯಲ್ಲಿಸಾಂಸ್ಕೃತಿಕ  ಕ್ಷೇತ್ರವನ್ನು ವಿಶ್ವಕ್ಕೆ ಪರಿಚಯ


ಬಳ್ಳಾರಿ:ಜು,10- ಐತಿಹಾಸಿಕ ಹಂಪಿಯಲ್ಲಿ ಇಂದಿನಿಂದ ಜೂನ್ 12 ವರೆಗೆ ನಡೆಯುತ್ತಿರುವ  ಜಿ.20ಯ 3 ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯ ಹಿನ್ನಲೆಯಲ್ಲಿ
ಬಲಕ್ಳಾರಿ‌ ಜಿಲ್ಲೆಯ ತೋರಣಗಲ್ಲಿನ ಜಿಂದಾಲ್ ಸಭಾಂಗಣದಲ್ಲಿ ಸಂಸ್ಕೃತಿ ಇಲಾಖೆ  ಕಾರ್ಯದರ್ಶಿ ಗೋವಿಂದ  ಮೋಹನ್  ಮತ್ತು ಜಂಟಿ ಕಾರ್ಯದರ್ಶಿ ಲಿಲಿ ಪಾಂಡ್ಯ ಅವರು ಸುದ್ದಿಗೋಷ್ಟಿ ನಡೆಸಿದರು.
ಭುವನೇಶ್ವರ್ ದಲ್ಲಿ ನಡೆದ ಸಭೆಯಲ್ಲಿ 50 ಪ್ರತಿನಿಧಿಗಳು,  45 ಖಜರಾಹೋ ಪ್ರತಿನಿಧಿಗಳು  ಭಾಗವಹಿಸುವ ನಿರೀಕ್ಷೆ. ಇಲ್ಲಿ ಹಂಪಿಯಲ್ಲಿ 29 ದೇಶಗಳ  50 ಪ್ರತಿನಿಧಿಗಳ ಭಾಗವಹಿಸುವ ಸಾಧ್ಯತೆ ಇದೆ. 
ಮೊದಲೆಯನದಾಗಿ ಸ್ಮಾರಕಗಳ ಸಂರಕ್ಷಣೆಯದ್ದಾಗಿದೆ. ಯುಎಸ್ ಜೊತೆ ಈ ಬಗ್ಗೆ ಪ್ರಧಾನಿಯವರು ಇತ್ತೀಚೆಗೆ ಅಲ್ಲಿಗೆ ಭೇಟಿ ನೀಡಿದಾಗ ಚರ್ಚೆ ಮಾಡಿದ್ದಾರೆ. ಅದೇರೀತಿ ಇತರೇ ದೇಶಗಳೊಂದಿಗೂ ನಡೆಯಲಿದೆ.‌
ಎರೆಡನೆಯದಾಗಿ ಪಾರಂಪರಿಕತೆಯನ್ನು  ಮುಂದಿನ‌ ಪೀಳಿಗೆಗೆ ಪರಿಚಯಿಸುವುದು ಮುಖ್ಯವಾಗಿದೆ. ಈ ನಿಟ್ಟಿನಲ್ಲಿ   ಆಯುರ್ವೇದ ಚಿಕಿತ್ಸೆಯ ಜ್ಞಾನವನ್ನು ವಿಸ್ತರಿಸುವುದಾಗಿದೆ.
ಪ್ರವಾಸೋದ್ಯಮದ ಅಭಿವೃದ್ಧಿಯನ್ನು ತಾಂತ್ರಿಕತೆಯ ಮೂಲಕ ನಡೆಸುವುದಾಗಿದೆ.  ಸಾಂಸ್ಕೃತಿಕ ಸ್ಥಳಗಳು, ಆಚರಣೆಗಳು,  ಲಂಬಾಣಿ  ಸೇರಿದಂತೆ  ಮೊದಲಾದ ಕಲೆಗಳನ್ನು ವಿಶ್ವ ಮಾರುಕಟ್ಟೆಗೆ ಪರಿಚಯಿಸಲಿದೆ.
ಅಷ್ಟೇ ಅಲ್ಲ ಈಗಿನ ಡಿಜಟಲೈಜೇಷನ್  ಮೂಲಕ ಇಲ್ಲಿನ ಸಾಂಸ್ಕೃತಿಕ ಸಂಪತ್ತನ್ನು ವಿಶ್ವಕ್ಕೆ ಪರಿಚಯಿಸುವ ಮೂಲಕ ದೇಶದ ಆರ್ಥಿಕ ಅಭಿವೃದ್ಧಿ ಮಾಡುವ ಉದ್ದೇಶವನ್ನೂ ಈ ಸಮಾವೇಶದಲ್ಲಿ ನಡೆಸುವುದಾಗಿದೆ.
