ಬಳ್ಳಾರಿ: ವಿಶ್ವ ಪರಂಪರೆಯ ತಾಣ ಹಂಪಿಯಲ್ಲಿ ನಡೆದಿರುವ ಜಿ 20 ದೇಶಗಳ 3 ನೇ ಸಾಂಸ್ಕೃತಿಕ ಕಾರ್ಯಕಾರಿ ಗುಂಪಿನ ಸಭೆಯಲ್ಲಿ ಲಂಬಾಣಿ ಕಲೆ ಮತ್ತು ನೃತ್ಯದ ಘಮಲು ಮೆರಗನ್ನು ತಂದಿದೆ.
ತಳ ಸಮುದಾಯದ ಲಂಬಾಣಿ ಜನತೆ ತಮ್ಮ ದಿನ ನಿತ್ಯದ ಬದುಕಿನಲ್ಲಿ ಹಾಸುಹೊಕ್ಕಾದ ಸಂಸ್ಕೃತಿಯ ಭಾಗವಾದ ಕಸೂತಿ ಕಲೆ ಮತ್ತು ನೃತ್ಯ ಪ್ರದರ್ಶನವನ್ನು ಇಲ್ಲಿಗೆ ಆಗಮಿಸಿದ ವಿವಿಧ ದೇಶಗಳ ಗಣ್ಯರ ಮುಂದೆ ಪ್ರದರ್ಶಿಸಿ ತಮ್ಮ ಕಲಾ ಕೌಶಲ್ಯ ಮೆರೆದರು.

ಸಂಡೂರಿನ ಕರ ಕುಶಲ ಕೇಂದ್ರದಲ್ಲಿ ಕಾರಗಯನಿರ್ವಹಿಸಿದ ವಿವಿಧ ತಾಂಡಗಳ 450 ಕ್ಕೂ ಹೆಚ್ಚು ಮಹಿಳೆಯರು ಸಿದ್ದಪಡಿಸಿದ 1300 ಕಸೂತಿ ಪಟ್ಟಿಗಳ ಪ್ರದರ್ಶನವೂ ಏರ್ಪಡಿಸಿತ್ತು. ಈ ಬೃಹತ್ ಮಟ್ಟದ ಪ್ರದರ್ಶನ ಗಿನ್ನೀಸ್ ರೆಕಾರ್ಡಿಗೆ ಸೇರಿತು.