ಹಂಪಿಯಲ್ಲಿ ವಿಜಯನಗರ ಸಂಸ್ಥಾಪನಾ ದಿನ

ಬಳ್ಳಾರಿ, ಏ.18: ಹಾಲುಮತ ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನ ಬಳ್ಳಾರಿ ಹಾಗೂ ಶ್ರೀ ಕನಕದಾಸ ಯುವಕ ಸಂಘದ ನೇತೃತ್ವದಲ್ಲಿ ಕುಡತಿನಿಯಿಂದ ಹಂಪಿಗೆ ಬೈಕ್ ರ್ಯಾಲಿ ಯೊಂದಿಗೆ ವಿರೂಪಾಕ್ಷ ದೇವಾಲಯದಲ್ಲಿ ಪೂಜೆ ಸಲ್ಲಿಸಿ ವಿಶ್ವ ವಿಖ್ಯಾತ ವಿಜಯನಗರ ಸಾಮ್ರಾಜ್ಯ ಸಂಸ್ಥಾಪನಾ ದಿನದ ವಿಜಯೋತ್ಸವ ಆಚರಣೆ ಮಾಡಲಾಯಿತು,
ನಂತರ ಕುಡತಿನಿ ಪಟ್ಟಣದ ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನ ಹತ್ತಿರದ ವೀರ ಯೋಧರ ವೇದಿಕೆಯಲ್ಲಿ ಹಕ್ಕಬುಕ್ಕರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಟಿ.ಕೆ.ಕಾಮೇಶ ಮಾತನಾಡಿ ಮೊಗಲರ ದಬ್ಬಾಳಿಕೆಯನ್ನು ಕೊನೆಗೊಸಿ ವಿಜಯನಗರದ ಹಿಂದೂ ಸಾಮ್ರಾಜ್ಯ ಸ್ಥಾಪಿಸಿದ ವೀರ ಕನ್ನಡಿಗರ ಶೌರ್ಯ, ಸಹಾಸ, ವಿಶ್ವದಲ್ಲೇ ಮರೆಯಲಾಗದ ಗತವೈಭವವನ್ನು ಸ್ಮರಿಸಿದರು, ಸರ್ಕಾರ ಪ್ರತಿ ವರ್ಷ ಹಂಪಿ ಉತ್ಸವವನ್ನು ಏಪ್ರಿಲ್-18 ರಂದು ಐತಿಹಾಸಿಕ ವಿಜಯನಗರ ಸಾಮ್ರಾಜ್ಯದ ಗತವೈಭವದ ಸ್ಥಾಪಕರ ಆಚರಣೆ ಮಾಡಲು ಒತ್ತಾಯಿಸಿದರು, ಹಕ್ಕಬುಕ್ಕ ಸಂಸ್ಕೃತಿ ಪ್ರತಿಷ್ಠಾನದ ಅಧ್ಯಕ್ಷ
ಬಿ.ಪೋಲಪ್ಪ, ಖಜಾಂಚಿ ಡಿ.ಗಂಗಾಧರ, ಸದಸ್ಯರಾದ ರುದ್ರಪ್ಪ, ಪಿ. ಹನುಮಪ್ಪ ಹಾಗೂ ಕನಕದಾಸ ಯುವಕ ಸಂಘ ಕುಡತಿನಿ ಅಧ್ಯಕ್ಷರಾದ ಬಿ. ಲೋಕೇಶ್, ಪ್ರಧಾನಕಾರ್ಯದರ್ಶಿ ಕೆ.ಎಂ.ನಾಗರಾಜ, ಖಜಾಂಚಿ ಎಂ.ಮಂಜುನಾಥ, ಸಂತೋಷ ಕುಮಾರ್, ಮುಖಂಡರಾದ ಬನ್ನೆಟ್ಟಿ ಮಂಜುನಾಥ, ಬಿ.ಹನುಮಂತ, ಶ್ರೀಕಾಂತ್, ಜೆ.ಮಲ್ಲಿಕಾರ್ಜುನ, ಸುರೇಶ್, ಗೊಸಬಾಳ್ ಸಿದ್ದೇಶ್ವರ, ಮಣಿಕಂಠ, ಈರಲಿಂಗ, ನಾಗರಾಜ ಮೂರುಣ್ಣಿ, ಡೊಮ್ಮೆ ಮಂಜು, ಬಿ. ವಿಜಯ್, ವಸಿಗೇರಪ್ಪ, ನಾಗದೇವ, ಸಿ.ಡಿ.ಮಂಜು, ಎಂ.ಶಂಕರ್, ಶರಣಬಸವ, ಮಲೆಪ್ಪ ಇತರರು ಭಾಗವಹಿಸಿದ್ದರು.