ಹಂಪಿಯಲ್ಲಿ ಟಿಟಿ ವಾಹನ ಪಲ್ಟಿ:ಇಬ್ಬರಿಗೆ ಗಾಯ


ಸಂಜೆವಾಣಿ ವಾರ್ತೆ
ಹೊಸಪೇಟೆ ಜ3: ಹಂಪಿ ಹೇಮಕೂಟದ ರಸ್ತೆಯಲ್ಲಿ ಪ್ರವಾಸಿಗರನ್ನು ಹೊತ್ತು ಸಾಗುತ್ತಿದ್ದ ಟಿಂಪೋ ಟ್ರಾವೆಲರ್ ವಾಹನದ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದ ಘಟನೆ ನಡೆದಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.
ಹಂಪಿ ಪ್ರವಾಸದಲ್ಲಿದ್ದ ರಾಯಚೂರು ಮೂಲದ ಪ್ರವಾಸಿಗರು, ಟಿಂಪೋ ಟ್ರಾವೆಲರ್ ವಾಹನದಲ್ಲಿ ಹೇಮಕೂಟದ ರಸ್ತೆಯ ಏರಿಯಲ್ಲಿ ಸಾಗುವ ಸಂದರ್ಭದಲ್ಲಿ ಚಾಲಕ ನಿಯಂತ್ರಣಕ್ಕೆ ಬಾರದೇ ಹಿಂಬದಿಯಲ್ಲಿ ಸಾಗಿ ಉರುಳಿ ಬಿದ್ದಿದ್ದು, ಘಟನೆಯಲ್ಲಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯರು ಕೂಡಲೇ ಸಮೀಪದ ಆಸ್ಪತ್ರೆಗೆ ಸಾಗಿಸಿ ನೆರವಾದರು. ಹಂಪಿ ಪ್ರವಾಸಿ ಠಾಣೆ ಹಾಗೂ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.