ವಿಶ್ವ ಪರಂಪರೆಯ ತಾಣ ಹಂಪಿ ಶಿಲ್ಪ ಸ್ಮಾರಕಗಳ ಕಲಾ ಗ್ಯಾಲರಿಯಾಗಿದೆ  ಇಲ್ಲಿ ಜವಳಿ,  ಲಂಬಾಣಿ ಕಲೆ ಸೇರಿದಂತೆ ವಿವಿಧ ಉತ್ಪನ್ನಗಳ  ಪ್ರದರ್ಶನ ನಡೆಯಲಿದೆಂದರು.
ವಾರಣಾಸಿಯಲ್ಲಿ ಆಗಷ್ಟ್ 26 ರಿಂದ ನಾಲ್ಕನೇ ಸಭೆ ನಡೆಯಲಿದೆ. ಮುಂಬರುವ ಜಾಗತಿಕ  ಸಾಂಸ್ಕೃತಿಕ ಜಗತ್ತಿನಲ್ಲಿ ಭಾರತದ ಪ್ರತಿನಿಧಿತ್ವ ಮಹತ್ವದ್ದಾಗಿರಲಿದೆ.
ಜಿಡಿಪಿಯಲ್ಲಿ
ಸಾಂಸ್ಕೃತಿಕ ವಲಯದಲ್ಲಿನ  ಆರ್ಥಿಕ ಪ್ರಬಲತೆ  ಹೆಚ್ಚುವ ನಿಟ್ಟಿನಲ್ಲಿ. ಸಾಂಪ್ರದಾಯಿಕವಾದ   ಸಂಡೂರು ಕಲಾಕೇಂದ್ರದ ಲಂಬಾಣಿ ಕಲೆಯನ್ನು ಹಂಪಿಯ 
ಎದಿರು ಬಸವಣ್ಣ ಸಂಕೀರ್ಣದಲ್ಲಿ ಪ್ರದರ್ಶಿಸುತ್ತಿದೆ. ಈ ಕಲೆ ಮಹಿಳೆಯರನ್ನು ಸಬಲರನ್ನಾಗಿ ಮಾಡುವುದಾಗಿದೆ. ಅವರ ಜೀವನನಿರ್ವಹಣೆಯನ್ನು ಸುಧಾರಿಸುವುದಾಗಿದೆ.
ದೇಶದಲ್ಲಿ ಸಾಂಸ್ಕೃತಿಕ, ಸಾಂಪ್ರದಾಯಿಕ ಕಲೆಗಳು ಸಂರಕ್ಷಣೆ ಜೊತೆಗೆ ಔದ್ಯಮಿಕ ವಾಗಿ ಬೆಳವಣಿಗೆಗೆ ಪ್ರಯತ್ನಿಸಲಿದೆ. ಜಿ.20 ದೇಶಗಳಷ್ಟೇ ಅಲ್ಲದೆ ಪ್ರಾನ್ಸ್, ಇಟಲಿ, ಆಸ್ಟ್ರೇಲಿಯಾ ಮೊದಲಾದ ದೇಶಗಳಿಂದಲೂ ಸಾಂಸ್ಕೃತಿಕ ಕ್ಷೇತ್ರದ ಅಭಿವೃದ್ಧಿ ವಿನಮಯದ ಪ್ರಕ್ರಿಯೆ ನಡೆಯುತ್ತದೆಂದರು.
ವಿಜಯನಗರ ಸಾಮ್ರಾಜ್ಯದ ಅವಧಿಯಲ್ಲಿಯೇ ವಿಶ್ವದ ಇತರ ರಾಷ್ಟ್ರಗಳೊಂದಿಗೆ ಹಂಪಿ ರಾಜಧಾನಿಯಾಗಿ ಸಂಪರ್ಕ ಹೊಂದಿತ್ತು. ಅದನ್ನು ಪರಿಗಣಿಸಿ  ಈಗ ಇಲ್ಲಿ ಜಿ.20 ಸಭೆ ಹಮ್ಮಿಕೊಂಡಿದೆ.
ಖ್ಯಾತ ಕಲಾವಿದರಿಂದ ಸಂಗೀತ, ನೃತ್ಯದ ಕಾರ್ಯಕ್ರಮಗಳ ಪ್ರದರ್ಶನವೂ ಇದೆ   ಎಂದು ತಿಳಿಸಿದರು.
ಕೋವಿಡ್ ಆರ್ಥಿಕ ಸಂಕಷ್ಟದ  ನಂತರ ಪ್ರವಾಸೋದ್ಯಮದಲ್ಲಿನ ಅರ್ಥಿಕ‌ ಕುಸಿತವನ್ನು ಪರಿಗಣಿಸಿ. ಸಾಂಸ್ಕೃತಿಕ ವಲಯದ ಆರ್ಥಿಕ  ಹೂಡಿಕೆಗೆ ಆಕರ್ಷಣೆಯ ಕೆಲಸ ಜಿ.20 ಸಭೆಗಳ ಮೂಲಕ ನಡೆಸುತ್ತಿದೆಂದರು‌