ಹಂಪಿಯಿಂದ ರಾಮಸಾಗರದವರೆಗೆ ಭುವನೇಶ್ವರಿ ಜ್ಯೋತಿ

ಕಂಪ್ಲಿ, ನ.9: ಕರೊನಾ ಮುಕ್ತ ದೇಶವಾಗಲೆಂದು ಸಂಕಲ್ಪಿಸಿ ಕಂಪ್ಲಿ ಕ್ಷೇತ್ರದ ನವ ಕರ್ನಾಟಕ ಯುವಶಕ್ತಿ ಘಟಕದ ಪದಾಧಿಕಾರಿಗಳು ಭಾನುವಾರ ಹಂಪಿಯಿಂದ ರಾಮಸಾಗರದ ಗ್ರಾಮದವರೆಗೆ ಭುವನೇಶ್ವರಿ ಜ್ಯೋತಿಯನ್ನು ತಂದರು.
ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಬಂಡೆ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ನವ ಕರ್ನಾಟಕ ಯುವಶಕ್ತಿ ಕ್ಷೇತ್ರ ಅಧ್ಯಕ್ಷ ಬುರೆ ವಿರುಪಾಕ್ಷಿ ಯಾದವ, ಪದಾಧಿಕಾರಿಗಳಾದ ಎಸ್.ಗೋಪಾಲಪ್ಪ, ಶಿವಕುಮಾರ್, ವೆಂಕಟೇಶ್, ರಾಮಸಾಗರ ಅಧ್ಯಕ್ಷ ಜಗದೀಶ, ಪದಾಧಿಕಾರಿಗಳಾದ ಶಿವಪ್ಪ, ಯು.ಹೊನ್ನೂರಸ್ವಾಮಿ, ಗಾರೆ ಮಂಜುನಾಥ, ಗೌರೀಶ್, ದೊಡ್ಡ ಬಸಪ್ಪ, ಕಂಟೆಪ್ಪ ಸೇರಿ ಅನೇಕರಿದ್ದರು.